Header Ads
Breaking News

ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು

ಈಜಲು ಹೋಗಿ ಯುವಕನೋರ್ವ ನೀರು ಪಾಲಾದ ಘಟನೆ ಬಜಪೆ ಠಾಣಾ ವ್ಯಾಪಿಯ ಮಿತ್ತಬೈಲ್ ನಲ್ಲಿ ನಡೆದಿದೆ. ನೀರುಪಾಲಾದ ಯುವಕನನ್ನು ದೇಲಂತಬೆಟ್ಟುವಿನ ಕೈಯೂರು ನಿವಾಸಿ ಉದಯ ಆಚಾರ್ಯ ಎಂದು ಗುರುತಿಸಲಾಗಿದೆ, ಉದಯ ಆಚಾರ್ಯ ತನ್ನ ಒಂಬತ್ತು ಜನ ಗೆಳೆಯರೊಂದಿಗೆ ದೇಲಂತಬೆಟ್ಟು ನಂದಿನಿ ನದಿಗೆ ಈಜಲು ಬಂದಿದ್ದು ಈ ಸಂದರ್ಭ ಉದಯ ಆಚಾರ್ಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ತನ್ನ ಗೆಳೆಯರು ಉದಯನನ್ನು ರಕ್ಷಿಸಲು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಕೈಯೂರು ನಿವಾಸಿ ಉದಯ ಆಚಾರ್ಯ ಮಂಗಳೂರಿನ ಕೆ.ಪಿ.ಟಿ ಯಲ್ಲಿ ಪ್ರಥಮ ವರ್ಷದ ಐಟಿಐ ವಿದ್ಯಾರ್ಥಿಯಾಗಿದ್ದು, ಕೈಯೂರು ಕೃಷ್ಣ ಆಚಾರ್ಯ ಮತ್ತು ಸುಮತಿ ದಂಪತಿಯ ಏಕೈಕ ಪುತ್ರನಾಗಿದ್ದಾನೆ. ಬಜಪೆ ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Related posts

Leave a Reply

Your email address will not be published. Required fields are marked *