Header Ads
Breaking News

ಉಡುಪಿಯ ಮಣಿಪಾಲದಲ್ಲಿ ಬಾಯ್ತೆರೆದ ರಸ್ತೆ : ಸೂಕ್ತ ಕ್ರಮಕ್ಕೆ ಸ್ಥಳೀಯರ ಆಗ್ರಹ

ಇದು ಮಣಿಪಾಲದ ಪ್ರತೀ ವರ್ಷದ ಗೋಳು.. ಈ ಗೋಳು ಈ ಬಾರಿಯೂ ತಪ್ಪಿಲ್ಲ. ಅಧಿಕಾರಿಗಳ ನಿಧಾನಗತಿಯ ಕಾಮಗಾರಿ ವಾಹನ ಸವಾರರನ್ನು ಸಂಕಷ್ಟಕ್ಕೆ ದೂಡುತ್ತಿದೆ. ತುರ್ತು ಸ್ಪಂದನೆ ಅಗತ್ಯವಾಗಿ ಬೇಕಾಗಿದೆ.
ಇದು ಮಣಿಪಾಲದ ಷೋಸ್ಟ್ ಆಫೀಸ್ ಬಳಿಯ ರಸ್ತೆಯ ದುಸ್ಥಿತಿ. ಈ ರಸ್ತೆ ಅಲೆವೂರು, ಮಣಿಪಾಲ ಕೈಗಾರಿಕಾ ಪ್ರದೇಶ, ಹೀಗೆ ಹಲವು ರಸ್ತೆಗಳನ್ನು ಸಂದಿಸುತ್ತದೆ. ಪ್ರತೀ ವರ್ಷ ಮಳೆ ಬಂದಾಗ ಈ ರಸ್ತೆ ಬಾಯ್ತೆರೆದು ಅಪಾಯಕ್ಕೆ ಆಹ್ವಾನ ನೀಡುತ್ತದೆ. ಈ ಬಾರಿಯೂ ಇಂತಹ ಅಪಾಯ ತಪ್ಪಿಲ್ಲ. ರಸ್ತೆಯ ಎರಡೂ ಕಡೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿದ್ದು ದ್ವಿಚಕ್ರವಾಹನ ಸವಾರರಂತೂ ಇಲ್ಲಿ ಸಾಗಲು ಹರಸಾಹಸ ಪಡಬೇಕು. ಈ ಬಾರಿ ಈ ರಸ್ತೆಯ ಅಗಲೀಕರಣಕ್ಕೆ ಟೆಂಡರ್ ಕಾರ್ಯ ಮುಗಿದಿದೆ. ಅಧಿಕಾರಿಗಳು ಹದಿನೈದು ದಿನದ ಒಳಗೆ ಕಾರ್ಮಗಾರಿ ಆರಂಭಿಸುವ ಸೂಚನೆ ನಿಡಿದ್ದಾರೆ. ಮಳೆ ನಿಂತ ಬಳಿಕ ಈ ಕಾಮಗಾರಿ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದು, ಸಾರ್ವಜನಿಕರಲ್ಲಿ ಆಶಾಭಾವನೆ ಮೂಡಿಸಿದೆಯಾದರೂ ಮಳೆ ಯಾವಾಗ ನಿಲ್ಲುತ್ತೆ ಇವರು ಯಾವಾಗ ಕಾಮಗಾರಿ ಆರಂಭಿಸುತ್ತಾರೆ ಎಂಬುವುದು ಸ್ಪಷ್ಟವಾಗಿ ತಿಳಿದಿಲ್ಲ. ಅಲ್ಲಿಯವರೆಗಾದರೂ ತಾತ್ಕಾಲಿಕ ಪರಿಹಾರದ ರೂಪದಲ್ಲಿ ಹೊಂಡ ಮುಚ್ಚುವ ಕಾರ್ಯ ನಡೆಯಲಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದ್ದು ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *