Header Ads
Header Ads
Breaking News

ಆಶಕ್ತರ, ಅನಾಥರ ಪಾಲಿನ ಅಮ್ಮ : ಕಾರ್ಕಳ ನಗರದ ಜರಿಗುಡ್ಡೆ ನಿವಾಸಿ ಆಯಿಷಾ ಮಾದರಿ ಮಹಿಳೆ

ಅಶಕ್ತರ, ಅನಾಥರ ಪಾಲಿನ ಅಪೂರ್ವ ಅಮ್ಮ ಇವರು. ಹಿರಿಜೀವಗಳ ಆರೈಕೆಯಲ್ಲೇ ನೆಮ್ಮದಿ ಕಾಣುವ ಸಮಾಜ ಸೇವಕಿಯಿವರು. ಸದ್ದು-ಸುದ್ದಿಯಿಲ್ಲದೇ ತನ್ನ ಅತ್ಯಲ್ಪ ಆದಾಯವನ್ನೇ ಹಿರಿಜೀವಗಳ ಸೇವೆಗಾಗಿಯೇ ಮುಡಿಪಾಗಿಸಿಟ್ಟ ಮಾದರಿ ಮಹಿಳೆಯಿವರು. ಯಾರವರು ನಿಮಗೂ ಕುತೂಹಲವೇ ಹಾಗಿದ್ದರೆ ಈ ವರದಿ ನೋಡಿ.

ಇವರೇ ಕಾರ್ಕಳ ನಗರದ ಜರಿಗುಡ್ಡೆ ನಿವಾಸಿ ಆಯಿಷಾ. ಹೌದು, ಯಾವುದೇ ಪ್ರಚಾರ ಬಯಸದೇ ಹಿರಿ ಜೀವಗಳ ಪಾಲನೆ-ಪೋಷಣೆಯಲ್ಲೇ ತನ್ನ ಪೂರ್ತಿ ಸಮಯ ಕಳೆಯುತ್ತಿದ್ದಾರೆ ಆಯಿಷಾ. ತನ್ನ ಕೈಯರೇ ತುತ್ತು ಅನ್ನ ನೀಡಿ ಸಾರ್ಥಕತೆ ಮೆರೆಯುತ್ತಿದ್ದಾರೆ. ಶ್ರೀಮಂತೆಯಲ್ಲದ್ದಿರೂ ಹೃದಯ ಶ್ರೀಮಂತಿಕೆಯಿಂದ ಮನೆಮಾತಾಗಿದ್ದಾರೆ ಆಯಿಷಾ.

ಕಳೆದ 2 ವರ್ಷಗಳಿಂದ ತಮ್ಮ ಮನೆ ಪಕ್ಕದಲ್ಲಿ ಅಳಿಯ ಹಾಗೂ ಮಗಳು ಖರೀದಿಸಿದ ಮನೆಯಲ್ಲಿ 7 ಮಂದಿ ಅನಾಥರನ್ನು ಸಲಹುತ್ತಿದ್ದಾರೆ. ವಾರಕ್ಕೊಮ್ಮೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ತಪಾಸಣೆ ಮಾಡಿಸುತ್ತಾರೆ. ಕೆಲವರು ಮಾನಸಿಕ ಸ್ಥಿಮಿತ ಕಳೆದುಕೊಂಡು ವಿಚಿತ್ರವಾಗಿ ವರ್ತಿಸುತ್ತಿದ್ದರೂ ಅವರನ್ನು ಅತ್ಯಂತ ತಾಳ್ಮೆ, ಜಾಣ್ಮೆಯಿಂದ ನಿಭಾಯಿಸುತ್ತಿರುವ ರೀತಿ ಮಾತ್ರ ಮೆಚ್ಚತಕ್ಕ ವಿಚಾರವೇ ಸರಿ.

ಆಯಿಷಾ ಅವರ ಮಾನವೀಯ, ಸಾಮಾಜಿಕ ಕಾರ್ಯಕ್ಕೆ ಮತ್ತೊಂದು ಉದಾಹರಣೆ ವಾರಿಸುದಾರರಿಲ್ಲದ ಶವ ಅಂತ್ಯಸಂಸ್ಕಾರ ನೆರವೇರಿಸುವುದು. ಪೊಲೀಸ್ ಇಲಾಖಾ ಸಹಕಾರದೊಂದಿಗೆ ಬಡ, ಅನಾಥ, ಕೊಳೆತ ಸ್ಥಿತಿಯಲ್ಲಿದ್ದಂತಹ ದೇಹಗಳನ್ನು ರುದ್ರ‘ಮಿಗೆ ಸಾಗಿಸಿ ಮುಕ್ತಿ ನೀಡುವ ಕಾರ್ಯ ಮಾಡಿದ್ದಾರೆ. ಈ ಮೂಲಕ ಓರ್ವ ಮಹಿಳೆಯಾಗಿ ಅಸಾ‘ರಣ ಸಾ‘ನೆ ಮೆರೆದಿದ್ದಾರೆ.

ಕಾರ್ಕಳದ ಖಾಸಗಿ ಆಸ್ಪತ್ರೆಯೊಂದರಲ್ಲಿ 18 ವರ್ಷಗಳ ಕಾಲ ನರ್ಸ್ ಆಗಿ ದುಡಿಯುತ್ತಿದ್ದ ಆಯಿಷಾ ಕಾರ್ಕಳದಲ್ಲಿ ಆಂಬ್ಯುಲನ್ಸ್ ಕೊರತೆಯನ್ನು ಮನಗಂಡು 1998ರಲ್ಲಿ ಬ್ಯಾಂಕ್ ಸಾಲ ಪಡೆದು ಆಂಬ್ಯುಲನ್ಸ್ ಖರೀದಿಸಿದ್ದರು. ಇದೀಗ ಒಟ್ಟು 4 ಆಂಬ್ಯುಲನ್ಸ್ ಹೊಂದಿರುವ ಆಯಿಷಾ ಅದನ್ನೇ ಆದಾಯದ ಮೂಲವನ್ನಾಗಿಸಿದ್ದಾರೆ.

ಕನ್ನಡ, ಹಿಂದಿ, ತುಳು, ಉರ್ದು, ಮಲೆಯಾಳಿ, ಕೊಂಕಣಿ ಹೀಗೆ ಹಲವಾರು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಆಯಿಷಾ ಯಾವುದೇ ಪ್ರತಿಲಾಪೇಕ್ಷೆ ಇಲ್ಲದೇ, ಜಾತಿ ಧರ್ಮದ ಬದವಿಲ್ಲದೆ ತನ್ನ ಕುಟುಂಬವೆಂಬಂತೆ ಅಸಹಾಯಕರ ಲಾಲನೆ ಪಾಲನೆಯಲ್ಲಿ ತೊಡಗಿದ್ದಾರೆ.
ಪತಿಯ ಸಹಕಾರಪತಿ ಮಹಮ್ಮದ್ ನಾಸಿರ್ ಆಯಿಷಾ ಅವರ ಸೇವಾ ಕೈಂಕರ್ಯಕ್ಕೆ ಕೈ ಜೋಡಿಸುತ್ತಿದ್ದಾರೆ. ಮದುವೆಯಾಗಿ ಮುಂಬೈಯಲ್ಲಿರುವ ಹಿರಿ ಮಗಳು ಶೈನಾ, ಕಿರಿ ಮಗಳು ಪಂಸಿನ್ ಕೂಡ ಸಹಕಾರ ನೀಡುತ್ತಿದ್ದಾರೆ ಎನ್ನುತ್ತಾರೆ ಅವರು.

ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವವರು ಮಂದಿಯಲ್ಲಿ ಕಾರ್ಕಳ ಆಯಿಷಾ ಅವರು ಕೂಡ ಒಬ್ಬರು. ಅವರು ಆಶಕ್ತ, ಅನಾಥರ ಪಾಲಿಗೆ ದೇವರಾಗಿದ್ದಾರೆ. ಅವರ ಈ ಸಮಾಜ ಸೇವೆ ಹೀಗೆಯೆ ಮುಂದುವರೆಯಲಿ ಎಂದು ಆಶಿಸೋಣ

 

Related posts

Leave a Reply

Your email address will not be published. Required fields are marked *