Header Ads
Breaking News

ಉಡುಪಿ: ಅಪರಿಚಿತ ಮಾನಸಿಕವ್ಯಾಧಿ ಬಾಧಿತ ವ್ಯಕ್ತಿಯ ರಕ್ಷಣೆ

ನಗರದ ಮುಖ್ಯ ರಸ್ತೆಗಳಲ್ಲಿ ಬೆತ್ತಲಾಗಿ ಸುತ್ತಾಡುತ್ತಿದ್ದ ಅಪರಿಚಿತ ಮಾನಸಿಕ ವ್ಯಾಧಿ ಬಾಧಿತ ವ್ಯಕ್ತಿಯನ್ನು ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು ಜಂಟಿ ಕಾರ್ಯಚರಣೆ ನೆಡೆಸಿ, ವ್ಯಕ್ತಿಯನ್ನು ವಶಕ್ಕೆ ಪಡೆದು, ದೊಡ್ಡಣಗುಡ್ಡೆ ಡಾ.ಎ.ವಿ ಬಾಳಿಗ ಆಸ್ಪತ್ರೆಗೆ ದಾಖಲು ಪಡಿಸಿದ ಘಟನೆ ನಡೆದಿದೆ.

ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಲು ವಾರ್ಡ್ ಇಲ್ಲದ ಕಾರಣದಿಂದ, ಇಲಾಖೆಯ ಸಿಬ್ಭಂದಿ ಸುಧೀಂದ್ರ ಅವರ ಉಪಸ್ಥಿಯಲ್ಲಿ ಡಾ.ಎ.ವಿ ಬಾಳಿಗ ಆಸ್ಪತ್ರೆಗೆ ದಾಖಲುಪಡಿಸಿದ್ದಾರೆ. ಕಾರ್ಯಚರಣೆಯಲ್ಲಿ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ಡೇವಿಡ್ ಬೈಲೂರು, ಸುಧಾಕರ ದೇವಾಡಿಗ, ಶಿವರಾಮ ದಾಸ್ ಭಾಗಿಗಳಾದರು. ಮಾನಸಿಕ ರೋಗಿಯನ್ನು ರಾಜೇಶ್(೪೫ವ) ಮಂಗಳೂರು ಭಾಗದ ವ್ಯಕ್ತಿ ಎಂದು ಶಂಕಿಸಲಾಗಿದೆ. ತುಳು ಕನ್ನಡ ಬಾಷೆ ಬಲ್ಲವನಾಗಿದ್ದಾನೆ. ಕೆಲವು ವರ್ಷಗಳಿಂದ ಉಡುಪಿಯಲ್ಲಿ ಸೆಂಟ್ರೀಂಗ್ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ಎಂದು ಸಾರ್ವಜನಿಕರಿಂದ ತಿಳಿದು ಬಂದಿದೆ. ಸಂಬಂಧಿಕರು ಡಾ.ಎ.ವಿ. ಬಾಳಿಗ ಆಸ್ಪತ್ರೆ, ಅಥವ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಛೇರಿ, ರಜತಾದ್ರಿ ಮಣಿಪಾಲ ಇಲ್ಲಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Related posts

Leave a Reply

Your email address will not be published. Required fields are marked *