Header Ads
Breaking News

ಉಡುಪಿಯಲ್ಲಿ ಮಳೆಬರುವ ತನಕ ಇನ್ನು ಅರ್ಧಾವಧಿ ಶಾಲೆ

 ರಜೆ ಮುಗೀತು ಶಾಲೆ ಆರಂಭ ಅಂದ್ರೆ ಮಕ್ಕಳಿಗೆ ಟೆನ್ಶನ್. ಆದ್ರೆ ಈ ಬಾರಿ ಕರಾವಳಿಯಲ್ಲಿ ಉಲ್ಟಾ ಕೇಸ್. ಶಾಲೆ ಆರಂಭವಾಗುತ್ತಿದ್ದಂತೆ ನಗರದ 77 ಶಾಲೆಗಳ ಶಿಕ್ಷಕರು ಟೆನ್ಶನ್ ಮಾಡ್ಕೊಂಡಿದ್ದಾರೆ. 11 ಶಾಲೆಗಳ ಮುಖ್ಯೋಪಾದ್ಯಾಯರಂತೂ ನಮ್ಮಿಂದ ಸಾಧ್ಯವಿಲ್ಲ ಅಂತ ಮಕ್ಕಳಿಗೆ ಹಾಫ್ ಡೇ ಪಾಠ ಮಾಡಿ ಮನೆಗೆ ಕಳುಹಿಸುತ್ತಿದ್ದಾರೆ. ಇಷ್ಟಕ್ಕೂ ಮಕ್ಕಳಿಗಿಲ್ಲದ ಟೆನ್ಶನ್ ಶಿಕ್ಷಕರಿಗೆ ಯಾಕೆ ಅನ್ನೋ ಗೊಂದಲಕ್ಕೆ ಉತ್ತರ ಸಿಗ್ಬೇಕಾದ್ರೆ ನೀವು ಈ ಸ್ಟೋರಿ ನೋಡ್ಬೇಕು.

