Breaking News

ಇಸ್ಕಾನ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಗಸ್ಟ್ ೧೫ರಂದು ಕೀರ್ತನೆ, ಸಾಂಸ್ಕೃತಿಕ ಕಾರ್ಯಕ್ರಮ ಟಿ.ವಿ ರಮಣ ಪೈ ಸಭಾಂಗಣದಲ್ಲಿ ಕಾರ್ಯಕ್ರಮ

ಮಂಗಳೂರಿನ ಬಲ್ಮಠದಲ್ಲಿರುವ ಇಂಟರ್‌ನ್ಯಾಶನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್‌ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಆಗಸ್ಟ್ ೧೫ರಂದು ನವಭಾರತ್ ಸರ್ಕಲ್ ಬಳಿ ಇರುವ ಟಿ.ವಿ. ರಮಣ ಪೈ ಸಭಾ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಅಧ್ಯಕ್ಷರಾದ ಕಾರುಣ್ಯ ಸಾಗರ್ ದಾಸ ತಿಳಿಸಿದರು.

ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಾರ್ಯಕ್ರಮವು ಎಲ್ಲಾ ಭಕ್ತರಿಗೆ ಅನುಕೂಲ ಮಾಡಿಕೊಡುವ ೧೦೮ ಮೆಟ್ಟಿಲುಗಳನ್ನೊಳಗೊಂಡ ಜಪ ಮಂಟಪ ಹರಿನಾಮ ಜಪ ಮಂಟಪದಿಂದ ಉದ್ಘಾಟನೆಗೊಳ್ಳಲಿದೆ. ಅಲ್ಲದೆ ದಿನಪೂರ್ತಿ ವೈಷ್ಣವ ಆಚಾರ್ಯರುಗಳಾದ ಪುರಂದರದಾಸರ, ಕನಕದಾಸ ಮುಂತಾದ ದಾಸವರೇಣ್ಯರ ಕೀರ್ತನೆಗಳನ್ನು ವಿವಿಧ ಕಲಾವಿದರು ಹಾಗೂ ಭಕ್ತರು ಹಾಡಲಿದ್ದಾರೆ. ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದೆ ಎಂದ ಅವರು, ಸಂಜೆ ೬ ಗಂಟೆಗೆ ಸರಿಯಾಗಿ ಪವಿತ್ರ ಮಹಾಮಂತ್ರ ಸಂಗೀತ ಕೀರ್ತನೆಗಳನ್ನೊಳಗೊಂಡು ಶ್ರೀ ಕೃಷ್ಣನಿಗೆ ಮಹಾ ಅಭಿಷೇಕ ನಡೆಯಲಿರುವುದು ಎಂದು ಮಾಹಿತಿ ನೀಡಿದರು.

ಈ ಸಂದರ್ಭ ನಿಕಿಲ್‌ತಮ ದಾಸ್, ಸುಧಾಕರ್ ರಾವ್ ಪೇಜಾವರ ಮತ್ತಿತ್ತರರು ಉಪಸ್ಥಿತರಿದ್ದರು.

ವರದಿ: ಶರತ್

Related posts

Leave a Reply