Header Ads
Header Ads
Header Ads
Breaking News

“ಆಳ್ವಾಸ್ ವರ್ಣ ವಿರಾಸತ್” ಚಿತ್ರಣ:ಕಲಾವಿದರ ಕುಂಚದಿಂದ ಅರಳಿದ ಕಲಾಕೃತಿಗಳು

ಮೂಡುಬಿದಿರೆ : ಜಗತ್ತಿನಲ್ಲಿ ಅನೇಕ ಸಂಸ್ಕೃತಿ, ಸಂಪ್ರದಾಯದ ಆಚರಣೆಗಳಿವೆ. ನಮ್ಮ ಸುತ್ತಮುತ್ತ ಉತ್ತಮ ಪರಿಸರವಿದೆ. ಪ್ರತಿಯೊಬ್ಬರ ಜೀವನದಲ್ಲೂ ನೋವು-ನಲಿವುಗಳಿವೆ ಅದನ್ನು ಕಲಾವಿದರು ತಮ್ಮ ಕುಂಚದ ಮೂಲಕ ಅರಳಿಸಿದಾಗ ಅದಕ್ಕೊಂದು ಅರ್ಥ ಸಿಗುತ್ತದೆ ಎಂಬುದನ್ನು ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಚಿತ್ರಕಲಾ ಶಿಬಿರ “ಆಳ್ವಾಸ್ ವರ್ಣ ವಿರಾಸತ್”ನಲ್ಲಿ ಕಲಾವಿದರು ತಮ್ಮ ಕುಂಚದಿಂದ ಅರಳಿಸಿದ ಕಲಾಕೃತಿಯ ಮೂಲಕ ತೋರಿಸಿಕೊಡುತ್ತಿದ್ದಾರೆ.

ಆಳ್ವಾಸ್ ಸಂಸ್ಥೆಯು ಕಳೆದ ಕೆಲವು ವರ್ಷಗಳಿಂದ ರಾಜ್ಯ ಮಟ್ಟದ ಆಳ್ವಾಸ್ ನುಡಿಸಿರಿ ಮತ್ತು ರಾಷ್ಟ್ರ ಮಟ್ಟದ ಆಳ್ವಾಸ್ ವಿರಾಸತ್‌ಗೆ ಪೂರಕವಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಚಿತ್ರಕಲಾ ಶಿಬಿರಗಳನ್ನು ಆಯೋಜಿಸುತ್ತಾ ಬರುತ್ತಿದೆ. ಆರು ದಿನಗಳ ಕಾಲ ವಿದ್ಯಾಗಿರಿಯಲ್ಲಿ ಚಿತ್ರಕಲಾ ಶಿಬಿರವನ್ನು ಆಯೋಜಿಸಿದ್ದು ಜ.೯ರಂದು ಶಿಬಿರವು ಆರಂಭಗೊಂಡಿದ್ದು ೫ ದಿನಗಳಲ್ಲಿ ಉತ್ತಮ ರೀತಿಯ ಕಲಾಕೃತಿ ರೂಪುಗೊಳ್ಳುತ್ತಿವೆ.
ತಮಿಳುನಾಡಿನ ರಫೀಕ್ ಅಹಮ್ಮದ್ ಎಂ.ಜಿ ಅವರು ಬೆಳಕು ಮತ್ತು ಬಣ್ಣ ಸಂಯೋಜಿಸಿ ಕೊಲಾಜ್ ಆಧಾರಿತ ಪ್ರಕೃತಿಯ ಚಿತ್ರವನ್ನು ಕುಂಚದಿಂದ ಅರಳಿಸುತ್ತಿದ್ದಾರೆ. ರಫೀಕ್ ಅವರು ಸೌತ್ ಆಫ್ರಿಕಾ, ಆಸ್ಟ್ರೇಲಿಯಾ, ಮಲೇಶಿಯಾ ಮೊದಲಾದ ದೇಶಗಳಲ್ಲಿ ತನ್ನ ಕಲಾಕೃತಿಗಳನ್ನು ರಚಿಸಿದ್ದಾರೆ. ಜಾಕ್ಸ್ ಕೊಲಾಜ್ ಅಮೇರಿಕಾದ ಚಿತ್ರಕಾರರು ಅವರ ಫೌಂಡೇಶನ್‌ನಿಂದ 15,೦೦೦ ಡಾಲರ್ ಸಿಕ್ಕಿದೆ.ಈಗಾಗಲೇ ಇವರಿಗೆ ಅನೇಕ ರಾಷ್ಟ್ರಮಟ್ಟದ ಪ್ರಶಸ್ತಿಗಳು ಲಭಿಸಿವೆ.

