Header Ads
Header Ads
Breaking News

ಉಜಿರೆಯಲ್ಲಿ ’ಮಾಸ್ಟರ್‍ಸ್ ಪ್ಯಾಷನ್’ ಘಟಕದ ಉದ್ಘಾಟನಾ ಕಾರ್ಯಕ್ರಮ

ಉಜಿರೆ: ವಾಣಿಜ್ಯಶಾಸ್ತ್ರದ ವಿದ್ಯಾರ್ಥಿಗಳು ಸಾರ್ವಜನಿಕ ಆಡಳಿತದಲ್ಲಿ ಲಭ್ಯವಿರುವ ಉದ್ಯೋಗವಕಾಶಗಳನ್ನು ಸದುಪಯೋಗಿಸಿಕೊಳ್ಳುವುದರ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮಂಗಳೂರು ಬ್ಯಾಂಕ್ ಆಫ್ ಬರೋಡ ಕುಪ್ಪೆಪದವು ಶಾಖಾ ವ್ಯವಸ್ಥಾಪಕ ಸಂತೋಷ್ ಕುಮಾರ್ ಅಭಿಪ್ರಾಯಪಟ್ಟರು.ಉಜಿರೆಯ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ವಾಣಿಜ್ಯ ವಿಭಾಗದ ’ಮಾಸ್ಟರ್‍ಸ್ ಪ್ಯಾಷನ್’ ಘಟಕವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯಮ ಕ್ಷೇತ್ರದಲ್ಲಿನ ಉದ್ಯೋಗವಕಾಶಗಳ ಕಡೆಗೆ ಮಾತ್ರ ಯುವಕರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಕೇವಲ ಔದ್ಯಮಿಕ ವಲಯವನ್ನಷ್ಟೇ ಗಣನೆಗೆ ತೆಗೆದುಕೊಳ್ಳದೇ ಆಡಳಿತಾತ್ಮಕ ರಂಗವನ್ನೂ ಪ್ರವೇಶಿಸುವುದರ ಕಡೆಗೂ ಗಮನಹರಿಸಬೇಕು. ಸ್ಪರ್ಧಾತ್ಮಕ ಪರಿಕ್ಷೆಗಳಿಗಾಗಿ ಸಿದ್ಧಗೊಳ್ಳಬೇಕು. ಯೋಜಿತ ಕಾರ್‍ಯತಂತ್ರಗಳೊಂದಿಗೆ ಮುನ್ನಡೆದರೆ ಆಡಳಿತಾತ್ಮಕ ಹುದ್ದೆಗಳಿಗೆ ಆಯ್ಕೆಯಾಗಿ ಸಮಾಜಕ್ಕೆ ಮೌಲ್ಯಯುತ ಕೊಡುಗೆಗಳನ್ನು ನೀಡಲು ಸಾಧ್ಯ ಎಂದರು.

ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಡಿ.ಎಂ ಕುಲಸಚಿವರಾದ, ಕನ್ನಡ ಪ್ರಾಧ್ಯಾಪಕ ಡಾ.ಬಿ.ಸಂಪತ್ ಕುಮಾರ್ ಭಿನ್ನ ವ್ಯಕ್ತಿತ್ವ ರೂಪಿಸಿಕೊಳ್ಳುವ ಬಗೆಯನ್ನು ವಿಶ್ಲೇಷಿಸಿದರು. ವಿದ್ಯಾರ್ಥಿಗಳು ಭಿನ್ನವಾಗಿ ಯೋಚಿಸಿದಲ್ಲಿ ಮಾತ್ರ ಸಮಕಾಲೀನ ಜಗತ್ತಿಗೆ ಹೊಂದಿಕೊಳ್ಳಲು ಸಾಧ್ಯ. ಬದುಕಿನಲ್ಲಿ ಬದಲಾವಣೆ ಮಹತ್ತರ ಪಾತ್ರವಹಿಸುತ್ತದೆ. ಬಹುಮುಖಿ ಚಿಂತನೆಗಳ ಜೊತೆಗೆ ಸೃಜನಾತ್ಮಾಕತೆ ಇದ್ದಾಗ ಭಿನ್ನ ವ್ಯಕ್ತಿತ್ವ ನಿರ್ಮಾಣಗೊಳ್ಳಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಉದಯಚಂದ್ರ .ಪಿ.ಎನ್ ’ಮಾಸ್ಟರ್‍ಸ್ ಪ್ಯಾಷನ್’ ಘಟಕದ ಪದಾಧಿಕಾರಿಗಳಿಗೆ ಪ್ರಮಾಣವಚನ ಭೋಧಿಸಿದರು. ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಪ್ರೊ.ರವಿಶಂಕರ್ ’ವಿತ್ತ’ ಭಿತ್ತಿ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ವಿದ್ಯಾರ್ಥಿಗಳ ಪರಸ್ಪರ ಸಹಕಾರ ಜ್ಞಾನಭಿವೃದ್ಧಿಗೆ ಸಹಾಯಕ ಎಂದರು.ಕಾರ್‍ಯಕ್ರಮದಲ್ಲಿ ಸಹಾಯಕ ಪ್ರ್ರಾಧ್ಯಾಪಾಕ ಚಿದಾನಂದ ಹೆಚ್.ಎಲ್, ’ಮಾಸ್ಟರ್‍ಸ್ ಪ್ಯಾಷನ್’ ಘಟಕದ ಅಧ್ಯಕ್ಷ ಸುಹಾಸ್ ಮತ್ತು ಕಾರ್‍ಯದರ್ಶಿ ಉಜ್ವಲ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಚೈತ್ರಾ ಸ್ವಾಗತಿಸಿ. ಸಮನ್ವಿತ ನಿರೂಪಿಸಿ ನಿಶ್ಚಿತಾ ವಂದಿಸಿದರು.

 

Related posts

Leave a Reply

Your email address will not be published. Required fields are marked *