Header Ads
Header Ads
Header Ads
Breaking News

ಇರಾ ಗ್ರಾಮದ ಕಲ್ಲಾಡಿ ಶ್ರೀ ಅರಸು ಕುರಿಯಾಡಿತ್ತಾಯ ದೈವಂಗಳ ಧರ್ಮಚಾವಡಿಯಲ್ಲಿ ಬ್ರಹ್ಮಕಲಶಾಭಿಷೇಕ

ವಿಟ್ಲ: ಇರಾ ಗ್ರಾಮದ ಕಲ್ಲಾಡಿ ಶ್ರೀ ಅರಸು ಕುರಿಯಾಡಿತ್ತಾಯ ಮೂವರು ದೈವಂಗಳ ಧರ್ಮಚಾವಡಿಯಲ್ಲಿ ಶ್ರೀ ಅರಸು ಕುರಿಯಾಡಿತ್ತಾಯ ಮೂವರು ದೈವಂಗಳ ಮತ್ತು ಜುಮಾದಿ-ಬಂಟ, ಮೈಸಂದಾಯ, ಜಠಾಧಾರಿ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಸಭೆಯಲ್ಲಿ ಶ್ರೀ ಕೋಟ್ಯಾಂಡಿ ವೇದಿಕೆಯಲ್ಲಿ ಕಲ್ಲಾಡಿ ಕುಟುಂಬಸ್ಥರು ನೀಡಿದ ಸನ್ಮಾನ ಗೌರವವನ್ನು ಸ್ವೀಕರಿಸಿ ಮಾತನಾಡಿದ ಬ್ರಹ್ಮಶ್ರೀ ಬಡಾಜೆಬೀಡು ಗೋಪಾಲಕೃಷ್ಣ ತಂತ್ರಿ ಅವರು ಕಲ್ಲಾಡಿ ಕುಟುಂಬಕ್ಕೆ ದೈವಾನುಗ್ರಹವಾಗಿದೆ. ಐಕಮತ್ಯ, ಯೋಗ, ಭಾಗ್ಯ ಕೂಡಿಬಂದಾಗ ಯಶಸ್ಸು ನಿಶ್ಚಿತ. ಕ್ಷೇತ್ರದಲ್ಲಿ ಶಾಸ್ತ್ರಯುಕ್ತ ವಿಧಿವಿಧಾನಗಳನ್ನು ನಡೆಸಲಾಗಿದೆ. ಪೂರ್ಣತ್ವವನ್ನು ಕಾಣಬಹುದಾಗಿದೆ. ಮುಂದೆ ನಿತ್ಯನೈಮಿತ್ತಿಕ ಕಾರ್ಯಗಳು ಮುನ್ನಡೆದು ಸಾನ್ನಿಧ್ಯವೃದ್ಧಿಯಾಗಬೇಕು ಎಂದು ಹೇಳಿದರು.

ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಕಲ್ಲಾಡಿ ರಾಜಶೇಖರ ಶೆಟ್ಟಿ ದೇವಸ್ಯ ಅವರು ಮಾತನಾಡಿ, ಹಣದಿಂದ ಇಂತಹ ಕ್ಷೇತ್ರ ಪುನರ್ನಿರ್ಮಾಣ ಅಸಾಧ್ಯ. ಎಲ್ಲರ ಸಹಕಾರ, ಶ್ರಮದಿಂದ ಇದು ಸಾಧ್ಯವಾಗಿದೆ. ಅದರಲ್ಲೂ ಚಂದ್ರಶೇಖರ ಟಿ.ಶೆಟ್ಟಿ ಅವರ ಶ್ರಮ ಅಪಾರ. ಅವರ ತಂಡದ ಶ್ರಮಕ್ಕೆ ಬೆಲೆ ಕಟ್ಟಲಾಗದು ಎಂದರು.
ಇರಾ ಕುಂಡಾವು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ ಅವರು ಧಾರ್ಮಿಕ ಸಭೆಯನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಜೀರ್ಣೋದ್ಧಾರ ಕಾರ್ಯಕ್ಕೆ ಹಗಲಿರುಳು ಶ್ರಮಿಸಿದ, ಸಮಿತಿ ಅಧ್ಯಕ್ಷ ಚಂದ್ರಶೇಖರ ಟಿ.ಶೆಟ್ಟಿ -ಮಲ್ಲಿಕಾ ದಂಪತಿಯನ್ನು ಸನ್ಮಾನಿಸಲಾಯಿತು. ವೇಣುಗೋಪಾಲ ಭಂಡಾರಿ ಬಾವಬೀಡು, ಪದ್ಮನಾಭ ಶೆಟ್ಟಿ ಯಾನೆ ಸಾಮಾನಿ ಪಾತ್ರಾಡಿಗುತ್ತು, ಸೀತಾರಾಮ ಅಡ್ಯಂತಾಯ ಯಾನೆ ದೋಚ ರೈ ಬೋಳಂತೂರುಗುತ್ತು, ಮಹಾಬಲ ರೈ ಯಾನೆ ಕೋಟಿ ಶೆಟ್ಟಿ ಕಿನ್ನಿಮಜಲುಬೀಡು, ರವಿ ಕುಮಾರ್ ಶೆಟ್ಟಿ ಯಾನೆ ಸಾವಿರದ ಕುಂಞ ಮಂಚಿಗುತ್ತು, ರಾಜೇಶ್ ಪೂಜಾರಿ ಯಾನೆ ಮುಂಡ, ಶ್ರೀಧರ ಶೆಟ್ಟಿ ಯಾನೆ ಸಂಕು ಶೆಟ್ಟಿ ಕಲ್ಲಾಡಿ, ಕಲ್ಲಾಡಿ ಕುಟುಂಬ ಟ್ರಸ್ಟ್ ಅಧ್ಯಕ್ಷ ನಳಿನಾಕ್ಷ ಮಲ್ಲಿ, ಮರದ ಶಿಲ್ಪಿ ಸೀತಾರಾಮ ಆಚಾರಿ, ಚಾವಡಿಯ ಶಿಲ್ಪಿ ಸಚೀಂದ್ರ, ಕಾಂತಣ್ಣ, ಸತೀಶ ಮತ್ತಿತರರನ್ನು ಗೌರವಿಸಲಾಯಿತು.

ಬೆಳಿಗ್ಗೆ ಗಣಪತಿ ಹವನ, ನಾಗತಂಬಿಲ, ಬೆಳಿಗ್ಗೆ ಗಂಟೆ 10.02ರ ಮಕರಲಗ್ನ ಸುಮುಹೂರ್ತದಲ್ಲಿ ಶ್ರೀ ಅರಸು ಕುರಿಯಾಡಿತ್ತಾಯ ಮೂವರು ದೈವಂಗಳ ಮತ್ತು ಜುಮಾದಿ – ಬಂಟ, ಮೈಸಂದಾಯ, ಜಠಾಧಾರಿ ದೈವಗಳ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ಬ್ರಹ್ಮರ ಮಠದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ಕಲಶಾಭಿಷೇಕ, ಮಹಾಪೂಜೆ, ವೆಂಕಟರಮಣ ದೇವರ ಮುಡಿಪು ಕಟ್ಟಲಾಯಿತು. ಮಧ್ಯಾಹ್ನ 12.30ಕ್ಕೆ ಧರ್ಮಚಾವಡಿಯಲ್ಲಿ ಶ್ರೀ ದೈವಗಳಿಗೆ ತಂಬಿಲ ಸೇವೆ, ಮಹಾಪೂಜೆ, ಪುದ್ವಾರ್ ಮೆಚ್ಚಿಗೆ ಪಡಿಯಕ್ಕಿ ಕೊಡುವುದು, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಜಗದೀಶ ಶೆಟ್ಟಿ ಕಲ್ಲಾಡಿ ಇರಾಗುತ್ತು, ಪುಷ್ಪರಾಜ ಕುಕ್ಕಾಜೆ, ಸುರೇಂದ್ರ ಶೆಟ್ಟಿ ಕಲ್ಲಾಡಿ, ಕಲ್ಲಾಡಿ ಕುಟುಂಬಸ್ಥರು, ಶಂಕರ ಶೆಟ್ಟಿ, ಕಲ್ಲಾಡಿ ಶ್ರೀಧರ ಶೆಟ್ಟಿ ಯಾನೆ ಸಂಕು ಶೆಟ್ಟಿ, ಕಲ್ಲಾಡಿ ಕಿರಣ್ ಕುಮಾರ್ ರೈ ಯಾನೆ ಕೋಟಿ ಶೆಟ್ಟಿ, ಗಡಿ ಗುತ್ತಿನವರು, ಗಡಿ ಪ್ರಧಾನರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *