Header Ads
Header Ads
Breaking News

ಇರಾನ್ ಗಡಿ ಪ್ರವೇಶಿಸಿದ ಉ.ಕ. ಮೂಲದ15ಮಂದಿ ಮೀನುಗಾರರ ಬಂಧನ: ಆತಂಕದಲ್ಲಿ ಕುಟುಂಬ

ಭಟ್ಕಳ: ದುಬೈಯಿಂದ ಮೀನುಗಾರಿಕೆಗೆ ತೆರಳಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಕುಮಟಾ, ಮುರುಡೇಶ್ವರ, ಮಂಕಿಯ ಸುಮಾರು 15 ಮಂದಿ ಮೀನುಗಾರರನ್ನು ಇರಾನ್‌ಗಡಿ ಪ್ರವೇಶಿಸಿದ್ದ ಹಿನ್ನೆಲೆಯಲ್ಲಿ ಅವರನ್ನು ಅಲ್ಲಿಯ ಸರ್ಕಾರ ಬಂಧಿಸಿದೆ ಎಂಬ ಸುದ್ದಿ ಭಟ್ಕಳ ಸೇರಿದಂತೆ ಜಿಲ್ಲಾದ್ಯಂತ ಹರಡಿದ್ದು ಬಂಧಿತ ಮೀನುಗಾರರ ಕುಟುಂಬದವರು ಆತಂಕಿತರಾಗಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಇರಾನ್ ಸರ್ಕಾರದಿಂದ ಬಂಧಿಸಲ್ಪಟ್ಟ ಮೀನುಗಾರರನ್ನು ಮುರುಡೇಶ್ವರದ ಇಬ್ರಾಹಿಂ ಮುಲ್ಲಾ ಫಖೀರಾ, ಮುಹಮ್ಮದ್ ಅನ್ಸಾರ್ ಇಸ್ಮಾಯಿಲ್ ಬಾಪು, ನಯೀಮ್ ಹಸನ್ ಭಾಂಡಿ, ಭಟ್ಕಳ ತಾಲೂಕಿನ ಹೆಬಳದ  ತೆಂಗಿನಗುಂಡಿಯ ಖಲೀಲ್ ಪಾನಿಬುಡು, ಉಸ್ಮಾನ್ ಬೊಂಬಾಝ್‌ಕರ್, ಮುಹ್ಮದ್ ಇಸ್ಹಾಖ್, ಅಬ್ದುಲ್ ಮೊಹಮ್ಮದ್ ಹುಸೇನ್, ಮುಹಮ್ಮದ್ ಷರೀಫ್ ಯಸೂಫ್ ಬಾಪು, ಅಬ್ದುಲ್ಲಾ ಸುಲೈಮಾನ್ ಡಾಂಗಿ, ಕುಮಟಾ ತಾಲೂಕಿನ ಅತಿಖ್ ಸುಲೈಮಾನ್ ಧಾರು, ಯಾಖೂಬ್ ಇಸ್ಮಾಯಿಲ್ ಶಮು, ಇಲ್ಯಾಸ್ ಅಂಬಾಡಿ, ಇಲ್ಯಾಸ್ ಘರಿ, ಇನಾಯತ್ ಅಬ್ದುಲ್ ಖಾದಿರ್ ಶಮ್ಸು, ಖಾಸಿಮ್ ಶೇಖ್, ಅಜ್ಮಲ್ ಮೂಸಾ ಶಮು ಎಂದು ತಿಳಿದುಬಂದಿದ್ದು ಈ ಎಲ್ಲಾ ೧೫ ಮಂದಿ ಮೀನುಗಾರರ ಕುಟುಂಬಸ್ಥರು ಈಗ ಆತಂಕದಲ್ಲಿದ್ದು ತಮ್ಮ ಕುಟುಂಬದ ಸದಸ್ಯರನ್ನು ಹೇಗಾದರು ಮಾಡಿ ಇರಾನ್ ಸರ್ಕಾರದಿಂದ ಬಿಡಿಸಿಕೊಂಡು ಭಾರತಕ್ಕೆ ಮರಳಿಸುವ ವ್ಯವಸ್ಥೆ ಮಾಡಬೇಕೆಂದು ತಂಝೀಮ್ ಸಂಸ್ಥೆಯಲ್ಲಿ ಮಾನವಿ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಈ ಕುರಿತಂತೆ ಇರಾನ್ ಸರಕಾರದಿಂದ ಬಂದಿತನಾದ  ಸುಲೆಮಾನ್ ಡಾಂಗಿ ಸಂಬಂದಿಕ ನೈಪುಲ್ಲಾ ಮಾತನಾಡಿ2ತಿಂಗಳ ಹಿಂದೆ ಮೀನುಗಾರಿಕೆಗೆ ತೆರಳಿದ ನಮ್ಮ ಸಂಬಂದಿ ಮೀನುಗಾರಿಕೆ ಮಾಡುತ್ತ ಇರಾನ್‌ಗಡಿ ಸಮೀಪಿಸಿದ್ದು ಅಲ್ಲಿನ ಸರ್ಕಾರ ಒಂದು ಮೀನುಗಾರಿಕಾ ದೋಣಿಯಲ್ಲಿದ್ದವರನ್ನು ಬಂಧಿಸಿ ತಮ್ಮ ವಶದಲ್ಲಿರಿಸಿಕೊಂಡಿದ್ದಾರೆ ಈ ಕುರಿತುಂತೆ ಭಾರತ ಸರ್ಕಾರ ಆ ಮೀನುಗಾರರನ್ನು ಮರಳಿ ದೇಶಕ್ಕೆ ಕರೆ ತರ ಬೇಕು ಎಂದು ಹೇಳಿದರು.ಮಿನುಗಾರರು ಕಾಣೆಯಾದ ಬಗ್ಗೆ ಹೆಬ್ಳೆ ಯುವಕ ಹುಸೇನ್ ಮಾತನಾಡಿ ಕಳೆದ2 ತಿಂಗಳ ಹಿಂದೆ ಮೀನುಗಾರಿಕೆಗೆ ತೆರಳಿದ ಜಿಲ್ಲೆಯ15 ಮಂದಿ ಮೀನುಗಾರಿಕೆ ಮಾಡುತ್ತ ಇರಾನ್‌ಗಡಿ ಸಮೀಪಿಸಿದ್ದು ಅಲ್ಲಿನ ಸರ್ಕಾರ ಒಂದು ಮೀನುಗಾರಿಕಾ ದೋಣಿಯಲ್ಲಿದ್ದವರನ್ನು ಬಂಧಿಸಿ ತಮ್ಮ ವಶದಲ್ಲಿರಿಸಿಕೊಂಡಿದ್ದಾರೆ.

ಮತ್ತೊಂದು ದೋಣೀಯಲ್ಲಿದ್ದ ಮೀನುಗಾರರನ್ನು ಮರಳಿ ದುಬೈಗೆ ತೆರಳದಂತೆ ಸಮುದ್ರ ಮಧ್ಯದಲ್ಲೆ ನಿರ್ಭಂದವನ್ನು ಹೇರಿದ್ದು ಅಲ್ಲಿ ಅವರಿಗೆ ಊಟದ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿದೆ ಎಂಬ ಮಾಹಿತಿ ತಮಗೆ ಬಂದಿದ್ದು ನಿಜವಾಗಿದ್ದು ಈ ಕುರಿತುಂತೆ ಭಾರತ ಸರ್ಕಾರಕ್ಕೆ ಆ ಮೀನುಗಾರರನ್ನು ಮರಳಿ ದೇಶಕ್ಕೆ ಕರೆ ತರುವಂತೆಹೊಟ್ಟೆ ಪಾಡಿಗಾಗಿ ದೂರದ ದೇಶಕ್ಕೆ ದುಡಿಯಲು ಹೋಗಿ ಗಡಿದಾಟಿ ಇರಾನ್ ಕಪಿಮುಷ್ಟಿಯಲ್ಲಿ ಬಡ ಅಮಾಯಕರು ಸಿಕ್ಕಿದ್ದು ಮೂರು ತಿಂಗಳಾದರು ಬಿಡುಗಡೆಯ ಬಾಗ್ಯ ದೋರೆಯದೆ ಪರದಾಡುವಂತಾದರೆ ಬಂದಿತರ ಮನೆಯವರು ತಮ್ಮ ಮನೆಯ ಸದಸ್ಯರು ಬರುವ ನಿಕ್ಷೇಯಲ್ಲಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದರೆ  ಭಾರತ ಸರಕಾರ ಆದಷ್ಟು ಬೇಗ ಬಂದಿತರ ಬಿಡುಗಡೆಗೆ  ಪ್ರಯತ್ನಿಸಿ ಬಂದಿತರು ಸ್ವದೇಶವನ್ನು ತಲುಪುವಂತೆ  ಮಾಡಲಿ ಎನ್ನುವುದು ಸಾರ್ವಜನಿಕರ ಆಶಯವಾಗಿದೆ

 

Related posts

Leave a Reply