Header Ads
Header Ads
Header Ads
Breaking News

ಉಡುಪಿಯಲ್ಲಿ ಜಿಲ್ಲಾಮಟ್ಟದ ಕಮ್ಮಟ, ಸಮಾವೇಶ 15 ರಂದು ಶ್ಯಾಮಿಲಿ ಸಭಾಂಗಣದಲ್ಲಿ ಕಾರ್ಯಕ್ರಮ

ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟ ಹಾಗೂ ಡಾ. ಜಿ ಶಂಕರ್ಪ್ಯಾಮಿಲಿ ಟ್ರಸ್ಟ್ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ತದ ಭಜನಾ ಕಮ್ಮಟ ಮತ್ತು ಮಂಡಳಿಗಳ ಸಮಾವೇಶ ಅ.15 ರಂದು ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಭಜನಾಮಂಡಳಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಮಾಧವ ಸುವರ್ಣ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಮಾರಂಭದಲ್ಲಿ ಭಜನೆ ಮತ್ತು ಕುಣಿತ ಭಜನೆ ತರಭೇತಿ, ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಆಯ್ದ ಭಜನಾ ಮಂಡಳಿಗಳಿಗೆ ಹಾರ್ಮೋನಿಯಂ, ತಬಲಾ, ತಾಳಗಳ ವಿತರಣೆ ನಡೆಯಲಿದೆ ಎಂದರು. 15 ರಂದು ಬೆಳಗ್ಗೆ 10 ಕ್ಕೆ ನಾಡೋಜಾ ಜಿ.ಶಂಕರ್ ಸಮಾರಂಭ ಉದ್ಘಾಟಿಸಲಿದ್ದು ಇದೇ ಸಂದರ್ಬದಲ್ಲಿ ಭಜನೆಯ ಪ್ರಾತ್ಯಾಕ್ಷಿಕೆ ನಡೆಯಲಿದೆ.

ಭಜನಾ ತರಭೇತಿಯನ್ನು “ಭಜನಾ ಗುರುತಿಲಕ” ದೂರದರ್ಶನ ಸಂಗೀತ ನಿರ್ದೆಶಕ ಎಮ್.ಎಸ್. ಗಿರಿಧರ್ ನಡೆಸಿಕೊಡಲಿದ್ದಾರೆ, ಕುಣಿತದ ಭಜನಾ ತರಭೇತಿಯನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ , ಜನಪದ ಕಲಾವಿದ ಶಂಕರ್ ದಾಸ್ ಚೆಂಡ್ಕಳ ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಭಜನಾ ಮಂಡಳಿಗಳ ಜಿಲ್ಲಾ ಪ್ರದಾನ ಕಾರ್ಯದರ್ಶಿ ಎ.ಶಿವಕುಮಾರ್, ಸಂಘಟನಾ ಕಾರ್ಯದರ್ಶಿ ಸುಂದರ್ ಜತ್ತನ್ನ, ಕಿಶೋರ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ವರದಿ:ಪಲ್ಲವಿ ಸಂತೋಷ್

Related posts

Leave a Reply