Header Ads
Breaking News

ಇಂದು ಎಲ್ಲೆಡೆ ಬಕ್ರೀದ್ ಹಬ್ಬದ ಸಂಭ್ರಮ : ಉಡುಪಿಯಲ್ಲಿ ಸರಳವಾಗಿ ನಡೆದ ಬಕ್ರೀದ್ ಆಚರಣೆ

ಕರಾವಳಿಯ ಮುಸಲ್ಮಾನರಿಗೆ ಇಂದು ಬಕ್ರೀದ್ ಹಬ್ಬದ ಸಂಭ್ರಮ.. ಉಡುಪಿ ಜಿಲ್ಲೆಯಾದ್ಯಂತ ಈ ಬಾರಿ ಹಬ್ಬವನ್ನು ಬಹಳ ಸರಳವಾಗಿ ಮುಸಲ್ಮಾನರು ಆಚರಿಸಿದ್ದಾರೆ. ಮಸೀದಿಗಳಲ್ಲಿ ಬೆಳಗ್ಗೆ ನಮಾಜ್ ನಡೆದಿದ್ದು, ಕೇವಲ ಐವತ್ತು ಜನರಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿತ್ತು. ಪ್ರತಿ ಮಸೀದಿಯಲ್ಲೂ ಕೂಡ ಇದೇ ಷರತ್ತು ಅನ್ವಯ ಆಗಿದೆ. ನಮಾಜ್‍ಗೆ ಮಾತ್ರ ಅವಕಾಶ ಕಲ್ಪಿಸಿರುವ ಕಮಿಟಿ, ನಮಾಜ್ ನಂತರ ಆಲಿಂಗನಕ್ಕೆ ಅವಕಾಶ ಕೊಟ್ಟಿಲ್ಲ. ಐವತ್ತಕ್ಕಿಂತ ಹೆಚ್ಚು ಜನ ಮಸೀದಿಗೆ ಆಗಮಿಸಿದರೆ ಎರಡು ಬ್ಯಾಚ್‍ಗಳಲ್ಲಿ ನಮಾಜ್ ಗೆ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳಿಗೆ ಮತ್ತು ವೃದ್ಧರಿಗೆ ಯಾವುದೇ ಕಾರಣಕ್ಕೂ ಬಕ್ರೀದ್ ನಮಾಜ್‍ಗಾಗಿ ಮಸೀದಿಗೆ ಪ್ರವೇಶ ಇರಲಿಲ್ಲ. ತಮ್ಮ ತಮ್ಮ ಮನೆಗಳಲ್ಲೇ ನಮಾಜ್ ಮಾಡಿ, ಹಬ್ಬವನ್ನು ಆಚರಿಸುವಂತೆ ಧರ್ಮಗುರುಗಳು ಆಯಾಯ ವ್ಯಾಪ್ತಿಯಲ್ಲಿ ಎರಡು ದಿನಗಳ ಹಿಂದೆಯೇ ಕರೆ ಕೊಟ್ಟಿದ್ದರು.

Related posts

Leave a Reply

Your email address will not be published. Required fields are marked *