Header Ads
Header Ads
Header Ads
Breaking News

ಆಳ್ವಾಸ್ ವಿರಾಸತ್ -ಶಂಕರ್-ಎಹಸಾನ್-ಲೋಯ್ ಸಂಗೀತ ರಸಸಂಜೆ

ಮೂಡುಬಿದಿರೆ : ರಾಷ್ಟ್ರೀಯ ಸಾಂಸ್ಕೃತಿ ಉತ್ಸವ 24 ನೇ ವರ್ಷದ ಆಳ್ವಾಸ್ ವಿರಾಸತ್‌ನ ಎರಡನೇ ದಿನವಾಗಿರುವ ಶನಿವಾರದಂದು ಮೊದಲ ಕಾರ್ಯಕ್ರಮವಾಗಿ ಹಿಂದಿ ಚಿತ್ರರಂಗದ ಪ್ರಖ್ಯಾತ ಸಂಗೀತ ನಿದೇರ್ಶಕರು ಮತ್ತು ಹಿನ್ನಲೆ ಗಾಯಕರು ಶಂಕರ್ ಮಹಾದೇವನ್-ಎಹಸಾನ್-ಲೋಯ್, ಸಿದ್ಧಾರ್ಥ ಮಹಾದೇವನ್ ಮತ್ತು ಬಳಗ ಮುಂಬೈ ಇವರುಗಳಿಂದ ಪ್ರಸ್ತುತಗೊಂಡ “ಸುಮಧುರ ಸಂಗೀತ”ವು ಸೇರಿರುವ ಸಂಗೀತ ರಸಿಕರನ್ನು ಮುದಗೊಳಿಸಿತು.

ಕನ್ನಡ ಚಲನಚಿತ್ರಗಳಾದ “ಮುಕುಂದ ಮುರಾರಿ” ಸಿನೆಮಾದ “ನೀನೆ ರಾಮಾ..ನೀನೆ ಶ್ಯಾಮ” ಸಾರಥಿ ಚಿತ್ರದ “ಕೈಮುಗಿದು ಏರು ನೀ ಕನ್ನಡದ ತೇರು” ಮತ್ತು ಹಂಸಲೇಖ ಅವರ “ಮಹಾ ಪ್ರಾಣ ದೀಪಂ” ಹಾಡುಗಳು ಮತ್ತು ಹಿಂದಿ ಚಲನಚಿತ್ರದ ಹೆಸರಾಂತ ಚಲನಚಿತ್ರಗಳ ಹಾಡುಗಳನ್ನು ಹಾಡಿದ್ದಲ್ಲದೆ ಸೇರಿದ್ದ ಪ್ರೇಕ್ಷಕ ಹಾಗೂ ವಿದ್ಯಾರ್ಥಿ ಸಮೂಹವನ್ನೂ ತನ್ನ ಜತೆಗೂಡಿ ಹಾಡುವಂತೆ ಮಾಡಿದರು.

ಎರಡನೆ ಕಾರ್ಯಕ್ರಮವಾಗಿ ಮೃದಂಗ ಮತ್ತು ವಯೋಲಿನ್ ಸಮಾಗಮದೊಂದಿಗೆ “ಮೃದಂಗತರಂಗ” ಸಾದರಗೊಂಡಿತ್ತು. ಬಿ.ಎಸ್.ಆನಂದ್, ಪನ್ನಗ ಶರ್ಮ, ಕೃಷ್ಣ ಪವನ್‌ಕುಮಾರ್, ಸುಮುಖ ಕರಂತ್ ಮೃದಂಗದಲ್ಲಿ, ಧನಶ್ರೀ ಶಬರಾಯ ಮತ್ತು ಮಾ/ಸುಮೇಧ ಅವರು ವಯೋಲಿನ್‌ನಲ್ಲಿ ಸಾಥ್ ನೀಡಿದರು.

ನಂತರ ಆಳ್ವಾಸ್ ವಿದ್ಯಾರ್ಥಿಗಳಿಂದ ಗಣೇಶ ಸ್ತುತಿಯೊಂದಿಗೆ ಮೋಹಿನಿಯಾಟ್ಟಮ್, ಸಾಹಸಮಯ ಮಲ್ಲಕಂಬ ಮತ್ತು ರೋಪ್ ಹಾಗೂ ಶ್ರೀಲಂಕಾದ ಕ್ಯಾಂಡಿಯನ್ ನೃತ್ಯದೊಂದಿಗೆ “ಆಳ್ವಾಸ್ ಸಾಂಸ್ಕೃತಿಕ ವೈಭವ”ವು ಮೈ ನವಿರೇಳಿಸಿತು.

Related posts

Leave a Reply