Header Ads
Breaking News

ಉಡುಪಿಯಲ್ಲಿ ಪ್ರವಾದಿ ಮಹಮ್ಮದರ ಜೀವನ ಚರಿತ್ರೆ ಮತ್ತು ಸಂದೇಶ ಕಾರ್ಯಕ್ರಮ

ಉಡುಪಿ : ಅಜ್ನಾನದ ಕತ್ತಲೆಯನ್ನು ನಿವಾರಿಸಿ ಸುಜ್ನಾನದ ದೀಪವನ್ನು ಪ್ರವಾದಿಯವರು ಬೆಳಗಿಸಿದ್ದರು.ಪರಸ್ಪರ ಗೌರವದಿಂದ ಒಬ್ಬರಿಗೊಬ್ಬರು ಸಹಾಯ ಮಾಡುವ ಮೂಲಕ ಸಮಾಜದಲ್ಲಿ ಅನ್ಯೋನ್ಯತೆಯಿಂದ ಬಾಳಬೇಕು ಎಂಬ ಅವರ ಸಂದೇಶ ಇಂದಿಗೂ ಪ್ರಸ್ತುತವಾಗಿದೆ ಎಂದು ಕಲ್ಯಾಣಪುರ ಮಿಲಾಗ್ರಿಸ್ ಚರ್ಚನ ಧರ್ಮಗುರುಗಳಾದ ಫಾದರ್ ವೆಲೆರಿಯನ್ ಮೆಂಡೊನ್ಸಾ ಹೇಳಿದರು..

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಉಡುಪಿ ತಾಲೂಕು ಘಟಕದ ವತಿಯಿಂದ ಪರಸ್ಪರ ಅರಿತುಕೊಳ್ಳುವ ನಿಟ್ಟಿನಲ್ಲಿ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮ ಮಾನವತೆಯ ಪ್ರತಿಪಾದಕ ಪ್ರವಾದಿ ಮಹಮದ್ ರ ಜೀವನ ಚರಿತ್ರೆ ಮತ್ತು ಸಂದೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು..

ಮಲ್ಪೆ ಸೈಯಾದಿನಾ ಅಬೂಬಕರ್ ಸಿದ್ಧಿಕ್ ಜುಮ್ಮಾ ಮಸ್ಜಿದ್ ನ ಖತೀಬ್ ಇಮಾಮ್ ಮೌಲಾನಾ ಇಮ್ರನುಲ್ಲಾ ಖಾನ್ ಮನ್ಸೂರಿಯವರು ವಿಷಯವನ್ನು ಮಂಡಿಸಿದರು. ಬಳಿಕ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಅವರು ಮಾತನಾಡಿ ಜಾತಿ ಮತ ಭೇದಗಳಿಲ್ಲದೆ ನಾವೆಲ್ಲರು ಒಂದೇ ಎಂಬ ಭಾವನೆಗಳಿಂದ ಬದುಕುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಕಾರ್ಯಕ್ರಮದಲ್ಲಿ ಸರಕಾರಿ ಹಿರಿಯಡ್ಕ ಕಾಲೇಜಿನ ಪ್ರಾಂಶುಪಾಲರಾದ ಡಾ.ನಿಕೇತನ, ಶಾಂತಿ ನಿಕೇತನ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಂಚಾಲಕರಾದ ದಿನೇಶ್ ಕಿಣಿ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಮಹಮ್ಮದ್ ಯಾಸಿನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *