Header Ads
Header Ads
Header Ads
Breaking News

ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನ ವಾರ್ಷಿಕ ಕ್ರೀಡಾಕೂಟ

ಉಡುಪಿ ಮಿಶನ್ ಕಂಪೌಂಡ್ ಬಳಿಯ ಕ್ರಿಶ್ಚಿಯನ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟ ಕ್ರಿಶ್ಚಿಯನ್ ಪಿಯು ಮೈದಾನದಲ್ಲಿ ನಡೆಯಿತು. ಕ್ರೀಡಾಕೂಟದ ಅಂಗವಾಗಿ ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಆಕ?ಕ ಪಥ ಸಂಚಲನ ನಡೆಯಿತು. ಪಥ ಸಂಚಲನಾರ್ಥಿಗಳ ಗೌರವ ವಂದನೆಯನ್ನು ಕ್ರಿಶ್ಚಿಯನ್ ಹೈಸ್ಕೂಲಿನ ಹಳೆ ವಿದ್ಯಾರ್ಥಿ ಹಾಗೂ ಉದ್ಯಮಿ ದಿನೇಶ್ ಪುತ್ರನ್ ಸ್ವೀಕರಿಸಿದರು. ಕ್ರೀಡಾಕೂಟದ ಪ್ರತಿಜ್ಞಾ ವಿಧಿ ಸ್ವೀಕಾರ ನಡೆಯಿತು. ಕ್ರೀಡಾಕೂಟದ ದ್ವಜಾರೋಹಣ ಕಾರ್ಯಕ್ರಮವನ್ನ ರೆವೆರಂಡ್ ಐವನ್ ಸೋನ್ಸ್ ನೆರವೇರಿಸಿದರು. ಬಳಿಕ ಗಣ್ಯರು ಬೆಲೂನು ಹಾರಿ ಬಿಡುವ ಮೂಲಕ ವಿದ್ಯುತ್ತಕವಾಗಿ ಕ್ರೀಡಾಕೂಟಕ್ಕೆ ಚಾಲನೆ ನಿಡಲಾಯಿತು. ಉದ್ಯಮಿ ದಿನೇಶ್ ಪುತ್ರನ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಮಾರಂಭದ ಅದ್ಯಕ್ಷತೆ ವಹಿಸಿದ್ರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಡಗಬೆಟ್ಟು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಿದರು. ಸಮಾರಂಭದಲ್ಲಿ ಶಾಲಾ ಸಂಚಾಲಕ ಸ್ಟಿಫನ್ ಕರ್ಕಡ, ಸಿ.ಎಸ್.ಐ ಚರ್ಚ್ ನ ಸಭಾ ಪಾಲಕ ರೆವರೆಂಡ್ ಕಿಶೋರ್, ಕ್ರಿಶ್ಚಿನ್ ಹೈಸ್ಕೂಲ್ ನ ಮುಖ್ಯೋಪದ್ಯಾಯಿನಿ ಹೆಲೆನ್ ಸಾಲಿನ್ಸ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *