Header Ads
Breaking News

ಉಡುಪಿಯಲ್ಲೆಡೆ ಶ್ರದ್ಧಾ ಭಕ್ತಿಯಿಂದ ಗುಡ್ ಫ್ರೈಡೇ ಆಚರಣೆ

ಕ್ರೈಸ್ತರಿಗೆ ಅತೀ ಪವಿತ್ರವೆನಿಸಿದ, 2,000 ವರುಷಗಳ ಹಿಂದೆ ಪ್ರಭು ಏಸುವನ್ನು ಶಿಲುಬೆಗೇರಿಸಿದ ಶುಭಶುಕ್ರವಾರವಾದ ಇಂದು ಪ್ರತೀ ವರ್ಷದಂತೆ ಕಾರ್ಕಳ, ಕ್ರೈಸ್ಟ್ ಕಿಂಗ್ ಇಗರ್ಜಿಯಲ್ಲಿ, ಏಸು ಸ್ವಾಮಿಯ ಜೀವನ ಚರಿತ್ರೆಯನ್ನು ಸಾರುವ ದೃಷ್ಯಾವಳಿಯನ್ನು ಕಾರ್ಕಳ ಕ್ರೈಸ್ಟ್ ಕಿಂಗ್ ಇಗರ್ಜಿ ವಠಾರದಲ್ಲಿ ನಟನೆಯ ಮೂಲಕ ಪ್ರದರ್ಶಿಸಲಾಯಿತು.

ಚರ್ಚ್ ಧರ್ಮಗುರುಗಳಾದ ವಂದನೀಯ ಜೋಸ್ವಿ ಫೆರ್ನಾಂಡಿಸ್ ಅವರ ಮಾರ್ಗದರ್ಶನದೊಂದಿಗೆ ಚರ್ಚ್ ಸದಸ್ಯರಾದಂತಹ ರೊನಿ ಸ್ನೇಹ ಸಂಯೋಜಿಸಿದ ಈ ಮನಮಿಡಿಯುವ ಪ್ರದರ್ಶನದಲ್ಲಿ 40ಕ್ಕೂ ಮಿಕ್ಕಿ ಚರ್ಚ್ ಸದಸ್ಯರ ಮನೋಜ್ಞ ಅಭಿನಯ ಪ್ರೇಕ್ಷಕರ ಕಣ್ಣುಗಳನ್ನು ತೇವಗೊಳಿಸಿತು.

ಪ್ರಭು ಏಸುವಿನ ಪಾತ್ರದಲ್ಲಿ ದೀಪಕ್ ಡಿಮೆಲ್ಲೊ ರವರು ಅದ್ಭುತ್ತ ನಟನೆ ನೀಡಿದರೆ, ಏಸುವಿನ ಮಾತೆ ಮೇರಿಯ ಪಾತ್ರವನ್ನು ಶರಿಟಾ ನೊರೊನ್ಹ ಸುಂದರವಾಗಿ ನಿರ್ವಹಿಸಿದರು.

ಮುಖ್ಯ ಸಿಪಾಯಿಗಳ ಪಾತ್ರಗಳನ್ನು ಹ್ಯಾರಿಸ್ಟನ್, ನೀಲ್, ಎಲ್ರೋಯ್, ಆಲ್ಬರ್ಟ್, ಎರೊನ್ ಮುಂತಾದವರು ನಿರ್ವಹಿಸಿದರು.

ಏಸುವಿನ ಸಮೀಪದ ಶಿಷ್ಯನಾಗಿ ಡೆನಿಸ್ ಕಾರ್ಡೋಜ, ಸಹಾಯಕ ಸೈಮನ್ ಪಾತ್ರದಲ್ಲಿ ಹ್ಯಾನ್ಸಿ ಕೆಸ್ತಲಿನೊ, ವೆರೊನಿಕಾ ಪಾತ್ರದಲ್ಲಿ ಅನಿಷಾ ನಜ್ರೆತ್ ಉತ್ತಮ ನಟನೆಯ ಮೂಲಕ ಪ್ರದರ್ಶನ ನೀಡಿದರು.

Related posts

Leave a Reply

Your email address will not be published. Required fields are marked *