

ಮಂಜೇಶ್ವರದ ಕುಂಬಳೆ ಸಮೀಪದ ಬಂಬ್ರಾಣ ಬತ್ತೇರಿ ಹೊಳೆಯಲ್ಲಿ ಈಜಲು ಇಳಿದ ಇಬ್ಬರು ಸಹೋದರರು ನೀರುಪಾಲಾಗಿದ್ದಾರೆ. ಬಂಬ್ರಾಣ ತುಂಬಿಯೋಡ್ ಹೌಸಿನ ಶೆರೀಫ್ ಎಂಬವರ ಪುತ್ರರಾದ ಶಹ್ದಾದ್ (12) ಹಾಗೂ ಶಾಝಿನ್ (8) ಮೃತ ದುರ್ದೆದೈವಿಗಳು. ಭಾನುವಾರ ಸಂಜೆ ಈ ದುರ್ಘಟನೆ ಸಂಭವಿಸಿದೆ. ಇಬ್ಬರು ಬಾಲಕರ ಮೃತ ದೇಹಗಳನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಯಿತು.