Header Ads
Breaking News

ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ‘ಮೆಕ್ ಎರಾ -19-ಮೆಕ್ಸ್‌ಟೋರ್ಮ್’ ವಾರ್ಷಿಕ ಮೆಕ್ಯಾನಿಕಲ್ ಹಬ್ಬ ಆರಂಭ

ಉಳ್ಳಾಲ: ದೇರಳಕಟ್ಟೆಯ ಫಾದರ್ ಮುಲರ್ಸ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ವಿಶ್ವ ಹೋಮಿಯೋಪತಿ-2019 ದಿನ ಪ್ರಯುಕ್ತ ಕಾಲ್ನಡಿಗೆ ಜಾಥಾ ಮತ್ತು ಬೀದಿನಾಟಕ ದೇರಳಕಟ್ಟೆ ಮತ್ತು ತೊಕ್ಕೊಟ್ಟು ಬಸ್ಸು ನಿಲ್ದಾಣಗಳಲ್ಲಿ ನಡೆಯಿತು.

ಜಾಥಾ ನೇತೃತ್ವ ವಹಿಸಿದ್ದ, ಸಮಾಜ ಸೇವಕ ವಿವೇಕ್ ಫೆರ್ನಾಂಡಿಸ್ ಮಾತನಾಡಿ ಆಗಸ್ಟಸ್ ಫಾದರ್ ಮುಲ್ಲರ್ ಸ್ಥಾಪಿಸಿದಂತಹ ಹೋಮಿಯೋಪತಿ ಔಷಧಿ ಪದ್ಧತಿಯನ್ನು 100 ವರ್ಷಗಳ ಇತಿಹಾಸವಿರುವ ಫಾದರ್ ಮುಲ್ಲರ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಮತ್ತು ದೇರಳಕಟ್ಟೆ ಭಾಗದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಸ್ಥಾಪಿಸಿದೆ ಎಂದ್ರು..

ಇನ್ನು ವೈದ್ಯಕೀಯ ಕಾಲೇಜು ದ್ವಿತೀಯ ವರ್ಷದ ವಿದ್ಯಾರ್ಥಿನಿ ದೀಕ್ಷಾ ಮಾತನಾಡಿ, ಹೋಮಿಯೋಪತಿಯನ್ನು ಕಡೆಗಣಿಸುತ್ತಿದ್ದಾರೆ. ಅಡ್ಡಪರಿಣಾಮವಿಲ್ಲದೆ ಚಿಕಿತ್ಸೆ ಪಡೆಯುವ ವಿಧಾನ ಹೋಮಿಯೋಪತಿಯಾಗಿದೆ. ಇದನ್ನು ಜನರಿಗೆ ತಿಳಿಸುವ ಪ್ರಯತ್ನ ಜಾಥಾ ಮೂಲಕ ನಡೆಸಲಾಗಿದೆ ಎಂದರು.

ಇನ್ನು ವಿದ್ಯಾರ್ಥಿ ಜಗ್ಗೇಶ್ ಮಾತನಾಡಿ ಶಸ್ತ್ರಚಿಕಿತ್ಸಾ ವಿಭಾಗ, ಮಕ್ಕಳ ವಿಭಾಗ, ವೈದ್ಯಕೀಯ ವಿಭಾಗ, ಪ್ರಮುಖವಾಗಿ ಸ್ತ್ರೀಯರ ರೋಗಕ್ಕೆ ಹೋಮಿಯೋಪತಿ ಅತ್ಯಂತ ಉಪಕಾರಕ. ಎಲ್ಲರೂ ಹೋಮಿಯೋಪತಿ ಔಷಧಿಯತ್ತ ಬರಬೇಕೆಂಬ ಉದ್ದೇಶದಿಂದ ನಡೆಸಿರುವ ಕಾರ್ಯಕ್ರಮ ಯಶಸ್ವಿಯಾಗಿದೆ. ಜನರಲ್ಲಿ ಜಾಗೃತಿ ಮೂಡಿಸಿರುವ ಕಾರ್ಯವೂ ಆಗಿದೆ ಎಂದ್ರು.ಈ ಸಂದರ್ಭ ಫಾದರ್ ಮುಲ್ಲರ್ಸ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕ ಫಾ.ರಿಚರ್ಡ್ ಕುವೆಲ್ಲೋ, ಆಡಳಿತಾಧಿಕಾರಿ ಫಾ.ವಿನ್ಸೆಂಟ್ ವಿನೋದ್ ಸ್ಟಾಲಿನ್ , ಸಮುದಾಯ ವಿಭಾಗದ ಮುಖ್ಯಸ್ಥ ಡಾ.ಸ್ಟಾಲಿನ್, ಎನ್.ಎಸ್.ಎಸ್ ಸಂಯೋಜಕ ಡಾ.ಸೆಬಾಸ್ತಿಯನ್, ಪ್ರೊ.ರಂಜನ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *