Header Ads
Header Ads
Header Ads
Breaking News

ಇಪತ್ತು ವರ್ಷಗಳಿಂದ ಟೆಂಟ್‌ನಲ್ಲೇ ಜೀವನ ಮಕ್ಕಳ ಭವಿಷ್ಯಕ್ಕಾಗಿ ಪೋಷಕರ ಪರದಾಟ ಕಣ್ಣು ಮುಚ್ಚಿ ಕುಳಿತಿದೆ ಸರ್ಕಾರ

ನಮ್ಮ ದೇಶದ ಪರಿಸ್ಥಿತಿನೇ ಹೀಗೆ ಅನ್ನಬೇಕೆನ್ನೋ ಕೆಲವರು ಸಿಕ್ಕ ಅವಕಾಶವನ್ನ ದುರುಪಯೋಗ ಪಡಿಸಿಕೊಂಡರೇ ಇನ್ನು ಕೆಲವರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಸಂಕಷ್ಟದ ನಡುವೆಯೂ ಮಕ್ಕಳ ಭವಿಷ್ಯಕ್ಕಾಗಿ ಟೆಂಟ್‌ನಲ್ಲಿ ವಾಸಿಸುತ್ತಿರುವರ ಕಥೆಯಿದು. ಈ ಕುರಿತ ಸ್ಪೇಷಲ್ ರಿಪೋರ್ಟ್ ನೋಡಿ ಇಪತ್ತು ವರ್ಷಗಳಿಂದ ಟೆಂಟ್‌ಗಳೇ ಇವರ ಅರಮನೆ. ಹುಟ್ಟೂರಿನಲ್ಲಿ ಜಮೀನಿದ್ದರೂ ಮಳೆಯಿಲ್ಲ. ಉದ್ಯೋಗಕ್ಕಾಗಿ ಊರೂರು ಅಲೆಯುತ್ತ ಬಂದು ಇಲ್ಲಿ ನೆಲೆನಿಂತಿದ್ದಾರೆ. ಮೂಲತಃ ಮುಂಡಗೋಡಿ ತಾಲೂಕಿನವರಾದ ಇವರು ಕಳೆದ ಇಪ್ಪತ್ತು ವರ್ಷಗಳಿಂದ ತಾಲೂಕಿನ ಹಟ್ಟಿಯಂಗಡಿ ಮಹಾಧ್ವಾರದ ಬಳಿ ಟೆಂಟ್ ಹಾಕಿಕೊಂಡು ವಾಸವಿದ್ದಾರೆ.

ಡೋಂಗ್ರಿ ಜನಾಂಗದವಾರದ ಇವರು ಉತ್ತಮ ಭವಿಷ್ಯದ ಕನಸನ್ನ ಹೊತ್ತು ಇಲ್ಲಿ ವಾಸವಿದ್ದಾರೆ. ಮೂಲತಃ ವಲಸಿಗ ಜನಾಂಗದವರಾದರೂ ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಇಲ್ಲಿ ಟೆಂಟ್‌ಗಳಲ್ಲಿ ವಾಸವಿದ್ದೂ ತಮ್ಮ ಮಕ್ಕಳನ್ನ ಶಾಲೆಗೆ ಕಳುಹಿಸುತ್ತಿದ್ದಾರೆ.

