Header Ads
Header Ads
Breaking News

ಉಡುಪಿ :ಅಪಾಯವನ್ನು ಆಹ್ವಾನಿಸುತ್ತಿದೆ ಬೈಲೂರು-ಕೊರಂಗ್ರಪಾಡಿ ರಸ್ತೆ. ಕಿರಿದಾದ ರಸ್ತೆಗೆ ಇಲ್ಲ ರಕ್ಷಣಾ ಗೋಡೆ.

ಇದು ಉಡುಪಿ ನಗರದ ಅಪಾಯಕಾರಿ ರಸ್ತೆ . ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ನಗರದ ಸಂಪರ್ಕ ರಸ್ತೆಯಾಗಿರುವ ಉಡುಪಿ-ಬೈಲೂರು-ಕೊರಂಗ್ರಪಾಡಿಯ ರಸ್ತೆ ಇದೀಗ ಅಪಾಯವನ್ನು ಆಹ್ವಾನಿಸುತ್ತಿದೆ. ಈ ಬಗ್ಗೆ ವರದಿ ಇಲ್ಲಿದೆ.ದೇವಸ್ಥಾನ, ಚರ್ಚ್ , ಶಾಲೆ ಹೀಗೆ ಹಲವು ಧಾರ್ಮಿ ಕೇಂದ್ರ, ಶೈಕ್ಷಣಿಕ ಕೇಂದ್ರಕ್ಕೆ ಕೊಂಡಿಯಾಗಿರುವ ರಸ್ತೆಯ ಅವ್ಯವಸ್ಥೆ ಇದು.ಇದು ಯಾವುದೋ ಗ್ರಾಮೀಣ ಭಾಗದ ರಸ್ತೆಯಲ್ಲ ಉಡುಪಿ ನಗರಸಭೆ ವ್ಯಾಪ್ತಿಯ ಉಡುಪಿ ನಗರದ ರಸ್ತೆ. ೭೬ನೇ ಬಡಗಬೆಟ್ಟು ವಾರ್ಡ್ ನ ಬೈಲೂರು ದೇವಸ್ಥಾನದ ಬಳಿಯಿಂದ ಸುಮಾರು ೨೦೦ ಮೀಟರ್ ವ್ಯಾಪ್ತಿಯ ರಸ್ತೆ ಅತ್ಯಂತ ಅಪಾಯಕಾರಿ. ಮೊದಲೇ ಕಿರಿದಾದ ರಸ್ತೆ ,ಆ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳ ಓಡಾಟ ಆಗುತ್ತದೆ.ಅದರಲ್ಲೂ ಬಸ್ಸು, ಲಾರಿ ಸೇರಿದಂತೆ ಘನ ವಾಹನಗಳೂ ಸಂಚರಿಸುತ್ತದೆ. ಇಂತಹ ಸಮಯದಲ್ಲಿ ರಸ್ತೆಯ ಎರಡೂ ಕಡೆ ಮಳೆಯಿಂದ ಹಾನಿಯಾಗಿದ್ದು ಅಪಾಯವನ್ನು ಆಹ್ವಾನಿಸುತ್ತಿದೆ. ಒಂದು ಕಡೆಯಿಂದ ರಸ್ತೆ ಬದಿಯ ಗಿಡಗಂಟಿಗಳನ್ನು ನಗರಸಭೆ ತೆಗೆದಿಲ್ಲ ಇನ್ನೊಂದು ಕಡೆ ಮಳೆಯ ಆವಾಂತರದಿಂದ ರಸ್ತೆಯ ಗಾತ್ರ ಚಿಕ್ಕದಾಗಿದೆ. ದೊಡ್ಡ ವಾಹನಗಳು ಅದರಲ್ಲೂ ಎರಡೂ ಬದಿಯಿಂದ ವಾಹನ್ಗಳು ಬಂದರೆ ಅಪಾಯ ಕಟ್ಟಿಟ್ಟ ಬುತ್ತಿಯಂತಾಗಿದೆ. ಅಂದ ಹಾಗೆ ಈ ರಸ್ತೆಗೆ ತಡೆ ಬೇಡಿ ಆಗಲೀ, ರಕ್ಷಣಾ ಗೋಡೆಯಾಗಲೀ ಇಲ್ಲ. ಒಂದು ವೇಳೆ ಆಯ ತಪ್ಪಿ ಬಿದ್ದರೆ ನೀರು ಹರಿಯುವ ತೋಡಿಗೋ ಅಥಾವಾ ಇನ್ನೊಂದು ಬದಿಯಲ್ಲಿರುವ ಗದ್ದೆಗೋ ಬಿದ್ದು ತೊಂದರೆ ಆಗುವುದು ಖಂಡಿತ.ಅದರಲ್ಲೂ ರಾತ್ರೆಯ ಸಮಯದಲ್ಲಿ ವಾಹನ ಸವಾರರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಈ ರಸ್ತೆಯಲ್ಲಿ ಸಾಗಬೇಕಾದ ಅನಿವಾರ್ಯತೆ ಇದೆ. ಅಂದ ಹಾಗೆ ಈ ರಸ್ತೆ ಅಗಲೀಕರಣಕ್ಕೆ ಬೇಡಿಕೆ ಇದೆ.ಜನರ ಹಲವು ವರ್ಷದ ಬೇಡಿಕೆನೂ ಆಗಿದೆ. ಸರಕಾರದ ಹಂತದಲ್ಲಿ ಈ ರಸ್ತೆ ಅಗಲೀಕರಣದ ಪ್ರಸ್ತಾವನೆ ಇದೆ. ಅದು ಯಾವಗ ಕಾರ್ಯಗತ ಆಗುತ್ತೋ ಗೊತ್ತಿಲ್ಲ ಆದ್ರೆ ಈ ರಸ್ತೆಗೆ ಅಗತ್ಯವಾಗಿ ತುರ್ತಾಗಿ ತಡೆ ಬೇಲಿಯ ರಕ್ಷಣೆ ಒದಗಿಸಬೇಕಾಗಿದೆ. ಇಲ್ಲವಾದರೆ ಕುಸಿದಿರುವ ರಸ್ತೆಯಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.ಮಳೆಯ ಹಿನ್ನಲೆಯಲ್ಲಿ ರಸ್ತೆಯ ಸೌಂದರ್ಯವೇ ಹಾಳಾಗಿದೆ. ಎಲ್ಲಾ ವಾರ್ಡ್ ನಲ್ಲೂ ಸಮಸ್ಯೆಯ ಆಗರವೇ ಇದೆ. ಆದ್ರೆ ನಗರದ ಈ ರಸ್ತೆ ಅತ್ಯಂತ ಅಪಾಯಕಾರಿಯಾಗಿ ಗೋಚರಿಸುತ್ತಿದೆ. ಎಲ್ಲಾ ಪ್ರದೇಶದ ಕೂಡು ಸಂಪರ್ಕವಾದ ಈ ರಸ್ತೆಯ ಬಗ್ಗೆ ನಗರಸಭೆ ಎಚ್ಚೆತುಕೊಳ್ಳಲೇ ಬೇಕಾಗಿದೆ.

Related posts

Leave a Reply