Header Ads
Header Ads
Breaking News

ಉಡುಪಿ : ಅಕಾಲಿಕವಾಗಿ ಸಾವನ್ನಪ್ಪಿದ ಪತ್ರಕರ್ತ ನಾಗೇಶ್ ಪಡುಗೆ ಶ್ರದ್ಧಾಂಜಲಿ

ಖಾಸಗಿ ಚಾನಲ್‌ನಲ್ಲಿ ವಿಡಿಯೋ ಜರ್ನಲಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬಂಟ್ವಾಳ ಮೂಲದ ನಾಗೇಶ್ ಪಡು ಅವರು ಇತ್ತೀಚೆಗೆ ಮಹಾಮಾರಿ ಡೆಂಗ್ಯೂಗೆ ಬಲಿಯಾಗಿದ್ದು ಅವರಿಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್ ಕ್ಲಬ್ ವತಿಯಿಂದ ನುಡಿನಮನ ಮತ್ತು ಶ್ರದ್ಧಾಂಜಲಿ ಸಭೆಯನ್ನು ನಡೆಸಲಾಯಿತು.

ಹಿರಿಯ ಪತ್ರಕರ್ತರಾದ ಜಯಕರ್ ಸುವರ್ಣ,ಶಶಿಧರ್ ಮಾಸ್ತಿಬೈಲು,ಹರೀಶ್ ಪಾಲೆಚ್ಚಾರ್,ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೆಲು ಮತ್ತಿತರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಾಗೇಶ್ ಪಡು ಅವರ ಒಡನಾಡಿಯಾಗಿದ್ದ ಅನೀಶ್ ಡಿಸೋಜ, ನಾಗೇಶ್ ಅವರದ್ದು ನಗುಮುಖದ ವ್ಯಕ್ತಿತ್ವ, ಸದಾ ಹಸನ್ಮುಖಿಯಗಿದ್ದವರು ಸದಾ ಇನ್ನೊಬ್ಬರ ನೋವಿಗೆ ಸ್ಪಂದಿಸುವ ವ್ಯಕ್ತಿತ್ವದವರು ಇಂದು ನಮ್ಮೆಲ್ಲರನ್ನು ಅಗಲಿದ್ದಾರೆ ಇದು ಬಹಳ ಬೇಸರದ ವಿಷಯ ಎಂದರು.

ಮಾದ್ಯಮದವರು ತಮ್ಮ ಜೀವನಕ್ಕೆ ಭದ್ರತೆಯನ್ನು ಮಾಡಿಕೊಳ್ಳುವುದು ಮುಖ್ಯ. ತಮ್ಮ ಜೀವನಕ್ಕಾಗಿ ಯೋಚಿಸಿ, ಎಲ್ಲರೊಂದಿಗೆ ಸ್ನೇಹ ಜೀವಿಯಾಗಿದ್ದ ಆತನ ಒಡನಾಟವೆಷ್ಟಿತ್ತೆಂದು ಅಂತಿಮ ದರ್ಶನದಂದು ಸೇರಿದ ಜನರನ್ನು ನೋಡಿ ತಿಳಿಯಬಹುದು ಪ್ರೀತಿ, ನಗುಮುಖವನ್ನು ಮರೆಯಲು ಅಸಾದ್ಯ ವೆಂದರು.

ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಶ್ ಸರಳೇಬೆಟ್ಟು, ಸಹ ಕಾರ್ಯದರ್ಶಿ ಮೈಕಲ್ ರೋಡ್ರಿಗಸ್,ಕೋಶಾಧಿಕಾರಿ ದಿವಾಕರ್ ಹಿರಿಯಡ್ಕ ಮತ್ತು ಎಲ್ಲಾ ಹಿರಿಯ ಮತ್ತು ಕಿರಿಯ ಪತ್ರಕರ್ತರು ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ, ಒಂದು ನಿಮಿಷದ ಮೌನಾಚರಣೆಯನ್ನು ನಡೆಸಿದರು.

Related posts

Leave a Reply

Your email address will not be published. Required fields are marked *