Header Ads
Breaking News

ಉಡುಪಿಯಲ್ಲಿ ಜುಗಾರಿ ಅಡ್ಡೆಗೆ ದಾಳಿ: 20 ಮಂದಿ ಬಂಧನ, ಲಕ್ಷಾಂತರ ರೂ. ವಶ

ಪರವಾನಿಗೆ ಇಲ್ಲದೆ ಜುಗಾರಿ ಆಡುತ್ತಿದ್ದ ತಂಡವನ್ನು ಬಂಧಿಸಿ ಲಕ್ಷಾಂತರ ರುಪಾಯಿ ವಶಪಡಿಸಕೊಳ್ಳಲಾಗಿದೆ. ಉಡುಪಿ ತಾಲೂಕಿನ ಹಿಲಿಯಾಣ ಗ್ರಾಮದ ಹೈಕಾಡಿ ಎಂಬಲ್ಲಿರುವ ರಿಕ್ರೇಷಿಯನ್ ಕ್ಲಬ್ ಗೆ ದಾಳಿ ನಡೆಸಿದ ಕಾರ್ಕಳ ಎ ಎಸ್ಪಿ ಕೃಷ್ಣಕಾಂತ್ ಈ ಕಾರ್ಯಾಚರಣೆ ನಡೆಸಿದ್ದಾರೆ. 20 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಲ್ಲದೆ ಅಪಾರ ಪ್ರಮಾಣದ ಹಣ ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಸುರೇಶ್ ಜೆ. ಶೆಟ್ಟಿ ಹಿಲಿಯಾಣ, ಸುಭಾಷ ಶೆಟ್ಟಿ ಅಂಕದಕಟ್ಟೆ, ವಿಕ್ಟರ್ ಪಿಂಟೊ, ಸುಧಾಕರ ಅಮೀನ್, ಕಮಲಾಕ್ಷ ಮೂಲ್ಯ, ಶಿವರಾಮ ಸುಧಾಕರ ಶೆಟ್ಟಿ, ವಿಜಯ ಶೆಟ್ಟಿ, ಮುರುಳೀಧರ, ಚಿತ್ರಪಾಡಿ ಬಶೀರ, ಬಾಬು ಶೆಟ್ಟಿ, ಸೂಹನ್, ನವೀನ, ಮೋಹನ ನಾಯ್ಕ,ಸುರೇಶ ಶೆಟ್ಟಿ, ಸಂದೀಪ್, ಮಂಜುನಾಥ ಪ್ರಶಾಂತ, ಪ್ರಕಾಶ, ವಿನೋದ ಎಂದು ಗುರುತಿಸಲಾಗಿದೆ. ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕಟ್ಟಡದ ಒಳಗೆ ಅಂದರ್- ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದರು.ಈ ದಾಳಿಯಲ್ಲಿ 12.23 ಲಕ್ಷ ರುಪಾಯಿ, 12 ಕಾರುಗಳು, ಮೊಬೈಲ್-1, ಟೇಬಲ್-2, ಹಾಗೂ ಕಾರ್ಡಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Related posts

Leave a Reply

Your email address will not be published. Required fields are marked *