
ಮೂಡುಬಿದಿರೆ ತಾಲೂಕು ಎಂದು ಘೋಷಣೆಯಾದ ಬಳಿಕ ಮೂಡುಬಿದಿರೆ ತಾಲೂಕು ಕಚೇರಿಯಲ್ಲಿ ಖಾಯಂ ನೆಲೆಯಲ್ಲಿ ಆಹಾರ ನಿರೀಕ್ಷಕರು ಎಂಬ ನಿಯಮವಿದ್ದರೂ ಇನ್ನೂ ಆಹಾರ ನಿರೀಕ್ಷಕರಿಲ್ಲದೆ ಜನರಿಗೆ ಸಮಸ್ಯೆಯಾಗುತ್ತಿದೆ. ಗ್ರಾಮೀಣ ಪರಿಸರದಿಂದ ಪಡಿತರ ಚೀಟಿ ಕುರಿತ ಆವಶ್ಯಕತೆಗಳಿಗೆ ಜನರು ಇಲ್ಲಿಗೆ ಬಂದಾಗ ಆಹಾರ ನಿರೀಕ್ಷಕರಿಲ್ಲದೆ ಮನೆಗೆ ವಾಪಾಸು ಹೋಗುವಂತಾಗಿದೆ. ಇದನ್ನು ಗಮನಿಸಿ ತಹಶೀಲ್ದಾರರು ಈ ಬಗ್ಗೆ ಕ್ರಮ ಜರಗಿಸಬೇಕು ಎಂದು ಮೂಡುಬಿದಿರೆ ಬ್ಲಾಕ್ ಯುವ ಕಾಂಗ್ರೆಸ್ ಗುರುವಾರ ಆಗ್ರಹಿಸಿದೆ.
ತಾಲೂಕು ಕಚೇರಿಯಲ್ಲಿ ತಹಶೀಲ್ದಾರರಿಗೆ ಈ ಬಗ್ಗೆ ಯುವಕಾಂಗ್ರೆಸ್ ಅಧ್ಯಕ್ಷ ಜಯ ಕುಮಾರ್ ಶೆಟ್ಟಿ ಅವರ ಹಿರಿತನದಲ್ಲಿ ಮನವಿ ಸಲ್ಲಿಸಲಾಯಿತು.ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರ, ಜತೆ ಕಾರ್ಯದರ್ಶಿ ಸತೀಶ್ ಭಂಡಾರಿ, ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್, ವಕ್ತಾರ ರಾಜೇಶ್ ಕಡಲಕೆರೆ, ವಾಲ್ಪಾಡಿ ಗ್ರಾ.ಪಂ. ಸದಸ್ಯ ಅರುಣ್ಕುಮಾರ್ ಶೆಟ್ಟಿ, ಇರ್ಷಾದ್, ಮತ್ತಿತರರು ಉಪಸ್ಥಿತರಿದ್ದರು.