Header Ads
Header Ads
Breaking News

ಉಜಿರೆ ಗ್ರಾಮ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಡೆಂಗ್ಯೂ ಡ್ರೈವ್ ಡೇ’ ಎಂಬ ಜಾಗೃತಿ ಅಭಿಯಾನ

ಉಜಿರೆ: ಡೆಂಗ್ಯೂ ಮಾರಣಾಂತಿಕ ಕಾಯಿಲೆಯಾಗಿ ಅನೇಕ ಜನರನ್ನು ಬಲಿತೆಗೆದುಕೊಳ್ಳುತ್ತಿದೆ. ಸಾಕಷ್ಟು ಕಡೆ ಇದರ ಕುರಿತು ಅರಿವು ಮೂಡಿಸುತ್ತಿದ್ದರೂ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ನಾವು ಸುಶಿಕ್ಷಿತರಾಗದ ಹೊರತು ಈ ರೋಗದ ನಿರ್ಮೂಲನೆ ಸಾಧ್ಯವಿಲ್ಲ. ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿರುವುದರಿಂದ ಡೆಂಗ್ಯೂ ವ್ಯಾಪಿಸುತ್ತಿದೆ. ಆದಷ್ಟು ನೀರನ್ನು ಸಂರಕ್ಷಿಸಿಟ್ಟುಕೊಳ್ಳವ ಜಾಗದಲ್ಲಿ ಶುಚಿತ್ವ ಹಾಗೂ ನೈರ್ಮಲ್ಯತೆ ಕಾಪಾಡಬೇಕು ಎಂದು ಬೆಳ್ತಂಗಡಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಹೇಳಿದರು.
ಅವರು ಉಜಿರೆ ಶ್ರೀ ಧ.ಮಂ. ಪದವಿ ಕಾಲೇಜಿನ ಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಉಜಿರೆ ಗ್ರಾಮ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಡೆಂಗ್ಯೂ ಡ್ರೈವ್ ಡೇ’ ಎಂಬ ಜಾಗೃತಿ ಅಭಿಯಾನದ ಮುಖ್ಯ ಅತಿಥಿಯಾಗಿ ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಅರ್ಚನಾ ಮಾತನಾಡಿ, ವೈದ್ಯಲೋಕ ಅನೇಕ ರೋಗಗಳಿಗೆ ಔಷಧಿ ಕಂಡುಹಿಡಿದಿದೆ. ಆದ್ದರಿಂದ ಡೆಂಗ್ಯೂ ಖಾಯಿಲೆಯನ್ನು ತಡೆಗಟ್ಟಲೂ ಔಷಧಿ ಲಭ್ಯವಿದೆ. ರೋಗದ ಯಾವುದೇ ಲಕ್ಷಣಗಳು ಕಂಡುಬಂದರೂ ಜನರು ಸ್ವಯಂ ಚಿಕಿತ್ಸೆ ಪಡೆದುಕೊಳ್ಳದೆ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು. ಆರೋಗ್ಯಕರ ಆಹಾರ ಸೇವನೆಯಿಂದಲೂ ರೋಗವನ್ನು ತಡೆಗಟ್ಟಲು ಸಾಧ್ಯ ಎಂದು ನುಡಿದರು.
ಗ್ರಾಮ ಪಂಚಾಯತ್ ಕಾರ್ಯದರ್ಶಿ ಮಂಜು, ಕಾಲೇಜಿನ ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಪ್ರೊ. ಗಣೇಶ್ ವಿ. ಶೆಂಡ್ಯೆ, ಆರೋಗ್ಯ ಕೇಂದ್ರದ ಸಹಾಯಕಿ, ಎನ್.ಎಸ್.ಎಸ್ ಯೋಜನಾಧಿಕಾರಿ ಪ್ರೊ. ಆಶಾಕಿರಣ್ ಹಾಗೂ ಸ್ವಯಂಸೇವಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಎನ್.ಎಸ್.ಎಸ್.ನ ನಿಕಟಪೂರ್ವ ಕಾರ್ಯದರ್ಶಿ ಪೃಥ್ವೀಶ್ ಸ್ವಾಗತಿಸಿದರು. ಸ್ವಯಂಸೇವಕರಾದ ಅರವಿಂದ್ ನಿರೂಪಿಸಿ, ಸಂಕರ್ಷಣ್ ವಂದಿಸಿದರು.

ಫೋಟೋ: ಉಜಿರೆ ಶ್ರೀ ಧ.ಮಂ. ಪದವಿ ಕಾಲೇಜಿನ ಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಡೆಂಗ್ಯೂ ಡ್ರೈವ್ ಡೇ’ ಎಂಬ ಜಾಗೃತಿ ಅಭಿಯಾನದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಅರ್ಚನಾ ಮಾತನಾಡಿದರು.

Related posts

Leave a Reply

Your email address will not be published. Required fields are marked *