Header Ads
Breaking News

ಇವರದ್ದು ಧರ್ಮ ಮೀರಿದ ಸೇವೆ : ಹಿಂದೂಗಳ ಹಬ್ಬಕ್ಕೂ ತೆನೆ ನೀಡುತ್ತಿರುವ ಜೂಲಿಯನ್ ದಾಂತಿ

ಕ್ರೈಸ್ತರ ತೆನೆ ಹಬ್ಬಕಾಗಿಯೇ ಇವರು ತಮ್ಮ ಅರ್ಧ ಎಕರೆ ಗದ್ದೆಯಲ್ಲಿ ಫಸಲು ಬೆಳೆಸುತ್ತಾರೆ. ಪ್ರತೀ ವರ್ಷ ಅದನ್ನ ಉಚಿತವಾಗಿಯೂ ನೀಡಿ ತಮ್ಮ ಸೇವೆ ನೀಡುತ್ತಾರೆ. ಇಂತಹ ಮನೋಭಾವದ ವ್ಯಕ್ತಿ ಇರುವವರು ಉಡುಪಿಯ ಉದ್ಯಾವರದಲ್ಲಿ..ಅವರು ಯಾರು ಗೊತ್ತಾ? ಇಲ್ಲಿದೆ ನೋಡಿ ವರದಿ.

 ಹೌದು ಇವರ ಹೆಸರು ಜೂಲಿಯನ್ ದಾಂತಿ. ಉಡುಪಿ ಜಿಲ್ಲೆಯ ಉದ್ಯಾವರ ಸಂಪಿಗೆ ನಗರ ನಿವಾಸಿ. ಇವರದು ಕೂಡುಕುಟುಂಬ. ಜೂಲಿಯನ್ ದಾಂತಿ ಹಿಂದುಗಳ ಕದಿರು ಕಟ್ಟಲು ಮತ್ತು ಕ್ರೈಸ್ತ ತೆನೆ ಹಬ್ಬಕ್ಕೆ ಇವರ ಅರ್ಧ ಎಕರೆ ಗದ್ದೆಯಲ್ಲಿ ಬೆಳೆಸಿದ ತೆನೆಯನ್ನು ಉಚಿತವಾಗಿ ನೀಡಲಾಗುತ್ತಿದೆ.ಉದ್ಯಾವರ ಮಹತೋಭಾರ ಶ್ರೀ ಸಿದ್ಧಿ ವಿನಾಯಕ ದೇವರ ಅವಬೃತೋತ್ಸವ ದಿನದ ಸಾಂಸ್ಕಂತಿಕ ವೈಭವದ ಕಾರ್ಯಕ್ರಮಗಳಿಗೂ ತಮ್ಮ ಕೃಷಿ ಗದ್ದೆಯ ಪ್ರದೇಶದಲ್ಲಿ ಸ್ಥಳಾವಕಾಶವನ್ನು ಒದಗಿಸುವ ಜೊತೆಗೆ ಚೌತಿ ಹಬ್ಬದ ಸಂದರ್ಭ ಕಟ್ಟುವ ತೆನೆ ಹಬ್ಬಕ್ಕೂ ತನ್ನ ಗದ್ದೆಯಲ್ಲಿ ಬೆಳೆದ ಭತ್ತದ ತೆನೆಯನ್ನು ಧರ್ಮಾತೀತವಾಗಿ ಉಚಿತವಾಗಿ ಒದಗಿಸುತ್ತಾರೆ ಜೂಲಿಯನ್ ದಾಂತಿ.

ಈ ತೆನೆ ಹಬ್ಬಕ್ಕಾಗಿಯೇ ತನ್ನ ಅರ್ಧ ಎಕರೆ ಗದ್ದೆಯಲ್ಲಿ ಎಪ್ರಿಲ್-ಮೇ ತಿಂಗಳಲ್ಲಿಯೇ ನಾಟಿ ಕೆಲಸವನ್ನು ಪೂರೈಸುತ್ತಾರೆ. ಸುಡು ಮಣ್ಣು, ಹಟ್ಟಿಗೊಬ್ಬರ ಬಳಸಿ ಸಾವಯವ ಕೃಷಿಯಲ್ಲಿ ಹೆಚ್ಚು ನೆಚ್ಚಿಕೊಂಡಿದ್ದು, ಸಮರ್ಪಕ ಮಳೆಯು ಸುರಿಯುವ ಮುನ್ನವೇ ಪಂಪ್ ಮೂಲಕ ಗದ್ದೆಗೆ ನೀರು ಹಾಯಿಸಿ ಕೃಷಿ ಚಟುವಟಿಕೆ ನಿರತರಾಗುವ ಜೂಲಿಯನ್ ದಾಂತಿ ಅವರ ಸೇವ ಮನೋಭಾವ ಬೆಳೆದ ಈ ಗದ್ದೆಯ ತೆನೆ ಭರಿತ ಫಸಲನ್ನು ತೆನೆ ಹಬ್ಬ ಹಾಗೂ ಬಾನಾಡಿಗಳ ಆಹಾರಕ್ಕಾಗಿ ಮೀಸಲಿಡುವುದು ಸರ್ವತ್ರ ಮಾದರಿಯಾಗಿದೆ.

ಕೃಷಿ ಮಣ್ಣಿನ ಕಂಪಿನ ಫಸಲನ್ನು ಕಳೆದ 25 ವರ್ಷಗಳಿಂದಲೂ ರಾಷ್ಟ್ರ, ಅಂತಾರಾಷ್ಟ್ರದಲ್ಲಿನ ಇಗರ್ಜಿಗಳಿಗೆ ಕನ್ಯಾ ಮರಿಯಮ್ಮನ ಜನ್ಮದಿನದಂದು ಆಚರಿಸುವ ತೆನೆ (ಕದಿರು)ಕಟ್ಟಲು ಹಾಗೂ ದೇಗುಲಗಳು, ಸಂಘ, ಸಂಸ್ಥೆಗಳು, ಕೌಟುಂಬಿಕವಾಗಿಯೂ ಫಸಲು ಭರಿತ ತೆನೆಯನ್ನು ಒದಗಿಸುತ್ತಾ ಬಂದಿರುವ ಉದ್ಯಾವರ ಕುತ್ಪಾಡಿಯ ಜೂಲಿಯನ್ ದಾಂತಿ ಸಮಗ್ರ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ.

Related posts

Leave a Reply

Your email address will not be published. Required fields are marked *