ಶಾಲೆಗಳು ಆರಂಭವಾದರೆ ವಿದ್ಯಾರ್ಥಿಗಳಿಲ್ಲ, ಶಿಕ್ಷಕರಿಲ್ಲ ಅಂತ ಹೇಳ್ತಿದ್ದೆವು, ಆದ್ರೆ ಈ ಬಾರಿ ನೀರಿಲ್ಲ ಅಂತ ಹೇಳುವ ಸ್ಥಿತಿ ಬಂದಿದೆ! ಹೌದು ಕಳೆದ ಮಳೆಗಾಲದಲ್ಲಿ ಅತೀಹೆಚ್ಚು ಮಳೆ ಬಂದರೂ,ಈ ಬೇಸಗೆಯಲ್ಲಿ ಉಡುಪಿಯಲ್ಲಿ ನೀರಿಲ್ಲ. ಶಾಲಾ ಅಧ್ಯಾಪಕರು ದಿನಬೆಳಗಾದ್ರೆ ಪರಿಸರದ ಬಾವಿಗಳಲ್ಲಿ ನೀರಿಗಾಗಿ ತಲಾಶ್ ಮಾಡುವ ಸ್ಥಿತಿ ಬಂದಿದೆ. ಇತಿಹಾಸದಲ್ಲೇ ಎಂದೂ ಕಾಣದ ಬರದ ಛಾಯೆ ಆವರಿಸಿದೆ. ಉಡುಪಿ ಜಿಲ್ಲೆಯಲ್ಲಿ ನೀರಿಲ್ಲ ಅನ್ನೋ ಕಾರಣಕ್ಕೆ ಶಾಲೆ ತೆರೆಯದೇ ಹೋದ ಉದಾಹರಣೆಯೇ ಇಲ್ಲ. ಈ ಬಾರಿ ೭೭ ಶಾಲೆಗಳು ನೀರಿನ ಗಂಭೀರ ಸಮಸ್ಯೆ ಎದುರಿಸುತ್ತಿದೆ.
ಈ ಪೈಕಿ ಹನ್ನೊಂದು ಶಾಲೆಗಳು ತರಗತಿಯನ್ನು ಅರ್ಧ ದಿನಕ್ಕೆ ಮೊಟಕುಗೊಳಿಸಿವೆ. ಈ ವಿಚಾರ ತಿಳಿದ ಶಿಕ್ಷಣ ಇಲಾಖೆ ಶಾಲೆ ಮುಚ್ಲೇಬಾರ್ದು ಅಂತ ಆದೇಶ ಮಾಡಿದೆ. ನೀರಿಲ್ಲ ಅಂದ್ರೆ ಮಕ್ಕಳಿಗೆ ಬಿಸಿಯೂಟ ಕೊಡೋದು ಹೇಗೆ? ಅದರಲ್ಲೂ ಪ್ರೌಡಾವಸ್ಥೆಗೆ ಬಂದ ವಿದ್ಯಾರ್ಥಿನಿಯರು ಇರುವ ಶಾಲೆಗಳಲ್ಲಿ ಶೌಚಾಲಯ ನಿರ್ವಹಣೆ ಮಾಡೋದು ಹೇಗೆ? ಅನ್ನೋದೇ ಶಾಲಾ ಆಡಳಿತ ಮಂಡಳಿಗಳಿಗೆ ದೊಡ್ಡ ತಲೆನೋವಾಗಿದೆ.
ಉಡುಪಿ ನಗರದ ಜೀವನದಿ ಸ್ವರ್ಣಾ ಬತ್ತಿಹೋಗಿದೆ. ವಾರ್ಡ್ ಗೆ ಒಂದು ಬಾರಿ- ಒಂದು ವಾರಗಳ ಕಾಲ ಮಾತ್ರ ಸರಭರಾಜು ಮಾಡುವಷ್ಟು ನೀರು ಸ್ಟಾಕ್ ಇದೆ. ಹಾಗಾಗಿ ಶಾಲೆಗಳಿಗೆ ನೀರು ಸರಭರಾಜು ಮಾಡಲು ಸಾಧ್ಯವಿಲ್ಲ ಎಂದು ನಗರಸಭಾ ಕಮಿಷನರ್ ಕಟ್ಟುನಿಟ್ಟಾಗಿ ಹೇಳಿದ್ದಾರೆ. ಎಲ್ಲಿಂದಲೋ ಬರುವ ಟ್ಯಾಂಕರ್ ಗಳ ನೀರು ಬಳಸಿ, ಮಕ್ಕಳ ಆರೋಗ್ಯ ಹದಗೆಟ್ರೆ ಏನು
ಮಾಡೋದು ಅಂತ ಪೋಷಕರಿಗೆ, ಶಿಕ್ಷಕರಿಗೆ ಆತಂಕ ಉಂಟಾಗಿದೆ. ಟ್ಯಾಂಕರ್ ನೀರಿನ ಶುದ್ಧತೆಯನ್ನು ಪರಿಶೀಲಿಸುವುದು ಕೂಡಾ ಶಾಲೆಗಳಿಗೆ ದೊಡ್ಡ ತಲೆನೋವಾಗಿದೆ. ಇನ್ನೂ ಒಂದು ವಾರಗಳ ಕಾಲ ಮಳೆ ಬರೋದು ಡೌಟು, ಹಾಗಾಗಿ ಶಾಲಾ ಅವಧಿಯನ್ನು ಮೊಟಕುಗೊಳಿಸುವುದು ಅಥವಾ ಶಾಲೆಗಳಿಗೆ ರಜೆ ನೀಡೋದೇ ಉತ್ತಮ ಎಂದು ಪೋಷಕರು ಅಭಿಪ್ರಾಯಪಟ್ಟಿದ್ದಾರೆ. ಇತ್ತ ಶಾಲಾ ಮಕ್ಕಳಿಗೂ ನೀರಿಲ್ಲದೇ ತೊಂದರೆ ಪಡುತ್ತಿದ್ದಾರೆ. ಜೊತೆಗೆ ಪಾಠದ ಅವ್ಯವಸ್ಥೆ ಏನೂ ಅಂತ ಚಿಂತೆಗೆ ಒಳಗಾಗಿದ್ದಾರೆ.ರಜೆಯ ಬದಲು ನೀರು ಒದಗಿಸಿ ಅಂತ ಒತ್ತಾಯಿಸುತ್ತಿದ್ದಾರೆ.ಆದ್ರೆ ಸದ್ಯದ ಸ್ಥಿತಿಯಂತೂ ನೀರಿಲ್ಲದೇ ಶೋಚನೀಯವಾಗಿದೆ.
ಈ ಬೇಸಗೆ ಕರಾವಳಿಗರಿಗೆ ಅತೀದೊಡ್ಡ ಪಾಠ. ಅದರಲ್ಲೂ ಶಾಲಾ ಆವರಣದಲ್ಲಿ ಜಲಮೂಲಗಳನ್ನು ಗುರುತಿಸದೇ ಇರುವುದು ಜಿಲ್ಲಾಡಳಿತದ ವೈಫಲ್ಯಕ್ಕೆ ಸಾಕ್ಷಿ. ಚುನಾವಣಾ ಕರ್ತವ್ಯದಲ್ಲಿ ಬ್ಯುಸಿಯಾಗಿದ್ದ ಜಿಲ್ಲಾಡಳಿತ, ಕುಡಿಯುವ ನೀರಿನಂತಹಾ ಗಂಭೀರ ಸಮಸ್ಯೆ ನಿರ್ವಹಿಸಲು ಉದಾಸೀನ ತೋರಿದ್ದೆ ಎಲ್ಲಾ ಸಮಸ್ಯೆಗೂ ಕಾರಣ.

Related posts

Leave a Reply

Your email address will not be published. Required fields are marked *