Header Ads
Breaking News

ಆಶಾ ಕಿರಣ್ ಅವರಿಗೆ ಮಿಸೆಸ್ ಇಂಡಿಯಾ ಎಲಿಗೆಂಟ್ ಪ್ರಶಸ್ತಿ

ಬೆಂಗಳೂರು , ಮಾ. 3 : ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ವಿವಾಹಿತ ಮಹಿಳೆಯರ ಸೌಂಧರ್ಯ ಸ್ಪರ್ಧೆ ” ಮಿಸೆಸ್ ಇಂಡಿಯಾ ಎಲಿಗೆಂಟ್ 2021 ” ಸ್ಪರ್ಧೆಯಲ್ಲಿ ಶ್ರೀಮತಿ ಆಶಾ ಕಿರಣ್ ಅವರು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.

ಬೆಂಗಳೂರಿನ ಖಾಸಗಿ ಹೊಟೇಲ್‍ನ ಸಭಾಂಗಣದಲ್ಲಿ ನಡೆದ ಈ ಸೌಂಧರ್ಯ ಸ್ಪರ್ಧೆಯಲ್ಲಿ ದಿಲ್ಲಿ, ಕೋಲ್ಕಾತ್ತಾ , ಅಸ್ಸಾಮ್ , ಹೈದರಬಾದ್ , ಮುಂಬಯಿ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು.
ಝಡ್ ಇವೆಂಟ್ ಸಂಸ್ಥೆಯವರು ಆಯೋಜಿದ ಈ ಸೌಂಧರ್ಯ ಸ್ಪರ್ಧಾ ಕೂಟದ ಆರನೇ ಎಡಿಷನ್‍ನ ಸ್ಪರ್ಧೆ ಇದಾಗಿದ್ದು, ಆಶಾ ಕಿರಣ್ ಅವರು ಮಿಸೆಸ್ ಇಂಡಿಯಾ ಎಲಿಗೆಂಟ್ ಸೌತ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಇದರ ಜೊತೆಗೆ ಇದೇ ಸ್ಪರ್ಧಾ ಕೂಟದಲ್ಲಿ ನ್ಯಾಶನಲ್ ಗ್ಲಾಮರ್ , ರಾಯಲ್ ಬ್ಯೂಟಿ , ಬಾಡಿ ಬ್ಯೂಟಿಫುಲ್ ಟೈಟಲ್ ಗಳನ್ನು ಕೂಡ ಆಶಾ ಕಿರಣ್ ಅವರು ಗೆದ್ದುಕೊಂಡಿದ್ದಾರೆ. ಈ ಗೆಲುವಿನ ಮೂಲಕ ಆಶಾ ಕಿರಣ್ ಅವರು 2021 ನೇ ಸಾಲಿನ ಮಿಸೆಸ್ ಯೂನಿವರ್ಸ್ ಇಂಡಿಯಾ ಎಲಿಗೆಂಟ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
** ಆಶಾ ಕಿರಣ್ ಪರಿಚಯ :
ಉದ್ಯಮಿಯಾಗಿರುವ ಆಶಾ ಕಿರಣ್ ಅವರು ಸಾಮಾಜಿಕ ಕಾರ್ಯಕರ್ತೆಯಾಗಿ ಕೂಡ ಗುರುತಿಸಿಕೊಂಡವರು. ಬಿ.ಬಿ.ಎಂ ಪದವಿಧರರಾಗಿರುವ ಆಶಾ ಅವರು ಶಾಸ್ತ್ರೀಯ ನ್ಯತ್ಯಪಟು ಆಗಿ ಜನಪ್ರಿಯತೆ ಪಡೆದವರು ಹಾಗೂ ರಾಜ್ಯ ಮಟ್ಟದ ಟೆಬಲ್ ಟೆನ್ನಿಸ್ ಚಾಂಪಿಯನ್ ಶಿಪ್ ಗೆದ್ದುಕೊಂಡ ಕ್ರೀಡಾಪಟು ಕೂಡ ಆಗಿದ್ದಾರೆ.
ದೇಶದಾದ್ಯಂತದ ಕರ ಕಲಕುಶಲಕರ್ಮಿಗಳ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಒದಗಿಸುವ ಸಲುವಾಗಿ ಸೋನಾಶಾ ಚಾರಿಟೇಬಲ್ ಟ್ರಸ್ಟ್‍ನ್ನು ಆರಂಭಿಸಿ ಆ ಮೂಲಕ ಕರಕುಶಲ ಕರ್ಮಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಅಶಕ್ತ ಮಕ್ಕಳ ಬೆಳವಣಿಗೆಗೆ ಶ್ರಮಿಸುವ “ಹಾರ್ಮನಿ” ಎಂಬ ಸಂಸ್ಥೆಯಲ್ಲಿ ಕೂಡ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯ ತರಬೇತಿ , ವೃತ್ತಿ ಮಾರ್ಗದರ್ಶನ ತರಬೇತಿ ಹಾಗೂ ಮಾದಕ ವ್ಯಸನ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಗ್ರಾಮೀಣ ಮಹಿಳೆಯರ ಸಬಲೀಕರಣ ಹಾಗೂ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡು ಸಕ್ರೀಯ ಸಾಮಾಜಿಕ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದಾರೆ.

Related posts

Leave a Reply

Your email address will not be published. Required fields are marked *