Header Ads
Header Ads
Breaking News

ಉಡುಪಿಯಲ್ಲಿ ಸಂತ ಸಮ್ಮೇಳನ

ಗೋಹತ್ಯೆ ನಿಷೇದ ಜಾರಿ, ಸಮಾನ ನಾಗರಿಕ ಸಂಹಿತೆ ಹಾಗೂ ಜನಸಂಖ್ಯೆ ನಿಯಂತ್ರಣ ಕಾನೂನು ಜಾರಿಗೊಳಿಸಲು ಉಡುಪಿಯಲ್ಲಿ ನಡೆದ ಸಂತರ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಕೃಷ್ಣ ಮಠದ ರಾಜಾಂಗಣದಲ್ಲಿ ಯೋಗಗುರು ಬಾಬಾ ರಾಮ್ ದೇವ್, ಪೇಜಾವರ ಮಠದ ಹಿರಿಯ ಮಠಾದೀಶ ವಿಶ್ವೇಶವರ ತೀರ್ಥ ಶ್ರೀಪಾದಾರ ಸೇರಿದಂತೆ 18 ಯತಿಗಳ ಕೂಡುವಿಕೆಯಲ್ಲಿ ಸಂತ ಸಮ್ಮೇಳನ ನಡೆಯಿತು. ದೀಪ ಬೆಳಗಿಸುವ ಮೂಲಕ ಸಂತರು ಸಮ್ಮೇಳನ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪೇಜಾವರ ಶ್ರೀ ರಾಷ್ಟ್ರದಲ್ಲಿ ಗೋಹತ್ಯೆ ನಿಷೇಧವಾಗಬೇಕು. ಗಂಗಾ ಶುದ್ಧೀಕರಣ ಆಗಬೇಕು. ಗೋವು ಹತ್ಯೆ ಮಾನವೀಯತೆಗೆ ಎಸಗುವ ದ್ರೋಹ. ಭಾರತದ ರಾಷ್ಟ್ರೀಯ ಪ್ರಾಣಿ ಗೋವು ಆಗಲಿ.ಹುಲಿ ರಾಷ್ಟ್ರ ಪ್ರಾಣಿಯಾಗಿದ್ದಕ್ಕೆ ಭಯೋತ್ಪಾದನೆ ಹೆಚ್ಚಾಗುತ್ತದೆ. ಆತಂಕವಾದ ಅನುಕಂಪವಾದ ಆಗಬೇಕು. ಗಂಗೆ ನಮ್ಮನ್ನು ಶುದ್ಧೀಕರಣ ಮಾಡಬೇಕು. ನಾವು ಗಂಗೆಯನ್ನು ಶುದ್ಧೀಕರಣ ಮಾಡುವಂತೆ ಆಗಿದ್ದು ವಿಪರ್ಯಾಸ ಎಂದರು.
18 ಯತಿಗಳು ಈ ಸಂತ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಗೋಹತ್ಯೆ ನಿಷೇದ ಜಾರಿ, ಸಮಾನ ನಾಗರಿಕ ಸಂಹಿತೆ ಹಾಗೂ ಜನಸಂಖ್ಯೆ ನಿಯಂತ್ರಣ ಕಾನೂನು ಜಾರಿಗೊಳಿಸಲು ಆಗ್ರಹಿಸಿ ನಿರ್ನಕಯ ಮಾಡಿ ಕೇಂದ್ರಕ್ಕೆ ಹಾಗೂ ರಾಷ್ಟ್ರಪಟೊಗಳಿಗೆ ರವಾನೆ ಮಾಡಲು ಸಮ್ಮೇಳನ್ದಲ್ಲಿ ನಿರ್ಧರಿಸಲಾಯಿತು.

Related posts

Leave a Reply

Your email address will not be published. Required fields are marked *