Header Ads
Breaking News

ಉಡುಪಿಯಲ್ಲಿ ನರ್ಮ್ ಬಸ್‍ಗಳ ಸಂಚಾರ ಸ್ಥಗಿತ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗರಂ

ಉಡುಪಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ನರ್ಮ್ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದಕ್ಕೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗರಂ ಆಗಿದ್ದಾರೆ. ತಾವು ಮಂತ್ರಿಯಾಗಿದ್ದ ಅವಧಿಯಲ್ಲಿ ಬಡವರಿಗಾಗಿ ನರ್ಮ್ ಬಸ್‌ಗಳನ್ನು ತಂದಿದ್ದೆ. ಆದರೆ ನಂತರದ ದಿನಗಳಲ್ಲಿ ನರ್ಮ್ ಬಸ್ ಸೇವೆಯನ್ನು ಕಡಿತಗೊಳಿಸುತ್ತಾ ಬರಲಾಯಿತು. ಈಗ ಪೂರ್ತಿ ನಿಲ್ಲಿಸಲಾಗಿದೆ. ಇದು ನರ್ಮ್ ಬಸ್‌ಗಳನ್ನು ನಾಶ ಮಾಡುವ ಪ್ರಯತ್ನ. ತಕ್ಷಣ ನರ್ಮ್ ಬಸ್‌ಗಳ ಸೇವೆಯನ್ನು ಪುನರಾರಂಭಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ನಗರದ ವಯೋವೃದ್ಧರು ಮತ್ತು ವಿದ್ಯಾರ್ಥಿಗಳು ನರ್ಮ್ ಬಸ್ ನ್ನೇ ಅವಲಂಬಿಸಿದ್ದಾರೆ. ಇದೀಗ ಖಾಸಗಿ ಬಸ್ ಓಡಾಟ ಇಲ್ಲ ಎಂಬ ಕಾರಣಕ್ಕೆ ಅವುಗಳನ್ನೂ ನಿಲ್ಲಿಸಲಾಗಿದೆ.ಜನಸೇವಕರು ಜನರಿಗೆ ಅನುಕೂಲ ಮಾಡಿ ಕೊಡಬೇಕೇ ಹೊರತು ಅನಾನುಕೂಲ ಮಾಡಬಾರದು. ತಕ್ಷಣ ನರ್ಮ್ ಬಸ್ ಸೇವೆ ಪುನರಾರಂಭಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Related posts

Leave a Reply

Your email address will not be published. Required fields are marked *