ಪುಣೆಯ ರಾಮಚಂದ್ರ-ವರ್ಷಾ ದಂಪತಿ ಮೊದಲ ಬಾರಿಗೆ ಈ ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಿ ಮಹಿಳಾ ಚಿತ್ರಣವನ್ನು ಆಯ್ಕೆ ಮಾಡಿಕೊಂಡು ಕಲಾಕೃತಿಗಳನ್ನು ರಚಿಸಿದ್ದಾರೆ. ಕಳೆದ 14 ವರ್ಷಗಳಿಂದ ಚಿತ್ರಕಲಾವಿದನಾಗಿ ಹಲವಾರು ಕಲಾಕೃತಿಗಳನ್ನು ತಮಮ ಕುಂಚದ ಮೂಲಕ ಅರಳಿದ್ದಾರೆ. ರಾಮಚಂದ್ರ ಅವರ ಪತ್ನಿಯಾಗಿರುವ ವರ್ಷಾ ಅವರು ಕೂಡಾ ಈ ಶಿಬಿರದಲ್ಲಿ ಪಾಲ್ಗೊಂಡಿದ್ದು ಅವರು ಭಾರತೀಯ ಶೈಲಿಯ ಚಿತ್ರಗಳಲ್ಲಿ ಎಲ್ಲಾ ರೀತಿಯ ಭಾವನೆಗಳನ್ನು ತುಂಬಿ ಚಿತ್ರಿಸಿದ್ದಾರೆ. ವಿಶೇಷವೆಂದರೆ ವರ್ಷಾ ಅವರಿಗೆ ಮಾತುಗಳನ್ನಾಡಲು ಬರಲ್ಲ ಮತ್ತು ಕಿವಿಯೂ ಕೇಳಿಸಲ್ಲ ಆದರೂ ಕುಂಚದ ಮೂಲಕ ಚಿತ್ರಗಳನ್ನು ಅರಳಿಸಿ ಭಾವನೆಗಳನ್ನು ತುಂಬಿಸಿದ್ದಾರೆ.

ಹವ್ಯಾಸಿ ಕಲಾವಿದನಾಗಿರುವ ಜಮ್ಮು ಕಾಶ್ಮೀರದ ಕಮಲ್ ಕೆ.ಗಾಂಧಿ ಅವರು ಪ್ರಕೃತಿಯ ಚಿತ್ರವನ್ನು ಅತ್ಯಂತ ಆಕರ್ಷಕವಾಗಿ ತನ್ನ ಕುಂಚದಲ್ಲಿ ಅರಳಿಸಿದ್ದಾರೆ. ಜಿಲ್ಲೆಗೆ ಮೊದಲ ಬಾರಿಗೆ ಬಂದಿರುವ ಅವರು ಶಿಕ್ಷಣ ಸಂಸ್ಥೆಯೊಂದು ನಾನಾ ವಿಧದ ಕಲಾ ವಿಭಾಗಗಳನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಗೆ ಪ್ರೋತ್ಸಾಹ ನೀಡುತ್ತಿರುವುದು ಕಂಡು ಬೆರಗಾಗಿದ್ದೇನೆ. ರಾಷ್ಟ್ರದ ಹಲವು ಕಲಾವಿದರನ್ನು ಒಂದೇ ಕಡೆಯಲ್ಲಿ ಸೇರಿಸಿ ಅನೇಕ ಕಲಾವಿದರ ಕಲಾಕೃತಿಗಳು ಆಳ್ವಾಸ್ ಸಂಸ್ಥೆಯಲ್ಲಿ ಸಂಗ್ರಹವಾಗಿರುವ ನಮ್ಮಂತಹ ಕಲಾವಿದರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಕಮಲ್ ಗಾಂಧಿ ಸಂತಸ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಲಲಿತ ಅಕಾಡೆಮಿಯ ಸದಸ್ಯ ಚಿಕ್ಕಮಠ್ “ಅಂತರ್ ವೃಷ್ಠಿ” ಶೀರ್ಷಿಕೆಯಲ್ಲಿ ಭಾವನೆಗಳನ್ನು ತನ್ನೊಳಗೆ ಹತ್ತಿಕ್ಕುವ ಮನಸ್ಥಿಯನ್ನು ಬಿಂಬಿಸುವ ಕಲಾಕೃತಿಗಳನ್ನು ಬಿಂಬಿಸಿದ್ದಾರೆ.

ಉತ್ತರ ಪ್ರದೇಶದ ಯುವ ಕಲಾವಿದ ಸುನಿಲ್ ಕುಮಾರ್ ಯಾದವ್ ಗುಡಿ ಕೈಗಾರಿಕೆ, ಮಣ್ಣಿನ ಮನೆಯಲ್ಲಿ ಎದುರಾಗುವ ಬದುಕಿನ ಸವಾಲುಗಳ ಬಗ್ಗೆ, ಮಧ್ಯಪ್ರದೇಶದ ಅಂಶು ಪಾಂಚಾಲಿ ಮಹಿಳಾ ಸಬಲೀಕರಣದ ಸರಣಿ ಚಿತ್ರಗಳು, ಕೇರಳದ ಕಲಾವಿದ ಶ್ರೀರಾಜ್ “ರಾಧಾಕೃಷ್ಣೆ”ಯರ ಸರಣಿ ಚಿತ್ರಗಳನ್ನು ಕ್ಯಾನ್ವಾಸ್‌ನಲ್ಲಿ ಅನಾವರಣಗೊಳಿಸಿದ್ದಾರೆ. ಪಾಂಡಿಚೇರಿಯ ಕಲಾವಿದ ಅನ್‌ಬೆಳಗಲ್ ಗ್ರಾಮೀಣ ಜನಜೀವನ ಹಾಗೂ ಜನಪದ ಆಲಂಕಾರಿಕ ಶೈಲಿಯ ಸರಣಿ ಚಿತ್ರಗಳನ್ನು ರಚಿಸುವ ಕಲಾವಿದನಾಗಿದ್ದು ಇಲ್ಲಿ ವಯೋಲಿನ್ ನುಡಿಸುವ ಕಲಾವಿದೆಯ ಚಿತ್ರವನ್ನು ಬಿಡಿಸಿದ್ದಾರೆ. ಮೈಸೂರಿನ ಜಯದೇವಣ್ಣ ಅವರು ಟಾಯ್ಸ್‌ಗಳ ಚಿತ್ರಗಳನ್ನು ಬಿಡಿಸಿದ್ದಾರೆ. ಮಣಿಪುರಸ ಲೈಸರಂ ಮೀನಾದೇವಿ ಅವರು ಮಣಿಪುರದ ಮಹಿಳೆಯರನ್ನು ಚಿತ್ರಿಸಿದ್ದಾರೆ. ಇದಲ್ಲದೆ ಕಳೆದ ಕೆಲವು ವರ್ಣ ವಿರಾಸತ್‌ನಲ್ಲಿ ಭಾಗವಹಿಸಿರುವ ಮುಂಬೈಯ ಕಲಾವಿದ ದೇವದಾಸ ಶೆಟ್ಟಿ ಅವರು ಅಕ್ಷರ ಮಾಲಿಕೆಯನ್ನು ಹಿಡಿದು ದೇವರ ಚಿಹ್ನೆಗಳನ್ನು ಮಾಡಲಾಗಿದೆ.ಇದಕ್ಕೆ ಜಾನಪದ ಟಚ್ಚಿಂಗ್ ನೀಡುವ ಮೂಲಕ ಜಾನಪದ ಕಲೆಯನ್ನು ಉಳಿಸುವ ಪ್ರಯತ್ನವನ್ನು ಚಿತ್ರಗಳ ಮೂಲಕ ಮಾಡಿದ್ದಾರೆ.
ವರದಿ: ಪ್ರೇಮಶ್ರೀ ಮೂಡಬಿದರೆ

Related posts

Leave a Reply