Header Ads
Breaking News

ಆಸ್ಪತ್ರೆಯನ್ನು ಮುನ್ನಡೆಸಲಾಗದೆ ಕೈಚೆಲ್ಲಿದ ಖಾಸಗಿ ಸಂಸ್ಥೆ

ಉಡುಪಿಯ ಹೃದಯ ಭಾಗದಲ್ಲಿ ಸರಕಾರಿ ಜಾಗದಲ್ಲಿ ನಿರ್ಮಾಣಗೊಂಡಿರುವ ಬಿ.ಆರ್.ಎಸ್. ಹೆಲ್ತ್ ರಿಸರ್ಚ್ ಇನ್‍ಸ್ಟಿಟ್ಯೂಟ್ ಪ್ರೈವೇಟ್ ಲಿ. ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನ ಮುನ್ನಡೆಸಲು ಅಸಾದ್ಯ ಎಂದು ಬಿ.ಆರ್.ಶೆಟ್ಟಿ ಸಂಸ್ಥೆ ತಿಳಿಸಿದ್ದು ಸರಕಾರದ ಕ್ರಮಕ್ಕೆ ಮನವಿ ಸಲ್ಲಿಸಿದೆ. ಈ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ವೈದ್ಯರ ನೇಮಕಕ್ಕೆ ಸರಕಾರ ಆದೇಶ ಹೊರಡಿಸಿದೆ.

2017ರ ನವೆಂಬರ್ 19ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಬಿ.ಆರ್. ಶೆಟ್ಟಿ ಅವರು ನಿರ್ಮಿಸಿದ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಉದ್ಘಾಟಿಸಿದ್ದರು. ಆಸ್ಪತ್ರೆಯ ಮೇಲ್ವಿಚಾರಣೆಯನ್ನು ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ನಡೆಸುತ್ತಿತ್ತು. ಇಲ್ಲಿನ ಸಿಬಂದಿ ನೇಮಕ ಮತ್ತು ಎಲ್ಲ ಉಸ್ತುವಾರಿ ಬಿಆರ್‍ಎಸ್ ಸಂಸ್ಥೆ ಕೈಯ್ಯಲ್ಲಿತ್ತು. ಮೊದ ಮೊದಲು ಆಸ್ಪತ್ರೆಯ ನಿರ್ಮಾಣಕ್ಕೆ ಅನೇಕ ವಿರೋಧಗಳಿತ್ತು. ಆಸ್ಪತ್ರೆಯನ್ನ ಸರಕಾರವೇ ಮುನ್ನಡೆಸಬೇಕು ಅಂತ ಭಾರೀ ಪ್ರತಿಭಟನೆಗಳು ಸಹ ನಡೆದಿದ್ದವು. ಆದ್ರೆ ಇದ್ಯಾವುದೂ ಸಹ ಗಣನೆಗೆ ತೆಗೆದುಕೊಳ್ಳದೇ ಈ ಆಸತ್ರೆಯನ್ನ ನಿರ್ಮಾಣ ಮಾಡಲಾಗಿತ್ತು.ಆದ್ರೆ ಇದೀಗ ಬಿ.ಆರ್ ಸಂಸ್ಥೆ ಸಂಕಷ್ಟದಲ್ಲಿದ್ದು ಆಸ್ಪತ್ರೆಯನ್ನು ನಡೆಸಲು ಸಾಧ್ಯವಿಲ್ಲ ಎಂದು ಸರಕಾರಕ್ಕೆ ಪತ್ರ ಬರೆದಿದೆ.
ಅಬುಧಾಬಿಯ “ಎನ್‍ಎಂಸಿ ಹೆಲ್ತ್ ‘ ಆರೋಗ್ಯ ಸಂಸ್ಥೆಯ ಸಂಸ್ಥಾಪಕ ಉಡುಪಿ ಮೂಲದ ಉದ್ಯಮಿ ಡಾ| ಬಿ.ಆರ್. ಶೆಟ್ಟಿ ಅವರು ತಾವೇ ಸ್ಥಾಪಿಸಿದ ಸಂಸ್ಥೆಗೆ ರಾಜೀನಾಮೆ ನೀಡಿದ್ದು, ಅಲ್ಲಿನ ಸರಕಾರ ಖಾತೆಗಳನ್ನು ಸದ್ಯ ಮುಟ್ಟುಗೋಲು ಹಾಕಿರುವುದರಿಂದ ಉಡುಪಿ ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಇದರಿಂದ ಸರಕಾರಕ್ಕೆ ಬಿಆರ್‍ಎಸ್‍ನಿಂದ ಮನವಿ ಹೋಗಿದೆ.

