Header Ads
Breaking News

ಉಡುಪಿಯಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ : ಕರ್ನಾಟಕ ತಂಡದ 60ಕ್ಕಿಂತಲೂ ಅಧಿಕ ಮಂದಿಗೆ ಬಹುಮಾನ

ಬಂಟ್ವಾಳ: ಇತ್ತೀಚೆಗೆ ಉಡುಪಿಯ ಅಂಬಲಪಾಡಿಯಲ್ಲಿ ಬುಡೋಕಾನ್ ಕರಾಟೆ ಮತ್ತು ಸ್ಪೋಟ್ರ್ಸ ಅಸೋಸಿಯೇಷನ್ ವತಿಯಿಂದ ಜರುಗಿದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ ಹಾಗೂ ಮಂಗಳೂರಿನ ಕೆಪಿಟಿಯಲ್ಲಿ ನಡೆದ ಸ್ಫರ್ಧೆಯಲ್ಲಿ ಕಾನ್ ರಿಯೂ ಆರ್ ವಿ ಟೈಗರ್ ಸ್ಪೋರ್ಟ್ ಕರಾಟೆ ಡು ಕರ್ನಾಟಕ ತಂಡದ 60ಕ್ಕಿಂತಲೂ ಅಧಿಕ ಮಂದಿ ಕರಾಟೆ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಬಹುಮಾನವನ್ನು ಗೆದ್ದುಕೊಂಡಿದ್ದು ಅವರಿಗೆ ಬಿ.ಸಿ.ರೋಡಿನ ಶ್ರೀಅನ್ನಪೂರ್ಣೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನಂದನೆ ಸಲ್ಲಿಸಲಾಯಿತು. 

ನಿವೃತ್ತ ಮುಖ್ಯೋಪಾಧ್ಯಾಯ ಬಿ.ರಾಮಚಂದ್ರ ರಾವ್ ಮಿಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ನಾವು ಆಟವನ್ನು ಪ್ರೀತಿಸಿದಾಗ ಆ ಆಟದಲ್ಲಿ ಚಾಂಪಿಯನ್ ಆಗಲು ಸಾಧ್ಯವಿದೆ. ನಂಬರ್ ಒನ್ ಆಗುವುದು ಸುಲಭ ಆದರೆ ಅದನ್ನು ಉಳಿಸಿಕೊಳ್ಳುವುದು ಕಷ್ಟ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿತ್ರ ನಿರ್ದೇಶಕ ತಮ್ಮಣ್ಣ ಶೆಟ್ಟಿ ಮಾತನಾಡಿ ಸೋಲು ಗೆಲುವಿಗೆ ದಾರಿ ತೋರಿಸುತ್ತದೆ. ಸೋಲು ಗೆಲವನ್ನು ಪರಿಚರಿಯಿಸುತ್ತದೆ.ಆತ್ಮವಿಶ್ವಾಸ ಇದ್ದಾಗ ಸಾದನೆ ಮಾಡಲು ಸಾಧ್ಯವಿದೆ ಎಂದರು. ಸಂರ್ಸತೆಯ ನಿರ್ದೇಶಕ ಶಿಯಾನ್ ವಸಂತ ಕೆ.ಬಂಗೇರ ಮಾತನಾಡಿದರು. ವಿಜೇತರಿಗೆ ಪದಕಗಳನ್ನು ಹಸ್ತಾಂತರಿಸಿ ಅಭಿನಂದಿಸಲಾಯಿತು. ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *