Header Ads
Header Ads
Breaking News

ಉಡುಪಿಯಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ಸಪ್ತಾಹ ಆಚರಣೆ:ಕಾಲೇಜು ವಿದ್ಯಾರ್ಥಿಗಳಿಂದ ಜಾಗೃತಿ ಜಾಥ

ವಿಶ್ವ ಮಾದಕ ವಸ್ತು ವಿರೋಧಿ ಸಪ್ತಾಹ ಆಚರಣೆಯು ಇಂದು ಉಡುಪಿಯಲ್ಲಿ ನಡೆಯಿತು. ಉಡುಪಿ ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಸೇರಿದಂತೆ ವಾರ್ತ ಇಲಾಖೆ ಹಾಗೂ ಎಂ ಜಿ ಎಂ ಮಹಾತ್ಮ ಗಾಂಧಿ ಸ್ಮರಕ ನಿಧಿ ಸಹಭಾಗಿತ್ವದಲ್ಲಿ ನಡೆಯಿತು. ಉಡುಪಿ ಬೊರ್ಡ್ ಹೈಸ್ಕೂಲ್‌ನಿಂದ ಎಂಜಿಎಂ ಕಾಲೇಜಿನವರೆಗೆ ವಿವಿಧ ಕಾಲೇಜು ವಿಧ್ಯಾರ್ಥಿಗಳಿಂದ ಜಾಗೃತಿ ಜಾಥ ನಡೆಯಿತು. ಎಂಜಿಎಂ ರವಿಂದ್ರ ಮಂಟಪದಲ್ಲಿ ವಿಶ್ವ ಮಾದಕ ವಿರೋಧಿ ಸಪ್ತಾಹ ಜರುಗಿತು. ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಅದ್ಯಕ್ಷೆ ನಳಿನಿ ಪ್ರದೀಪ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮಾತನಾಡಿ ಮಾದಕ ವ್ಯಸನದಿಂದ ಯುವ ಜನತೆ ದೂರ ಇರುವುದರ ಜೊತೆಗೆ ಯುವ ಜನಾಂಗ ದ ಮಾದಕ ವಸ್ತುಗಳ ದುಷ್ಪರಿಣಾಮ ದ ಬಗ್ಗೆ ನಿತ್ಯ ಹರಿಮೂಡಿಸುವ ಕಾರ್ಯ ನಡೆಸಿದ್ರೆ ಈ ಮಾದಕ ವಸ್ತು ವಿನ ವಿಷ ವರ್ತುಲದಿಂದ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದ್ರು. ಕಾರ್ಯಕ್ರಮದಲ್ಲಿ ಗಾಂಧಿ ಅದ್ಯಯನ ಕೇಂದ್ರದ ಸಂಶೋಧಕ ವಿನೀತ್ ರಾವ್, ವಾರ್ತಾಧಿಕಾರಿ ಖಾದರ್ ಶಾ, ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಎಂ ವಿಜಯ, ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ರೋಹಿನಿ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *