Header Ads
Header Ads
Breaking News

ಉಡುಪಿ ಕೆ.ಜಿ. ರೋಡ್‌ನಲ್ಲಿ ಭೀಕರ ಅಪಘಾತ : ಟಿಪ್ಪರ್‌ನಡಿ ಸಿಲುಕಿದ ಮೂವರು, ಓರ್ವ ಸ್ಥಳದಲ್ಲೇ ಮೃತ್ಯು!

ಉಡುಪಿಯ ರಾಷ್ಟ್ರೀಯ ಹೆದ್ದಾರಿ ೬೬ರ ಕೆ.ಜಿ ರೋಡ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಡಿವೈಡರ್‌ಗೆ ಡಿಕ್ಕಿಯಾದ ಟಿಪ್ಪರ್‌ವೊಂದು ಪಲ್ಟಿಯಾಗಿ ಬಿದ್ದಿದೆ. ಪಲ್ಟಿಯಾದ ರಭಸಕ್ಕೆ ಅದರಲ್ಲಿದ್ದ ಮೂವರು ಟಿಪ್ಪರ್ ಅಡಿಗೆ ಸಿಲುಕಿಕೊಂಡಿದ್ದು ಒಬ್ಬರು ಸ್ಥಳದಲ್ಲೇ ಸಾವನಪ್ಪಿದರೆ ಮತ್ತೊಬ್ಬರು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.

ಅದೃಷ್ಟವಶಾತ್ ಒಬ್ಬರು ಬಚಾವಾಗಿದ್ದಾರೆ. ಭಟ್ಕಳದ ಕುಮಾರ್ ಹಾಗೂ ಕುಂದಾಪುರದ ನಾಗರಾಜ್ ಗಾಣಿಗ ಸಾವನಪ್ಪಿದ್ದು ರಾಘವೇಂದ್ರ ಎನ್ನುವವರು ಬದುಕಿ ಉಳಿದಿದ್ದಾರೆ. ಅಪಘಾತವಾದ ತಕ್ಷಣ ಸ್ಥಳೀಯರು ಟಿಪ್ಪರ್ ಅಡಿ ಸಿಲುಕಿದ್ದವರನ್ನು ಬಚಾವ್ ಮಾಡಲು ಹರಸಾಹಸಪಟ್ಟರು. ಸ್ಥಳಕ್ಕೆ ಧಾವಿಸಿದ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಟಿಪ್ಪರ್ ಅಡಿ ಸಿಲುಕಿದವರ ರಕ್ಷಣೆಗೆ ಧಾವಿಸಿದರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply

Your email address will not be published. Required fields are marked *