Header Ads
Header Ads
Breaking News

ಉಡುಪಿಯಲ್ಲಿ ಹಲಸು ಮೇಳ : ವೈವಿದ್ಯಮಯ ಹಲಸಿನ ಖಾದ್ಯ ಸವಿದ ಹಲಸು ಪ್ರೀಯರು

 ಒಂದು ಕಾಲದಲ್ಲಿ ಬಿದ್ದು ಹಾಳಾಗುತ್ತಿದ್ದ ಹಣ್ಣಿದ್ದು. ಆದ್ರೆ ಈಗ ಮಾತ್ರ ಇದಕ್ಕೆ ಬಾರೀ ಬೇಡಿಕೆ …ಮಾತ್ರವಲ್ಲದೇ ಇದರ ರುಚಿಕರವಾದ ಖಾದ್ಯಗಳು ದೇಶ ವಿದೇಶಕ್ಕೆ ರಪ್ತಾಗುತ್ತಿದೆ. ಇದೀಗ ಉಡುಪಿಯಲ್ಲಿ ಈ ಹಣ್ಣಿನ ಮೇಳ ನಡೆದಿದ್ದು ಹಲವರ ಬಾಯಿ ಚಪ್ಪರಿಸುವಂತೆ ಮಾಡಿದೆ. ಈ ಹಣ್ಣಾವುದು ಅಂತೀರಾ? ಇಲ್ಲಿದೆ ನೋಡಿ…

ಹಲಸು ಒಂದು ಕಾಲದಲ್ಲಿ ಬೇಡಿಕೆ ಇಲ್ಲದ ಹಣ್ಣು ಆದ್ರೆ ಇದೀಗ ಹಲಸಿಗೆ ಭಾರೀ ಬೆಡಿಕೆ ಬಂದಿದೆ. ಎಷ್ಟು ಬೇಡಿಕೆ ಅಂದ್ರೆ ಇದೀಗ ಅದರ ಜಾತ್ರೆಯೇ ನಡೆಯುತ್ತದೆ.ಇಂತಹ ಹಲಸು ಮೇಳ ಉಡುಪಿಯಲ್ಲಿ ನಡೆಯಿತು.ಹಲಸಿನ ಹಪ್ಪಳ,ಗಾರಿಗೆ ,ಮುಳ್ಕ, ಚಿಪ್ಸ್, ಉಡ್ಲುಂಗ ,ಗಟ್ಟಿ ,ಇಡ್ಲಿ, ಹಲಸಿನ ಬೀಜದ ಬರ್ಫಿ,ಹಲ್ವಾ,ಐಸ್ ಕ್ರೀಂಅಬ್ಬಾಒ॒ಂದೇ ಎರಡೇ..ಉಡುಪಿಯಲ್ಲಿ ನಡೆದ ಹಲಸುಮೇಳದಲ್ಲಿ ಹಲಸಿನ ವೈವಿಧ್ಯಮಯ ರುಚಿಗಳ ಲೋಕವೇ ಅನಾವರಣಗೊಂಡಿತ್ತು.ಇಲ್ಲಿನ ದೊಡ್ಡಣಗುಡ್ಡೆಯಲ್ಲಿ ಎರಡು ದಿನಗಳ ಕಾಲ ಏರ್ಪಡಿಸಿರುವ ಹಲಸಿನ ಮೇಳದ ದೃಶ್ಯ ಇದು.ದುಬಾರಿಯಲ್ಲದ , ಬಡವರ ರ ಕೈಗೂ ಎಟಕುವ ಹಣ್ಣುಗಳ ಪೈಕಿ ಹಲಸಿಗೆ ಮೊದಲ ಸ್ಥಾನ.ಇಂತಹ ಹಲಸಿನ ಹಣ್ಣಿನ ಮೇಳ ನಡೆದರೆ ಕೇಳಬೇಕೇ? ಹಲಸು ಪ್ರಿಯರು ಉಡುಪಿಯಲ್ಲಿ ನಡೆದ ಮೇಳಕ್ಕೆ ಲಗ್ಗೆ ಹಾಕಿ ವೆರೈಟಿ ಹಲಸಿನ ತಿಂಡಿಗಳನ್ನು ಸವಿದು ಖುಷಿಪಟ್ರು.

ಹೀಗೆ ವೈವಿಧ್ಯಮಯ ತಿನಿಸುಗಳ ಲೋಕವೇ ಮೇಳದಲ್ಲಿ ತೆರೆದುಕೊಂಡಿತ್ತು. ಮಕ್ಕಳು ,ಮಹಿಳೆಯರು ವೃದ್ಧರಾದಿಯಾಗಿ ???ಲ್ಲ ವಯಸ್ಸಿನವರನ್ನೂ ಈ ಮೇಳ ಸೂಜಿಗಲ್ಲಿನಂತೆ ಸೆಳೆದಿತ್ತು.ಬರೀ ತಿನಿಸುಗಳಷ್ಟೇ ಅಲ್ಲದೆ ,ಹಲಸಿನ ವೈವಿಧ್ಯಮಯ ತಳಿಯ ಗಿಡಗಳೂ ಇಲ್ಲಿದ್ದವು.ಮನೆಯಲ್ಲೂ ಬೆಳೆಸಬಹುದಾದ ಹಲಸಿನ ತಳಿಗಳನ್ನು ಜನ ಖರೀದಿಸುವುದು ಕಂಡು ಬಂತು.ಜೊತೆಗೆ ಹಲಸು ಕೃಷಿಯ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ನೀಡುವ ವ್ಯವಸ್ಥೆಯನ್ನೂ ಇಲಾಖೆ ಮಾಡಿತ್ತು.

 ಈ ಹಲಸು ಮೇಳದಲ್ಲಿ ಅನೇಕ ವೈವಿದ್ಯಮಯ ಖಾದ್ಯಗಳ ಪರಿಚಯವಾಯಿತು. ಹಲಸಿನಿಂದ ಐಸ್ ಕ್ರೀಮ್ ಕೂಡಾ ಮಾಡಬಹುದು ಎಂಬುದನ್ನ ಪ್ರಾತ್ಯಾಕ್ಷಿಕೆ ಮೂಲಕ ತಿಳಿಸಲಾಯಿತು. ಒಟ್ಟಾರೆ ಎರಡು ದಿನಗಳ ಈ ಹಲಸು ಮೇಳ ಉಡುಪಿ ಜನತೆಯ ಹೊಟ್ಟೆ ತಣಿಸಿದ್ದು ಮಾತ್ರ ಸತ್ಯ.

Related posts

Leave a Reply

Your email address will not be published. Required fields are marked *