Header Ads
Header Ads
Header Ads
Header Ads
Header Ads
Header Ads
Breaking News

ಉಕ್ಕಿ ಹರಿಯುತ್ತಿದೆ ನಂದಿನಿ ನದಿ:ಕಿಲೆಂಜೂರು, ಮಿತ್ತಬೈಲು, ಮಲ್ಲಿಗೆಯಂಗಡಿ, ಕೊಡೆತ್ತೂರು ಜಲಾವೃತ

ಕರಾವಳಿ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮುಂದುವರಿದಿದೆ. ಸುರಿಯುತ್ತಿರುವ ಬಾರೀ ಮಳೆಗೆ ನಂದಿನಿ ನದಿ ಉಕ್ಕಿ ಹರಿಯುತ್ತಿದೆ. ಕಿಲೆಂಜೂರು, ಮಿತ್ತಬೈಲು, ಮಲ್ಲಿಗೆಯಂಗಡಿ, ಕೊಡೆತ್ತೂರು ಮತ್ತಿತರ ಕಡೆಗಳಲ್ಲಿ ತಗ್ಗು ಪ್ರದೇಶ ಜಲಾವೃತಗೊಂಡಿದೆ. ಮಿತ್ತಬೈಲಿನಲ್ಲಿ ಏಳು ಕುಟುಂಬದ 20 ಮಂದಿಯನ್ನು ಮುಲ್ಕಿ ಮಂತ್ರ ಸರ್ಫ್ ಕ್ಲಬ್ ಸದಸ್ಯರು ಮತ್ತು ಸ್ಥಳೀಯರು ಮೂರು ದೋಣಿಯಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.

ಕಿಲೆಂಜೂರು ರಾಘು ಕರ್ಕೇರ, ದೇವಕಿ ಕಡಪು, ಕೋಟಿ ದೇವಾಡಿಗ, ಬಾಬು ದೇವಾಡಿಗ, ಮೋನಪ್ಪ ಮೂಲ್ಯ, ಪುರಂದರ ದೇವಾಡಿಗ ಗೋವರ್ದನ ಮೂಲ್ಯ, ಗೋವಿಂದ ಪೂಜಾರಿ ವೆಂಕಪ್ಪ ಪೂಜಾರಿ, ದೂಜ ಶೆಟ್ಟಿ ಮತ್ತಿತರ 7 ಮನೆಗಳ 25 ಜನರನ್ನು ಸ್ಥಳಾಂತರಿಸಲಾಗಿದೆ. ಕಿಲೆಂಜೂರಿನಲ್ಲಿ ಅಗ್ನಿಶಾಮಕ ದಳದವರು ಮತ್ತು ಸ್ಥಳೀಯರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು ಕಿಲೆಂಜೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುನರ್ವಸತಿ ಕೇಂದ್ರ ತೆರೆಯಲಾಗಿದೆ.ಕೆಮ್ರಾಲ್ ಪಂಚಾಯತ್ ವ್ಯಾಪ್ತಿಯ ಅತ್ತೂರು ಬೈಲು ವೆಂಕಟ್ರಾಜ ಉಡುಪ, ಯಶೋದಾ ದೇವಾಡಿಗ, ಜನಾರ್ದನ ಉಡುಪ, ರವೀಂದ್ರ ದೇವಾಡಿಗ ಅವರ ಮನೆಗಳು ಜಲಾವೃತವಾಗಿದೆ, ಕಟೀಲು ನಂದಿನಿ ನದಿ ಉಕ್ಕಿ ಹರಿದುದರಿಂದ ಜಲಕದ ಕಟ್ಟೆಯ ಅಜಾರು ಕಿಂಡಿ ಅಣೆಕಟ್ಟು ಸಂಪೂರ್ಣ ಜಲಾವೃತಗೊಂಡಿದ್ದು ರಸ್ತೆ ಸಂಪರ್ಕ ಕಡಿದುಕೊಂಡಿದೆ. ಶಾಂಭವಿ ನದಿ ಉಕ್ಕಿ ಹರಿದು ಐಕಳ ಗ್ರಾಮ ಪಂಚಾಯಿತಿ ಮತ್ತು ಬಳ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವಾರು ಎಕೆರೆ ಭತ್ತ ನಾಟಿ ಮಾಡಿದ ಪ್ರದೇಶ ಜಲಾವೃತವಾಗಿದೆ. ಐಕಳ ಪಂಚಾಯಿತಿ ವ್ಯಾಪ್ತಿಯ ರಾಜ್ಯ ಹೆದ್ದಾರಿಯ ಸಂಕಲಕರಿಯ ಪಟ್ಟೆ ಕ್ರಾಸ್ ಮುಖ್ಯ ರಸ್ತೆಯಿಂದ ಒಳಗಿನ ಪಟ್ಟೆ ಜಾರಾಂದಾಯ ದೈವಸ್ಥಾನ ಹಾಗೂ ಶುಂಠಿಪಾಡಿಗೆ ಹೋಗುವ ರಸ್ತೆ ಮುಳುಗಡೆಯಾಗಿದೆ.ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಗೇರ ಬೈಲು ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಕರ್ನಿರೆ ಕೊಪ್ಪಲದಿಂದ ಅತಿಕಾರಿಬೆಟ್ಟು ಮುಲ್ಕಿ ಹೋಗುವ ರಸ್ತೆ ನೆರೆ ನೀರಿನಿಂದ ಆವೃತ್ತವಾಗಿದೆ. ಪಂಜ ಕೊಯಿಕುಡೆ, ಉಲ್ಯ, ಮೊಗಪಾಡಿ, ಬೈಲಗುತ್ತು, ಕುದ್ರು ಪ್ರದೇಶಗಳಲ್ಲಿ ಮನೆಗಳು ಜಲಾವೃತವಾಗಿದೆ. ಹತ್ತು ಕುಂಟುಂಬಗಳನ್ನು ದೋಣಿ ಮೂಲಕ ಸ್ಥಳೀಯ ಜನರ ಸಹಕಾರದೊಂದಿಗೆ ಸ್ಥಳಾಂತರಿಸಲಾಯಿತು. ಪಂಜದಿಂದ ಮಧ್ಯ ಖಡ್ಗೇಶ್ವರೀ ದೇವಳವನ್ನು ಸಂಪರ್ಕಿಸುವ ರಸ್ತೆ ನೆರೆಯಿಂದಾಗಿ ಮುಳುಗಡೆಯಾಗಿದೆ. ಅತ್ತೂರು, ಕಿಲೆಂಜೂರು ಪಂಜ, ಐಕಳ ಕಟೀಲು, ಮಿತ್ತಬೈಲ್, ಬಳ್ಕುಂಜೆ ಮತ್ತಿತರ ಪ್ರದೇಶಗಳ ಸಾವಿರಾರು ಎಕ್ಕರೆ ಕೃಷಿ ಭೂಮಿ ನಾಶವಾಗಿದೆ.
ಜಲಾವೃತಗೊಂಡ ಪ್ರದೇಶಗಳಿಗೆ ಮೂಲ್ಕಿ ವಿಶೇಷ ತಹಶೀಲ್ದಾರ್ ಮಾಣಿಕ್ಯ, ಕಂದಾಯ ನಿರೀಕ್ಷಕ ದಿಲೀಪ್ ರೂಡ್ಕರ್, ಗ್ರಾಮಕರಣಿಕ ಪ್ರದೀಪ್ ಶಣೈ, ಕಿರಣ್, ಸಂತೋಷ್, ಮಂಜುನಾಥ, ಪಂಚಾಯತ್ ಪ್ರಕಾಶ್,ರಮೇಶ್ ರಾಥೋಡ್, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್ ಬೊಳ್ಳೂರು, ತಾಲೂಕು ಪಂಚಾಯತ್ ಸದಸ್ಯ ದಿವಾಕರ ಕರ್ಕೇರ, ರಶ್ಮೀ ಆಚಾರ್ಯ, ಶುಭಲತಾ ಶೆಟ್ಟಿ. ಶರತ್ ಕುಬೆವೂರು, ಐಕಳ ಗ್ರಾ.ಪಂ. ಅಧ್ಯಕ್ಷ ದಿವಾಕರ ಚೌಟ, ಬಳ್ಕುಂಜೆ ಗ್ರಾ.ಪಂ. ಅಧ್ಯಕ್ಷ ದಿನೇಶ್ ಪುತ್ರನ್, ಕೆಮ್ರಾಲ್ ನಾಗೇಶ್ ಬೋಳ್ಳೂರು, ಕಟೀಲು ಗ್ರಾಪಂ. ಗೀತಾ ಪೂಜಾರ್ತಿ, ಕಿರಣ್ ಕುಮಾರ್ ಶೆಟ್ಟಿ, ಜನಾರ್ದನ ಕಿಲೆಂಜೂರು, ತಿಲಕ್, ಸುಧಾಕರ ಸಾಲ್ಯಾನ್ ಮತ್ತಿತರರು ಭೇಟಿ ನೀಡಿದರು.

Related posts

Leave a Reply

Your email address will not be published. Required fields are marked *