Header Ads
Breaking News

ಉಡುಪಿಯಲ್ಲಿ ಅಪರಿಚಿತ ಶವಗಳ ಅಂತ್ಯಸಂಸ್ಕಾರ-ಸಮಾಜಸೇವಕರ ಸಹಕಾರದಿಂದ ನಡೆದ ಅಂತ್ಯಸಂಸ್ಕಾರ

ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲಾಗಿದ್ದ, ಎರಡು ಅಪರಿಚಿತ ಶವಗಳ ವಾರಸುದಾರರು, ಪತ್ತೆಯಾಗದೆ ಇರುವುದರಿಂದ, ಎರಡು ಠಾಣೆಯ ಪೊಲೀಸರು, ಶವಗಳ ಅಂತ್ಯಸಂಸ್ಕಾರವನ್ನು ಸಮಾಜಸೇವಕರ ಸಹಕಾರದಿಂದ ನಡೆಸಿದರು. ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ಶವಗಳ ಸಾಗಿಸಲು ಉಚಿತ ಅಂಬುಲೇನ್ಸ್ ಸೇವೆ ಒದಗಿಸಿ ಇಲಾಖೆಗೆ ಸಹಕರಿಸಿತು.

ಕಾನೂನು ಪ್ರಕ್ರಿಯೆಗಳು ನಡೆದ ಬಳಿಕ, ಉಡುಪಿ ನಗರ ಪೊಲೀಸ್ ಠಾಣೆಯ ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು, ಮಣಿಪಾಲ ಠಾಣೆಯ ತನಿಖಾ ಸಹಾಯಕ ಆದರ್ಶ್ ನಾಯ್ಕ, ಸಿಬ್ಬಂದಿ ಉಮೇಶ್ ಇವರ ಸಮಕ್ಷಮದಲ್ಲಿ ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಅಂತಿಮ ಗೌರವಗಳ ಸಲ್ಲಿಸಿ ಎರಡು ಶವಗಳನ್ನು ಕಾನೂನಿನಂತೆ ದಫನದ ಮೂಲಕ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ನಡೆಸಿದರು. ಇದು ಇರ್ವರು ಸಮಾಜಸೇವಕರು ಇದುವರೆಗೆ ನಡೆಸಿರುವ ವಾರಸುದಾರರಿಲ್ಲದ 90 ನೇ ಶವದ ಅಂತ್ಯಸಂಸ್ಕಾರ ಎಂಬುವುದು ಉಲ್ಲೇಖನಿಯ.

Related posts

Leave a Reply

Your email address will not be published. Required fields are marked *