Header Ads
Header Ads
Header Ads
Header Ads
Header Ads
Header Ads
Breaking News

ಉಡುಪಿ ಕಿದಿಯೂರು ಶಿರಿಬೀಡು ನಾಗ ಸನ್ನಿಧಿಯಲ್ಲಿ ನಾಗರಪಂಚಮಿ

ಉಡುಪಿ ಜಿಲ್ಲೆಯ ಕಿದಿಯೂರು ಹೋಟೆಲ್ ಆವರಣದಲ್ಲಿ ನೆಲೆಸಿರುವ ಶ್ರೀ ಕಾರಣಿಕ ನಾಗಸನ್ನಿಧಿಯಲ್ಲಿ 33ನೇ ವರ್ಷದ ನಾಗರಪಂಚಮಿ ಕಾರ್ಯಕ್ರಮವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.

ನಂಬಿದ ಭಕ್ತರಿಗೆ ಇಂಬು ನೀಡುವ ಕಿದಿಯೂರು ಶಿರಿಬೀಡು ನಾಗ ಸನ್ನಿಧಿಯಲ್ಲಿ 33ನೇ ವರ್ಷದ ನಾಗರಪಂಚಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಸುಮಾರು 60 ವರ್ಷಗಳಿಂದ ನಿತ್ಯ ಪೂಜಿಸ್ಪಡುವ ದೇಗುಲವಿದು. ಭಕ್ತರ ಸಮೃದ್ಧಿ, ಸುಭೀಕ್ಷೆಗಾಗಿ ವಿಶೇಷ ನಾಗಾರಾಧನೆ ನಡೆಸುತ್ತಾರೆ. ನಾಗರ ಪಂಚಮಿಯ ದಿನದಂದು ಜ್ಯೋತಿಷರತ್ನ ವಿದ್ವಾನ್ ಕಬಿಯಾಡಿ ಜಯರಾಮಾಚಾರ್ಯರ ನೇತೃತ್ವದಲ್ಲಿ ಕ್ಷೀರ, ನಾಳೀಕೇರ, ಪಂಚಾಮೃತಾದಿ ಅಭಿಷೇಕಗಳೊಂದಿಗೆ ಪ್ರಸನ್ನಪೂಜೆ ವೈಭವೇಪಿತವಾಗಿ ಜರುಗಿತು. ವೇದಮೂರ್ತಿ ಬ್ರಹ್ಮಶ್ರೀ ಬೆಳ್ಚರ್ಪಾಡಿ ರಮಾನಂದ ಭಟ್ಟರಿಂದ ನಾಗರ್ದಶನ ನಡೆಯಿತು. ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತರು ಆಗಮಿಸಿ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದರು.

Related posts

Leave a Reply

Your email address will not be published. Required fields are marked *