Header Ads
Breaking News

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಶ್ರೀರಾಮುಲು ವಾಸ್ತವ್ಯ : ರೋಗಿಗಳ ಜೊತೆಗೆ ಕೆಲಕಾಲ ಸಮಾಲೋಚನೆ

ಆರೋಗ್ಯ ಸಚಿವ ಶ್ರೀರಾಮಲು ಅವರ ಆಸ್ಪತ್ರೆ ವಾಸ್ತವ್ಯ ಉಡುಪಿಯಲ್ಲೂ ಮುಂದುವರೆದಿದೆ. ಈಗಾಗಲೇ ಎರಡು ಜಿಲ್ಲೆ ಪೂರೈಸಿರುವ ಆಸ್ಪತ್ರೆ ವಾಸ್ತವ್ಯವನ್ನು ಉಡುಪಿಯಲ್ಲೂ ನಡೆಸಿದ್ದು ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಆಸ್ಪತ್ರೆ ವಾಸ್ತ್ಯವ್ಯದ ಮೂಲಕ ಅಲ್ಲಿನ ವ್ಯವಸ್ಥೆಗಳನ್ನು ಗಮನಿಸಿದರು.

ಜಿಲ್ಲೆಯಾಗಿ 22 ವರ್ಷ ಕಳೆದರೂ ಸಹ ಇನ್ನೂ ತಾಲೂಕು ಆಸ್ಪತ್ರೆಯಾಗಿಯೇ ಉಳಿದಿರುವ ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಸಚಿವ ಶ್ರೀರಾಮಲು ವಾಸ್ತವ್ಯ ಹೂಡಿದರು.ಎಮರ್ಜೆನ್ಸಿ ವಾರ್ಡ್ ಬಳಿಯ ವೈದ್ಯರ ಕೊಠಡಿಯಲ್ಲಿ ಸಚಿವರ ವಾಸ್ತವ್ಯ ಮಾಡಿದ್ದು ಇದಕ್ಕೂ ಮೊದಲು ಆಸ್ಪತ್ರೆಯನ್ನ ಸುತ್ತಿ ಹಲವು ರೋಗಿಗಳ ಆರೋಗ್ಯ ವಿಚಾರಿಸಿದರು. ಈಗಾಗಲೇ 250 ಬೆಡ್ ಗಳ ಆಸ್ಪತ್ರೆ ಮಾಡುವುದಾಗಿ ಭರವಸೆ ನಿಡಿರುವ ಆರೋಗ್ಯ ಸಚಿವ ಶ್ರೀರಾಮಲು ಮೇಲೆ ಅನೇಕ ನಿರೀಕ್ಷೆಗಳಿವೆ. ವಾಸ್ತವ್ಯಕ್ಕೂ ಮೊದಲು ಪ್ರವಾಸಿ ಮಂದಿರದಲ್ಲಿ ಪ್ರವಾಸದ ಬಗ್ಗೆ ಮಾಹಿತಿ ನೀಡಿದರು. ಮಾತ್ರವಲ್ಲದೇ ಜಿಲ್ಲಾ ಆಸ್ಪತ್ರೆಯನ್ನು 250 ಬೆಡ್ ಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಹಣಕಾಸು ಇಲಾಖೆಯ ಅನುಮತಿ ಪಡೆದು ಕ್ಯಾಬಿನೆಟ್ ಅನುಮೋದನೆ ಪಡೆಯುತ್ತೇನೆ. ಇದು ನನ್ನ ಮೊದಲ ಆದ್ಯತೆ ಎಂದು ಹೇಳಿದ ಶ್ರೀರಾಮಲು ಇದರ ಜೊತೆಗೆ ವೈದ್ಯರ ಹಾಗೂ ಸಿಬ್ಬಂದಿಗಳ ಕೊರತೆಗೂ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

Related posts

Leave a Reply

Your email address will not be published. Required fields are marked *