Header Ads
Header Ads
Breaking News

ಉಡುಪಿಯಲ್ಲಿ ಮಳೆಯ ಅವಾಂತರ : ಪೆರ್ಡೂರು – ಹರಿಕಂಡಿಗೆ ರಸ್ತೆ ಕುಸಿತ

ಉಡುಪಿಯಾದ್ಯಂತ ಭಾರೀ ಗುಡುಗು ಸಹಿತ ಮಾಳೆಯಾಗಿದೆ. ಮಳೆ ಆರ್ಭಟಕ್ಕೆ ಉಡುಪಿ ಜಿಲ್ಲೆಯ ಹಲವೆಡೆ ಹಾನಿ ಉಂಟಾಗಿದೆ. ಕಾರ್ಕಳ ಮತ್ತು ಉಡುಪಿಯನ್ನ ಸಂಪರ್ಕಿಸುವ ಪೆರ್ಡೂರು- ಹರಿಕಂಡಿಗೆ ರಸ್ತೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು ಸಂಪರ್ಕ ಕೊಂಡಿ ಕಳಚಿ ಹೋಗಿದೆ. ಗದ್ದೆಯಿಂದ ಏಕಾಏಕಿ ನುಗ್ಗಿದ ನೀರಿನಿಂದ ಹಂತ ಹಂತವಾಗಿ ರಸ್ತೆ ಕುಸಿಯ ತೊಡಗಿದ್ದು ಸಾರ್ವಜನಿಕರು ನೋಡನೋಡುತ್ತಿದ್ದಂತೆಯೇ ರಸ್ತೆ ಸಂಪೂರ್ಣ ಕುಸಿದಿದೆ. ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದು ತುರ್ತು ಕ್ರಮಕ್ಕೆ ಸೂಚಿಸಲಾಗಿದೆ. ಸದ್ಯ ರಸ್ತೆ ಕೊಚ್ಚಿ ಹೋಗಿದ್ದರಿಂದ ಬದಲಿ ರಸ್ತೆಗೆ ಸಾರ್ವಜನಿಕರು ಮೊರೆ ಹೋಗಿದ್ದಾರೆ.

Related posts

Leave a Reply

Your email address will not be published. Required fields are marked *