Header Ads
Header Ads
Breaking News

ಉಡುಪಿಯ ಉದ್ಯಾವರದಲ್ಲಿ ಪೈಪು ಒಡೆದು ನೀರು ಪೋಲು

ಉಡುಪಿ ಉದ್ಯಾವರ ಸಮೀಪ ಬಲಾಯಿ ಪಾದೆ ಬಳಿ ನಗರಸಭೆಯ ನೀರು ಸರಬರಾಜು ಪೈಪು ಒಡೆದು ಮೂರು ತಿಂಗಳು ಕಳೆದರೂ ಸರಿಪಡಿಸುವ ಗೋಜಿಗೆ ನಗರಸಭೆಯ ಅಧಿಕಾರಿಗಳು ಮುಂದಾಗಲಿಲ್ಲ. ಈ ಬಗ್ಗೆ ಸ್ಥಳೀಯರು ನಗರ ಸಭೆಯ ಗಮನಕ್ಕೆ ತಂದರು ಪ್ರಯೋಜನವಾಗಲಿಲ್ಲ . ಪ್ರತಿದಿನ ಕುಡಿಯುವ ನೀರಿಗೆ ಪರದಾಟ ಮಾಡುತ್ತಿದ್ದಾರೆ. ಆದರೆ ಈ ತೋಡಿನಲ್ಲಿ ನೀರು ಕಾರಂಜಿ ತರ ಪ್ರತಿದಿನ ಹೊರಚಿಮ್ಮುತ್ತದೆ. ಈ ದಾರಿಯಲ್ಲಿ ಪ್ರತಿದಿನ ಜನಪ್ರತಿನಿಧಿಗಳು ಓಡಾಟ ಮಾಡಿದರು ಅವರ ಗಮನಕ್ಕೆ ಬಂದಿಲ್ಲ. ಕಣ್ಣು ಇದ್ದರು ಕುರುಡರಂತೆ ವರ್ತಿಸುತ್ತಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದರೆ. ಇನ್ನಾದರೂ ನಗರಸಭೆ ಸದಸ್ಯರು ಮತ್ತು ಅಧಿಕಾರಿಗಳು ಹೊಡೆದು ಹೊರಚಿಮ್ಮುವ ನೀರಿನ ಪೈಪನ್ನು ಸರಿಪಡಿಸುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ

Related posts

Leave a Reply

Your email address will not be published. Required fields are marked *