Header Ads
Breaking News

ಇಸ್ರೇಲ್‍ನಿಂದ ಮರಳಿದ ಕಾರ್ಕಳ ವ್ಯಕ್ತಿಗೆ ಕೊರನಾ ಶಂಕೆ ವಿಚಾರವಾಗಿ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿಯಿಂದ ಮಾಹಿತಿ

ಕಾರ್ಕಳ ಮೂಲದ ಕೊರೋನಾ ಶಂಕಿತ ವ್ಯಕ್ತಿಯ ಗಂಟಲು ದ್ರವವನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳಿಸಲಾಗಿದ್ದು, ಶನಿವಾರದೊಳಗೆ ವರದಿ ಕೈಸೇರಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸುಧೀರ್ ಚಂದ್ರ ಸೂಡ ಸ್ಪಷ್ಟಪಡಿಸಿದ್ದಾರೆ.

ಇಸ್ರೇಲ್ ನಿಂದ ಆಗಮಿಸಿದ್ದ ಕಾರ್ಕಳ ಮೂಲದ ವ್ಯಕ್ತಿಯನ್ನು ಕೊರೋನಾ ಶಂಕೆಯ ಹಿನ್ನೆಲೆಯಲ್ಲಿ ನಿನ್ನೆ ಉಡುಪಿಯ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು.ಈ ಸಂಬಂಧ ಇವತ್ತು ತುರ್ತು ಪತ್ರಿಕಾಗೋಷ್ಠಿ ಕರೆದ ವೈದ್ಯಾಧಿಕಾರಿ, ಇವತ್ತು ಬೆಳಿಗ್ಗೆ ಶಂಕಿತ ವ್ಯಕ್ತಿಯ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳಿಸಲಾಗಿದೆ. 48 ತಾಸಿನ ಒಳಗೆ ವರದಿ ಕೈಸೇರಲಿದೆ ಎಂದರು.

ಇಸ್ರೇಲ್ ನಿಂದ ಈ ವ್ಯಕ್ತಿ ಪತ್ನಿ ಜೊತೆಗೆ ಊರಿಗೆ ವಾಪಾಸಾಗಿದ್ದರು. ಆದರೆ ಪತ್ನಿಯಲ್ಲಿ ಯಾವುದೇ ಖಾಯಿಲೆಯ ಸಿಂಟ್ಮಮ್ಸ್ ಕಂಡು ಬರಲಿಲ್ಲ.ಇವರಲ್ಲಿ ಕೆಲವು ಸಿಂಟಮ್ಸ್ ಕಂಡು ಬಂದಿವೆ. ಹೀಗಾಗಿ ಆಸ್ಪತ್ರೆಯಲ್ಲಿ ಪತ್ಯೇಕ ಕೊಠಡಿಯಲ್ಲಿ ಇರಿಸಿ ನಿಗಾ ವಹಿಸಲಾಗಿತ್ತಿದೆ ಎಂದರು.ಈ ವ್ಯಕ್ತಿಯ ಕಂಡಿಷನ್ ನಿನ್ನೆಗಿಂತ ಚೇತರಿಕೆ ಇದೆ. ಆದರೆ ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹಬ್ಬಿಸಲಾಗುತ್ತಿದೆ.ನಮಗೆ ಇಂತಹ ವ್ಯಕ್ತಿಗಳು ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದರು.

ಕೊರೋನಾ ವೈರಸ್‍ಗೆ ಸಂಬಂಧಿಸಿದಂತೆ ಪುಣ್ಯಕ್ಷೇತ್ರ, ಸಮುದ್ರ ತೀರ, ಕಾಲೇಜು ಆವರಣಗಳಲ್ಲಿ ಕರಪತ್ರಗಳನ್ನು ಅಂಟಿಸಿ ಜನರಿಗೆ ಮಾಹಿತಿ ಒದಗಿಸುವ ಕಾರ್ಯವನ್ನು ನಮ್ಮ ಕಾರ್ಯಕರ್ತರು ಮಾಡುತ್ತಿದ್ದಾರೆ. ಮಣಿಪಾಲ ಯೂನಿವರ್ಸಿಟಿಯಲ್ಲಿ ಅಧಿಕ ಸಂಖ್ಯೆಯ ವಿದೇಶೀ ವಿದ್ಯಾರ್ಥಿಗಳು ಇರುವ ಕಾರಣ, ಹೊರದೇಶಗಳಿಂದ ಇಲ್ಲಿಗೆ ಬರುವ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದರು.

Related posts

Leave a Reply

Your email address will not be published. Required fields are marked *