
ಬಂಟ್ವಾಳ ಕಸ್ಬಾ ಗ್ರಾಮದ ಇಜ್ಜಾ ಶಿವ ಕ್ಷೇತ್ರ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ವಿವಿಧ ವೈದಿಕ ಹಾಗೂ ಧಾರ್ಮಿಕ ಪೂಜಾ ವಿಧಿಗಳು ಶ್ರೀ ಕ್ಷೇತ್ರದಲ್ಲಿ ನೆರವೇರಿತು. ಕ್ಷೇತ್ರದ ತಂತ್ರಿಗಳಾದ ವಿದ್ಯಾಶಂಕರ ಭಟ್ ಬೋಳೂರು ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ಸತ್ಯನಾರಾಯಣ ಭಟ್ ಅವರ ನೇತೃತ್ವದಲ್ಲಿ ಬೆಳಿಗದಗೆ ಗಣಪತಿ ಹವನ, ನಾಗಾಲಯದಲ್ಲಿ ಬಿಂಬ ಶುದ್ದಿ ಬಿಂಬ ಅಧಿವಾಸ, ಅಧಿವಾಸ ಹವನ, ನಾಗ ಸಹಿತ ಶ್ರೀ ವ್ಯಾಘ್ರ ಚಾಮುಂಡಿ ಶಿಖರ ಶುದ್ದಿ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಸಂಜೆ ಬ್ರಹ್ಮಕಲಶ ಪ್ರತಿ?, ಕಲಶಾಧಿವಾಸ, ಶಿಖರಧಿವಾಸ, ಅಧಿವಾಸ ಹವನ ಹಾಗೂ ಸ್ಥಳೀಯ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ ನಡೆಯಿತು.