Header Ads
Breaking News

ಉಡುಪಿಯ ಕೊಡಂಕೂರಿನಲ್ಲಿ ತ್ಯಾಜ್ಯ ನೀರಿನ ಹಾವಳಿ : ಮಾಸ್ ಇಂಡಿಯಾದಿಂದ ಹೋರಟಕ್ಕೆ ಸಿದ್ಧತೆ

ಉಡುಪಿಯ ಕೊಡಂಕೂರಿನಲ್ಲಿ ವಿಷಯುಕ್ತ ತ್ಯಾಜ್ಯ ನೀರಿನಿಂದ ಸ್ಥಳೀಯರು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಇರುವ ಈ ತ್ಯಾಜ್ಯ ನೀರಿನ ಸಮಸ್ಯೆ ಈ ಬಾರಿ ಉದ್ಭವಿಸಿದ್ದು ಮಾರಕ ರೋಗಗಳಿಗೆ ಆಹ್ವಾನ ನೀಡುತ್ತಿದೆ. ಇತ್ತ ನಗರಸಭೆ, ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೇ ಕಣ್ಮುಚ್ಚಿಕೂತಿದೆ.

ಇದು ಉಡುಪಿಯ ಕೊಡಂಕೂರು ವಾರ್ಡ್ ನಲ್ಲಿ ಕಂಡು ಬರುವ ದೃಶ್ಯ. ಕೊಡಂಕೂರು ಪ್ರದೇಶಕ್ಕೆ ತ್ಯಾಜ್ಯ , ಹಾಗೂ ರಾಸಾಯನಿಕ ಯುಕ್ತ ಮಲಿನ ನೀರಿನದ್ದೇ ಶಾಪ ತಟ್ಟಿದೆ. ಕಳೆದ 10 ವರ್ಷಗಳಿಂದ ಇಲ್ಲಿನ ಜನರು ಈ ?ನೇಕ ಆರೋಗ್ಯದ ಸಮಸ್ಯೆಗೆ ತುತ್ತಾಗಿದ್ದಾರೆ.ಉಡುಪಿಯ ಕೊಡಂಕೂರಿನಿಂದ ತೋಡಿನ ಮೂಲಕ ಹರಿಯುತ್ತಿರುವ ಈ ವಿಷಯುಕ್ತ ನೀರು ಮಲ್ಪೆಗೆ ಸೇರುತ್ತಿದೆ.ಈ ಮೂಲಕ ಅನೇಕ ವಾರ್ಡ್ ನ ಸಾವಿರಾರು ಕುಟುಂಬಗಳಲ್ಲಿ ಮಾರಣಾಂತಿಕ ಕಾಯಿಲೆ ಹೊತ್ತು ತರುತ್ತಿದೆ. ಉಡುಪಿಯ ಸಾಯಿಬಾಬಾ ನಗರದಲ್ಲ್‍ಂತು ಸಮಸ್ಯೆ ಉಲ್ಬವಿಸಿದೆ. ಇಲ್ಲಿನ ನೂರಾರು ಕುಟುಂಬಗಳು ಅತಂತ್ರದಲ್ಲಿದ್ದು ಇಲ್ಲಿನ ಪ್ರಸಿದ್ದ ದೇವಸ್ಥಾನ, ದೈವ ಸ್ಥಾನಕ್ಕೆ ಬರುವ ಭಕ್ತರಂತು ಈ ತ್ಯಾಜ್ಯ ನೀರಿನ ಸಮಸ್ಯೆಯಿಂದ ತೊಂದರೆಗೆ ಈಡಾಗಿದ್ದಾರೆ.

ಕಳೆದ 10 ವರ್ಶಗಳ ಸಮಸ್ಯೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಇಲ್ಲಿನ ಸ್ಥಳೀಯರು, ಅನೇಕ ಸಂಘಟನೆಗಳು ಈ ಬಗ್ಗೆ ಹೋರಾಟ ನಡೆಸಿದ್ದರೂ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿ ತೆರಳಿದ್ದಾರೆ ಬಿಟ್ಟರೆ ಶಾಸ್ವತ ಮುಕ್ತಿ ಸಿಕ್ಕಿಲ್ಲ. ಇದೀಗ ಮಾಸ್ ಇಂಡಿಯಾ ಆರ್ಗನೈಜೇಶನ್ ಸಂಘಟನೆ ಈ ಬಗ್ಗೆ ಹೋರಾಟಕ್ಕೆ ಇಳಿದಿದೆ. ಇಲ್ಲಿನ ಸ್ಥಳೀಯರ ಬಾವಿ ನೀರು ಹಾಳಾಗಿದ್ದು ಮಾತ್ರವಲ್ಲದೇ ಅನೇಕ ಮಾರಕ ರೋಗಗಳ ಆಶ್ರಯತಾಣವಾಗಿರುವ ಈ ತ್ಯಾಜ್ಯ ನೀರು ಮುಕ್ತಿ ನೀಡಬೇಕೆಂಬ ಹಿನ್ನಲೆಯಲ್ಲಿ ನಗರಸಭೆ, ಜಿಲ್ಲಾಡಳಿತದ ವಿರುದ್ದ ಹೋರಾಟಕ್ಕೆ ಇಳಿದಿದೆ. ತಕ್ಷಣ ವಿಷಯುಕ್ತ ನೀರಿಗೆ ಮುಕ್ತಿ ನೀಡಬೇಕೆಂದು ಆಗ್ರಹಿಸಿದೆ.

ಒಟ್ಟಿನಲ್ಲಿ ಕೊಡಂಕೂರಿನ ಜನರು ತ್ಯಾಜ್ಯ ನೀರಿನಿಂದ ಬಳಲುತ್ತಿದ್ದಾರೆ.ಈಗಾಗಲೇ ಅನೇಕರು ಮಾರಕ ರೋಗಗಳೀಂದ ಆಸ್ಪತ್ರೆಯ ದಾಖಲಾಗಿದ್ದಾರೆ. ನೀರು ಹರಿಯುವ ತೋಡಿನ ಹೂಳೆತ್ತದಿರುವು ಸಮಸ್ಯೆ ಉಲ್ಬಣಿಸಲು ಕಾರಣವಾಗಿದೆ. ಹೂಳೆತ್ತುವುದು ಸೇರಿದಂತೆ ರಾಸಾಯನಿಕ ನೀರಿನ ಹರಿವಿಗೆ ಮುಕ್ತಿ ನೀಡುವತ್ತ ಅಧಿಕಾರಿಗಳು ಸ್ಪಂದಿಸಬೇಕಾಗಿದೆ.

Related posts

Leave a Reply

Your email address will not be published. Required fields are marked *