Header Ads
Breaking News

ಉಡುಪಿಯಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸ : ಕೊಲ್ಲೂರು ಮೂಕಾಂಬಿಕಾ ದೇಗುಲ ರಸ್ತೆಗೆ ಕೆಮಿಕಲ್ ಸಿಂಪಡಣೆ

ಉಡುಪಿಯಲ್ಲಿ ಈಗಾಗಲೇ 47 ಕೊರೋನಾ ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಕೊಲ್ಲೂರು ದೇವಸ್ಥಾನದ ರಸ್ತೆಯ ಜನ ಭಯಭೀತರಾಗಿದ್ದಾರೆ. ಉಡುಪಿಯಲ್ಲಿ ಮಹಾಮಾರಿ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ.ಆತಂಕದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ರಸ್ತೆ ಜನರಿದ್ದಾರೆ. ಕಾರಣ ಮೂಕಾಂಬಿಕಾ ದೇವಸ್ಥಾನದ ಸುತ್ತ ಕ್ವಾರಂಟೈನ್ ಸೆಂಟರ್ ಗಳು ಇದೆ.

ಲಾಡ್ಜ್, ಹಾಸ್ಟೆಲ್ ಗಳಲ್ಲಿ ಮಹಾರಾಷ್ಟ್ರ ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲೇ ಕ್ವಾರೆಂರೈನ್ ಆದವರಿಗೆ ಈಗಾಗಲೇ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆ ಆಗಿದ್ದು ಜನರ ಭಯಕ್ಕೆ ಕಾರಣಾವಾಗಿದೆ. ಈಗಾಗಲೇ ಕೊಲ್ಲೂರು ಮೂಕಾಂಬಿಕಾ ದೇಗುಲ ರಸ್ತೆಗೆ ಕೆಮಿಕಲ್ ಸಿಂಪಡಣೆ ಮಾಡಲಾಗಿದೆ.ಕೊಲ್ಲೂರು ದೇಗುಲದ ಹೊರ ಆವರಣ ಗೋಡೆಗೂ ಸ್ಯಾನಿಟೈಸೇಶನ್ ಮಾಡಲಾಗಿದ್ದು. ಕ್ವಾರಂಟೈನ್ ಕೇಂದ್ರದ ಗೋಡೆ, ಕಿಟಕಿ,ಸುತ್ತಲ ರಸ್ತೆಗೂ ದ್ರಾವಣ ಸಿಂಪಡಣೆ ಮಾಡಿ ಕ್ರಮ ಕೈಗೊಳ್ಳಲಾಗಿದೆ.ಕೊಲ್ಲೂರು ದೇಗುಲ ಸುತ್ತಮುತ್ತ 962 ಜನರ ಕ್ವಾರಂಟೈನ್ ಮಾಡಲಾಗಿದ್ದು ಅದರಲ್ಲಿ ಇನ್ನಷ್ಟು ಜನರ ರಿಪೊಟ್ ಬರಲು ಬಾಕಿ ಇದೆ.

Related posts

Leave a Reply

Your email address will not be published. Required fields are marked *