ಕೂಲಿ ಕೆಲಸ, ಮೀನು ಹಿಡಿಯುವ ಕೆಲಸ ಮಾಡಿಕೊಂಡು ಸಿಗುವ ಐನೂರು ರೂಪಾಯಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸೆಲ್ಕೋ ಸೋಲಾರ್‌ನವರು ನೀಡಿದ ಸೋಲಾರ್ ದೀಪ ಬಿಟ್ಟರೆ ಬೇರ್‍ಯಾವ ಸವಲತ್ತು ಇವರಿಗೆ ಸಿಕ್ಕಿಲ್ಲ. ಅದು ಕೂಡ ಈಗ ಕೆಟ್ಟಿದ್ದು ದುರಸ್ತಿ ಮಾಡಿಸಲು ಕೈಯಲ್ಲಿ ಕಾಸಿಲ್ಲ. ವಸತಿಹೀನರಿಗೆ ಸರ್ಕಾರ ನೀಡುವ ವಸತಿ ಸೌಕರ್ಯ ಯೋಜನೆ ಇನ್ನೂ ಮರಿಚಿಕೆ. ವಸತಿ ಸೌಕರ್ಯ ನೀಡುತ್ತೇವೆಂದು ಇವರಿಂದ ಅರ್ಜಿ ಪಡೆದುಕೊಂಡಿರುವ ಅಧಿಕಾರಿಗಳು ಎಲ್ಲಿ ಹೋದರೆಂಬುದೂ ಇವರಿಗೆ ಗೊತ್ತಿಲ್ಲ. ಆದರೂ ಮಕ್ಕಳ ಭವಿಷ್ಯಕ್ಕಾಗಿ ಇವರ ಜೀವನ ರಥ ನಡೆಯುತ್ತಿದೆ.

ಕುಂದಾಪುರ, ಬೈಂದೂರು ಮೊದಲಾದೆಡೆ ಇವರ ಕುಟುಂಬದ ಸುಮಾರು 20 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹೆಚ್ಚಿನ ಮಕ್ಕಳು ಹಾಸ್ಟೇಲ್ ಜೀವನ ನಡೆಸುತ್ತಿದ್ದರೆ. ಮನೆಯ ವಾತಾವರಣ ಸರಿಯಲ್ಲದ ಕೆಲವರು ಪ್ರತಿನಿತ್ಯ ಮನೆಗೆ ಬರುತ್ತಿದ್ದಾರೆ. ಈ ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಯ ಕಷ್ಟವನ್ನ ನೋಡಲಾಗದೆ ಇರುವ ಸಂಪನ್ಮೂಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು. ಈ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಮಾತ್ರ ಸರ್ಕಾರದ ಸಹಾಯಧನದ ನಿರೀಕ್ಷೆಯಲ್ಲಿದ್ದಾರೆ.


ತಾವು ಅನಕ್ಷರಸ್ಥರಾಗಿ ಬೆಳೆದ ಮಾತ್ರಕ್ಕೆ ತಮ್ಮ ಮಕ್ಕಳು ಅನಕ್ಷರಸ್ಥರಾಗಬಾರದು, ಕೂಲಿ ಮಾಡಿಕೊಂಡು ಭವಿಷ್ಯ ಹಾಳುಮಾಡಬಾರದೆಂಬ ಮುಂದಾಲೋಚನೆ ಈ ಕುಟುಂಬಕ್ಕಿದೆ. ಈ ಹಿನ್ನೆಲೆ ಉಡುಪಿ ಜಿಲ್ಲೆ ಉತ್ತಮ ಶಿಕ್ಷಣಕ್ಕೆ ಹೆಸರು ಮಾಡಿದ ಹಿನ್ನೆಲೆ, ತಮ್ಮ ಮಕ್ಕಳನ್ನ ಇಲ್ಲಿಯ ಶಾಲೆಗೆ ಕಳುಹಿಸುತ್ತಿದ್ದಾರೆ. ಇವರ ಅಕ್ಷರ ಪ್ರೇಮಕ್ಕೆ ಪ್ರತಿಯೊಬ್ಬರೂ ಬೆಲೆ ನೀಡಬೇಕು. ದಾನಿಗಳು ಯಾರಾದರೂ ಈ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊತ್ತಲ್ಲಿ ಈ ಮಕ್ಕಳ ಮುಂದಿನ ಭವಿಷ್ಯ ಚೆನ್ನಾಗಿರುತ್ತದೆ.

ಕಿರಣ್ ಕುಮಾರ್ ತುಂಗಾ ಕುಂದಾಪುರ

Related posts

Leave a Reply