Header Ads
Breaking News

ಉಡುಪಿಯಲ್ಲಿ ಮೈಸೂರು ವಿಭಾಗೀಯ ಮಟ್ಟದ ದಸರಾ ಕ್ರೀಡಾಕೂಟ

 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲ್ಲಿ ಮೈಸೂರು ವಿಭಾಗೀಯ ಮಟ್ಟದ ದಸರಾ ಕ್ರೀಡಾಕೂಟ ಉಡುಪಿಯಲ್ಲಿ ನಡೆಯಿತು. ಪುಟ್ಬಾಲ್, ಲಾನ್ ಟೆನ್ನಿಸ್, ಈಜು, ಬಾಕ್ಸಿಂಗ್, ಅರ್ಚರಿ ಮತ್ತು ಫೆನ್ಸಿಂಗ್ ವಿಭಾಗದಲ್ಲಿ ಸ್ಪರ್ದೆಗಳು ನಡೆದವು. ಟ್ರಾಕ್ ವಿಭಾಗದ ಕ್ರೀಡೆಗಳು ಮುಗಿದಿದ್ದು ಇದೀಗ ಇತರ ವಿಭಾಗದಲ್ಲಿನ ಸ್ಪರ್ದೆ ನಡೆಯಿತು. ವಿವಿಧ ಜಿಲ್ಲೆಯ ನೂರಾರು ಕ್ರೀಡಾಪಟುಗಳು ಈಜು, ಬಾಕ್ಸಿಂಗ್ ಸೇರಿದಂತೆ ಅನೇಕ ಕ್ರೀಡೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಆದ್ರೆ ಕ್ರೀಡಾಪಟುಗಳ ಉತ್ಸಾಹ ಜನಪ್ರತಿನಿಧಿಗಳಲ್ಲಿ ಕಂಡು ಬಂದಿಲ್ಲ. ಕಾರ್ಯಕ್ರಮ ಉದ್ಘಾಟನೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಸಹಿತ , ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಜಿಲ್ಲೆಯೆ ಎಲ್ಲಾ ಶಾಸಕರು ಹಾಗೂ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿತ್ತು.ಆದ್ರೆ ಯಾವೊಬ್ಬ ಜನಪ್ರತಿನಿಧಿಗಳು ಕ್ರೀಡಾಕೂಟದತ್ತ ಸುಳಿಯಲಿಲ್ಲ,. ಜಿಲ್ಲಾ ಪಂಚಾಯತ್ ಅದ್ಯಕ್ಷರಾಗಲೀ, ಉಪಾದ್ಯಕ್ಷರಾಗಲೀ ಪತ್ತೆ ಇರಲಿಲ್ಲ. ಕೊನೆಗೆ ಉದ್ಘಾಟನಾ ಕಾರ್ಯಕ್ರಮವನ್ನು ರದ್ದುಗೊಳಿಸಿ ಕ್ರೀಡಾಕೂಟ ಮುಂದುವರೆಸಲಾಯಿತು. ಈ ಮೂಲಕ ದಸರಾ ಕ್ರೀಡಾಕೂಟ ನೀಓರಸವಾಗಿ ನಡೆಯಿತು.

Related posts

Leave a Reply

Your email address will not be published. Required fields are marked *