Header Ads
Breaking News

ಉಡುಪಿ ಕ್ರೈಸ್ತ ಬಾಂಧವರಿಂದ ಮುಸ್ಲಿಮರಿಗೆ ಈದ್ ಶುಭಾಶಯ

ಮುಸ್ಲಿಂ ಸಮುದಾಯದ ಈದ್-ಉಲ್-ಫಿತ್ರ್ ಹಬ್ಬದ ಪ್ರಯುಕ್ತ ಉಡುಪಿ ಧರ್ಮಪ್ರಾಂತ್ಯದ ಕೆಥೊಲಿಕ್ ಸಭಾ ಪದಾಧಿಕಾರಿಗಳು ಮಸೀದಿಗೆ ತೆರಳಿ ಮುಸ್ಲಿಂ ಭಾಂಧವರೊಂದಿಗೆ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಪದಾಧಿಕಾರಿಗಳು ಉಡುಪಿಯ ಜಾಮೀಯಾ ಮಸೀದಿಗೆ ತೆರಳಿ ಮುಸ್ಲಿಂ ಸಮುದಾಯದ ಧರ್ಮಗುರುಗಳು ಹಾಗೂ ಮುಸ್ಲಿಂ ಬಾಂಧವರೊಂದಿಗೆ ಹಸಿರು ಗಿಡ ನೀಡುವ ಮೂಲಕ ಈದ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಕೊಂಡರು. ಈ ವೇಳೆ ಮಾತನಾಡಿದ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಆಧ್ಯಾತ್ಮಿಕ ನಿರ್ದೇಶಕರಾದ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್ ಭಾರತದಲ್ಲಿ ನಾವೆಲ್ಲಾ ಸದಾ ಸೌಹಾರ್ದತೆಯೀಂದ ಬದುಕುತ್ತಿದ್ದು ಪರಸ್ಪರ ಧರ್ಮಗಳನ್ನು ಅರಿಯುವುದರೊಂದಿಗೆ ಅವರ ಹಬ್ಬದ ಸಮಯದಲ್ಲಿ ತೆರಳಿ ಹಬ್ಬದ ಸಂತೋಷವನ್ನು ಪರಸ್ಪರ ಶುಭ ಹಾರೈಸುವುದರ ಮೂಲಕ ಸೌಹಾರ್ದತೆಯನ್ನು ಕಾಯ್ದುಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದರು.
ಇನ್ನು ಮಸೀದಿಯ ಸದಸ್ಯರಾದ ಮಹಮ್ಮದ್ ಮೌಲಾ ಮಾತನಾಡಿ ಸಹೋದರತೆ, ಸಮಾನತೆಯನ್ನು ಸಮಾಜದಲ್ಲಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಇಂದು ನಮ್ಮ ಕ್ರೈಸ್ತ ಸಮುದಾಯದ ಸಹೋದರರು ಈದ್ ಹಬ್ಬದ ಸಂದರ್ಭದಲ್ಲಿ ಸಂತೋಷವನ್ನು ಪರಸ್ಪರ ಹಂಚಿಕೊಂಡಿದ್ದಾರೆ. ಈ ಮೂಲಕ ನಮ್ಮ ದೇಶದಲ್ಲಿ ಮತ್ತು ಜಗತ್ತಿನಲ್ಲಿ ಭಯೊತ್ಪಾದನೆ ಅಳಿದು ಸೌಹಾರ್ದಯುತ ಸಮಾಜ ರೂಪುಗಳ್ಳಲಿ ಎಂದರು.
ಈ ವೇಳೆ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಆಧ್ಯಾತ್ಮಿಕ ನಿರ್ದೇಶಕರಾದ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್ ಮಸೀದಿಯ ಧರ್ಮಗುರುಗಳಾದ ಮೌಲಾನಾ ರಶೀದ್ ಅಹ್ಮದ್ ನದ್ವಿಯವರಿಗೆ ಕ್ರೈಸ್ತ ಸಮುದಾಯದ ಪರವಾಗಿ ಸನ್ಮಾನಿಸಿದರು. ಮುಸ್ಲಿಂ ಬಂಧುಗಳು ಕ್ರೈಸ್ತ ನಾಯಕರಿಗೆ ಸಿಹಿ ಹಂಚಿ ಹಬ್ಬದ ಶುಭಾಶಯ ಕೋರಿದರು. ಈ ವೇಳೆ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್, ಕಾರ್ಯದರ್ಶಿ ಸಂತೋಷ್ ಕರ್ನೆಲಿಯೊ, ಸಹಕಾರ್ಯದರ್ಶಿ ಗ್ರೆಗೋರಿ ಡಿಸೋಜಾ, ಮಾಜಿ ಅಧ್ಯಕ್ಷರಾದ ಎಲ್ ರೋಯ್ ಕಿರಣ್ ಕ್ರಾಸ್ತಾ,ವಲೇರಿಯನ್ ಫೆನಾಂಡಿಸ್, ಪದಾಧಿಕಾರಿಗಳಾದ ರಫಾಯಲ್ ಡಿಸೋಜಾ, ಜೆರಾಲ್ಡ್ ರೊಡ್ರಿಗಸ್, ಜಾಮೀಯಾ ಮಸೀದಯ ಅಧ್ಯಕ್ಷರಾದ ಸೈಯ್ಯದ್ ಯಾಸೀನ್, ಕಾರ್ಯದರ್ಶಿ ಖಲೀಲ್ ಅಹ್ಮದ್, ಸದಸ್ಯರಾದ ಮುನೀರ್ ಅಹಮ್ಮದ್, ವಿಎಸ್ ಉಮರ್, ಅಶ್ಫಾಕ್ ಅಹಮ್ಮದ್, ಶಾಹಿದ್ ಆಲಿ, ಮಹಮ್ಮದ್ ಮರಕಡ ಮತ್ತು ಖಾಲಿದ್ ಹಾಗೂ ಇತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *