Header Ads
Header Ads
Header Ads
Header Ads
Header Ads
Header Ads
Breaking News

ಉಡುಪಿಯ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ “ಇಂಪ್ರೆಶನ್-2019” ಕಲಾ ಪ್ರದರ್ಶನ

ಚಿತ್ರ ಕಲಾ ಮಂದಿರ ಕಲಾ ವಿದ್ಯಾಲಯ ಜಂಗಮ ಮಠ ಉಡುಪಿ ಇದರ ಆಶ್ರಯದಲ್ಲಿ ಹಮ್ಮಿಕೊಂಡ ಕಲಾ ಪ್ರದರ್ಶನ “ಇಂಪ್ರೆಶನ್-2019” ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ಉದ್ಘಾಟನೆಗೊಂಡಿತು. ದೀಪ ಬೆಳಗಿಸುವ ಮೂಲಕ ಅಂಕಣ ಬರಹಗಾರ ಹಾಗೂ ಚಿತ್ರಕಲಾ ಶಿಕ್ಷಕ ದಿನ ಮಣಿ ಶಾಸ್ತ್ರೀ ಕಲಾ ಪ್ರದರ್ಶನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಯಾವುದೇ ದೇಶದ ಶ್ರೀಮಂತಿಕೆಯನ್ನು ಅಳೆಯುವುದು ಆರ್ಥಿಕತೆಯಿಂದಲ್ಲ. ಬದಲಾಗಿ ಅಲ್ಲಿನ ಕಲೆ ಮತ್ತು ಸಂಸ್ಕೃತಿಯಿಂದ. ಕಲೆ ಮತ್ತು ಸಂಸ್ಕೃತಿ ಮಾನವನ ಬದುಕಲ್ಲಿ ಹಾಸು ಹೊಕ್ಕಾಗ ಮಾತ್ರ ಆ ದೇಶದ ಸಂಸ್ಕೃತಿ ಪ್ರತಿಬಿಂಬಿತವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು. ಸಮಾರಂಭದಲ್ಲಿ ಎಂ.ಐ.ಸಿ.ಎ ಯ ಆಡ್ಮಿನಿಸ್ಟ್ರೇಟರ್ ಗಾಯತ್ರಿ ಉಪಾದ್ಯಾಯ, ಚಿತ್ರಕಾಲ ಮಂದಿರದ ನಿರ್ದೇಶಕ ಯು.ಸಿ ನಿರಂಜನ್, ರಾಜೇಂದ್ರ ತ್ರಾಸಿ ಮುಂತಾದವರು ಉಪಸ್ಥಿತರಿದ್ದರು. ಬಳಿಕ ಕಲಾವಿದರ ವರ್ಣ ಚಿತ್ರ ಪ್ರಾತ್ಯಾಕ್ಷಿಕೆ ನಡೆಯಿತು. ಸೆ.22ರತನಕ ಈ ಕಲಾ ಪ್ರದರ್ಶನ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದೆ.

Related posts

Leave a Reply

Your email address will not be published. Required fields are marked *