Header Ads
Header Ads
Breaking News

ಆಶ್ಲೇಷಾ ಮಳೆಯಿಂದಾಗಿ ಕೃಷಿ ಸಂಪೂರ್ಣ ನಾಶ : ಆತಂಕದಲ್ಲಿ ಮಂಜೇಶ್ವರ ವ್ಯಾಪ್ತಿಯ ರೈತರು

ಮಂಜೇಶ್ವರ : ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಆಶ್ಲೇಷಾ ಮಳೆಯಿಂದಾಗಿ ಮಾನ್ಯ ಬಯಲಿನಲ್ಲಿನ ಭತ್ತ ಕೃಷಿ ಸಂಪೂರ್ಣ ಮುಳುಗಡೆಗೊಂಡು ಭಾರಿ ನಷ್ಟ ಉಂಟಾಗಿದೆ. ಕೆಲವರದು ಕಟಾವು ಮಾಡಿದ ಬೆಳೆ ಮುಳುಗಡೆಯಾದರೆ ಇನ್ನೂ ಕಟಾವು ಮಾಡದಿರುವ ಬೆಳೆಗಳು ಮುಳುಗಡೆಯಾಗಿದೆ. ಅಂದಾಜು ಸುಮಾರು ಮೂರೂ ಲಕ್ಷಕ್ಕಿಂತಲೂ ಹೆಚ್ಚು ನಷ್ಟ ಉಂಟಾಗಿದೆ. ಮಂಜೇಶ್ವರ, ಉಪ್ಪಳ ಕುಂಬಳೆ, ಕಾಸರಗೋಡುಗಳಲ್ಲಿ ಕಡಲ ತೀರದಲ್ಲಿ ಸಮುದ್ರದ ಅಲೆಗಳ ಅಬ್ಬರ ಜೋರಾಗಿದೆ. ರಕ್ಕಸ ಗಾತ್ರದ ಅಲೆಗಳು ಒಂದರ ಮೇಲೊಂದು ಅಪ್ಪಳಿಸುತ್ತಿದ್ದು, ತೀರ ಪ್ರದೇಶದ ಜನರ ಭೀತಿಗೆ ಕಾರಣವಾಗಿದೆ. ಚರಂಡಿ, ತೋಡುಗಳು ತುಂಬಿ ಹರಿಯುತ್ತಿವೆ. ಆಶ್ಲೇಷಾ ಮಳೆ ಜನಜೀವನದ ಮೇಲೂ ಪರಿಣಾಮ ಬೀರಿದೆ. ಮೊಳಕೆಯೊಡಯಬಹುದೆಂಬ ಆತಂಕದಲ್ಲಿ ರೈತರು ಇದ್ದಾರೆ ಮಾನ್ಯ ಬಯಲಿನಲ್ಲಿನ ವೇಣುಗೋಪಾಲ, ವೆಂಕಟ್ರಾಜ, ರಾಜ, ತಿರುಮಲೇಶ್ವರ, ಕೇಶವ ಅಲ್ಲದೆ ಇನ್ನೂ ಹಲವರ ಕೃಷಿ ನಾಶವಾಗಿದೆ. ಸುತ್ತಮುತ್ತ ಪರಿಸರದಲ್ಲಿ ಮುಂಜಾನೆ ಬೀಸಿದ ಗಾಳಿಗೆ ಮರ ಹಾಗೂ ವಿದ್ಯುತ್ ಕಂಬಗಳು ಉರುಳಿ ಅಪಾರ ನಷ್ಟ ಉಂಟಾಗಿದೆ.

Related posts

Leave a Reply

Your email address will not be published. Required fields are marked *