Header Ads
Header Ads
Breaking News

ಇಂದಿನಿಂದ ಅನಂತಾಡಿಯ ಸಮೀಪ ಸುಲ್ಲಮಲೆ -ಬಲ್ಲಮಲೆಯಲ್ಲಿ ತೀರ್ಥ ಸ್ನಾನ

 ನಾಡಿನಾದ್ಯಂತ ಗಣೇಶ ಚತುರ್ಥ ಹಬ್ಬಕ್ಕೆ ಭರ್ಜರಿ ತಯಾರಿ ನಡಿತಾ ಇದೆ. ಈ ಗಣೇಶ ಚತುರ್ಥಿಯ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಆ ಒಂದು ಊರಲ್ಲಿ ತೀರ್ಥಸ್ನಾನ ಮಾಡುವ ಪದ್ಧತಿ ಇದೆ. ಇಲ್ಲಿ ತೀರ್ಥ ಸ್ನಾನ ಮಾಡಿದ್ರೆ ಎಲ್ಲಾ ರೋಗ ರುಜಿನಗಳು ದೂರವಾಗುತ್ತೆ ಅನ್ನೋದು ಇಲ್ಲಿಯ ನಂಬಿಕೆ. ಹಾಗಾದ್ರೆ ಯಾವುದು ಆ ಊರು..? ಅಷ್ಟಕ್ಕೂ ಇಲ್ಲಿಯ ವಿಶೇಷತೆಯೇನು..? ಈ ಸ್ಟೋರಿ ನೋಡಿ. ಹೌದು.. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿ-ಅನಂತಾಡಿಯ ಸಮೀಪ ಸುಲ್ಲಮಲೆ -ಬಲ್ಲಮಲೆ ಎನ್ನುವ ಅರಣ್ಯದ ಕಾಲುದಾರಿಯಲ್ಲಿ ಸ್ವಲ್ಪ ದೂರ ನಡೆದಾಗ ಗುಹೆಯ ಒಳಗೆ ಪವಿತ್ರ ತೀರ್ಥ ಹರಿಯುವ ಕ್ಷೇತ್ರ ಸಿಗುತ್ತದೆ. ಅದುವೇ ಸುಲ್ಲಮಲೆ ಪುಣ್ಯ ತೀರ್ಥ. ಈ ತೀರ್ಥಸ್ನಾನ ಮಾಡುವುದೆಂದರೆ ಅಷ್ಟೊಂದು ಸುಲಭದ ಮಾತಲ್ಲ. ಅದಕ್ಕೆ ನೀವು ತುಸು ಧೈರ್ಯವಂತರೂ ಆಗಿರಬೇಕು.
ವಾ.ಓ: ಈ ತೀರ್ಥವು ಗುಹೆಯ ಒಳಗೆ ಇರುವುದರಿಂದ ಅದರೊಳಗೆ ಬಗ್ಗಿಕೊಂಡೇ ಹೋಗಬೇಕು. ಗುಹೆಯು ಕತ್ತಲೆಯಿಂದ ಕೂಡಿದ್ದು, ಬಿದಿರಿನ ಏಣಿಯಲ್ಲಿ10ಫೀಟ್ ಕೆಳಕ್ಕೆ ಇಳಿದು ಸಾಗಬೇಕು. ಇಡೀ ಗುಹೆ ಬಂಡೆಗಳಿಂದಲೇ ಆವೃತ್ತವಾಗಿದೆ. ಹೀಗೆ ಆ ಬಂಡೆಗಳ ನಡುವೆ ಸಾಗುವಾಗ ಬಂಡೆಗಳ ಮೇಲಿನಿಂದ ನೀರು ರಭಸದಿಂದ ಹರಿಯುತ್ತದೆ. ಅದುವೇ ಪುಣ್ಯ ತೀರ್ಥ. ಈ ತೀರ್ಥ ಸ್ನಾನ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಚರ್ಮರೋಗಗಳು ನಿವಾರಣೆಯಾಗುತ್ತವೆ ಎನ್ನಲಾಗುತ್ತದೆ. ಈ ತೀರ್ಥಸ್ನಾನವು ವರ್ಷದ ಎಲ್ಲಾ ದಿನ ಲಭ್ಯವಿರುವುದಿಲ್ಲ. ವರ್ಷದಲ್ಲಿ ನಾಲ್ಕು ದಿನ ಮಾತ್ರ ಈ ಗುಹಾಲಯವಿರುವ ಪ್ರದೇಶಕ್ಕೆ ಪ್ರವೇಶ. ಪಾಂಡವರು ತಮ್ಮ ಅಜ್ಞಾತವಾಸದ ಸಮಯದಲ್ಲಿ ಇಲ್ಲಿ ಕೆಲಕಾಲ ನೆಲೆಸಿದ್ದರು ಎಂಬ ಇತಿಹಾಸವೂ ಇದೆ. ಶ್ರಾವಣ ಅಮಾವಾಸ್ಯೆಯಿಂದ ಭಾದ್ರಪದ ಚೌತಿಯವರೆಗಿನ ಸಮಯದಲ್ಲಿ ಇಲ್ಲಿ ತೀರ್ಥಸ್ನಾನ ಮಾಡಿದರೆ ಜೀವನ ಪಾವನವಾಗುತ್ತದೆ ಎನ್ನುವ ನಂಬಿಕೆ ಇದೆ.

Related posts

Leave a Reply

Your email address will not be published. Required fields are marked *