ಉಡುಪಿ ನಗರಸಭಾ ಕಟ್ಟಡದ ಎದುರಿನ ಹಾಜಿ ಅಬ್ದುಲ್ಲ ಮಹಿಳೆಯರು ಮತ್ತು ಮಕ್ಕಳ ಆಸ್ಪತ್ರೆಯ ಒಟ್ಟು 4.07 ಎಕರೆ ವಿಸ್ತೀರ್ಣದ ಮೂರು ನಿವೇಶನಗಳನ್ನೊಳಗೊಂಡ ಜಮೀನನ್ನು ಡಾ| ಬಿ.ಆರ್. ಶೆಟ್ಟಿ ಅಧ್ಯಕ್ಷರಾಗಿರುವ ಬಿ.ಆರ್.ಎಸ್. ಹೆಲ್ತ್ ರಿಸರ್ಚ್ ಇನ್‍ಸ್ಟಿಟ್ಯೂಟ್ ಪ್ರೈ.ಲಿ.ಗೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ಹಾಗೂ ಅಗತ್ಯವಿದ್ದಲ್ಲಿ ಇನ್ನೂ 30 ವರ್ಷಗಳ ಅವಧಿಗೆ ಲೀಸ್‍ನ್ನು ಮುಂದುವರಿಸಲು ರಾಜ್ಯ ಸರಕಾರ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಒಪ್ಪಂದ ಮಾಡಿಕೊಂಡಿತ್ತು.

ಆಸ್ಪತ್ರೆಯಲ್ಲಿ ಸೆಂಟ್ರಲ್ ಎಸಿ ಇರುವ ಕಾರಣ ತಿಂಗಳಿಗೆ 18 ಲ.ರೂ. ವಿದ್ಯುತ್ ಬಿಲ್ ಬರುತ್ತಿದ್ದು, ಅದನ್ನು ಭರಿಸಲು ಸರಕಾರಕ್ಕೆ ಅಸಾಧ್ಯ. ಆದರೂ ರೋಗಿಗಳ ದೃಷ್ಟಿಯಿಂದ ಬಿ.ಆರ್.ಎಸ್. ಸಂಸ್ಥೆಗೆ ಸಹಕರಿಸಲಾಗುತ್ತಿದೆ ಎಂದು ಶಾಸಕ ಕೆ. ರಘುಪತಿ ಭಟ್ ತಿಳಿಸಿದರು.

ಸಂಸ್ಥೆಯು ಈಗಿನ ಆಸ್ಪತ್ರೆ ಅಲ್ಲದೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ನಿರ್ಮಾಣಕ್ಕೆ ಕಾಮಗಾರಿ ಆರಂಭಿ ಸಿತ್ತು. ಆದರೆ ಅದು ನಿಯಮಕ್ಕೆ ವಿರುದ್ಧವಾದ ಕಾರಣ ನಗರಸಭೆ ಅನುಮತಿ ೀಡಿರಲಿಲ್ಲ. ಹಾಗಾಗಿ ಕಾಮಗಾರಿ ಸ್ಥಗಿತಗೊಂಡಿದೆ. ಹಳೆಯ ಆಸ್ಪತ್ರೆ ಕಟ್ಟಡವನ್ನು ಕೆಡವಿರುವುದರಿಂದ ಹೊಸ ಆಸ್ಪತ್ರೆಯ ನಿರ್ಮಾಣವನ್ನು ಸಂಸ್ಥೆಯೇ ಮುಂದುವರಿಸಬೇಕು ಎಂದ ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *