Header Ads
Breaking News

ಉಡುಪಿ ಜಿಲ್ಲಾ ಗಡಿಭಾಗ ಸೀಲ್‍ಡೌನ್ ಹಿನ್ನೆಲೆ : ಜಿಲ್ಲಾಡಳಿತದ ಆದೇಶಕ್ಕೆ ಬೆಲೆ ಕೊಡದ ಬೀದಿ ಬದಿ ವ್ಯಾಪಾರಸ್ಥರು

ಉಡುಪಿ ಜಿಲ್ಲಾ ಗಡಿಭಾಗ ಸೀಲ್ ಡೌನ್ ಮಾಡಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ವಾರದ ಸಂತೆಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದರೂ ಪಡುಬಿದ್ರಿಯಲ್ಲಿ ಬಹುತೇಕ ವ್ಯಾಪಾರಿಗಳು ಬೀದಿ ಬದಿಯಲ್ಲಿ ವ್ಯಾಪಾರ ನಡೆಸುವ ಮೂಲಕ ಜಿಲ್ಲಾಧಿಕಾರಿಗಳ ಆದೇಶವನ್ನು ಧಿಕ್ಕರಿಸಿದ್ದಾರೆ.

ಗ್ರಾ.ಪಂ.ನಿನ್ನೆಯಷ್ಟೇ  ವಾರದ ಸಂತೆ ನಡೆಸದಂತೆ ಬ್ಯಾನರ್ ಅಳವಡಿಸಿದ್ದು, ಮಾಹಿತಿ ಇಲ್ಲದ ವ್ಯಾಪಾರಿಗಳು ಆಗಮಿಸಿ ವ್ಯಾಪಾರ ನಡೆಸುತ್ತಿದ್ದರು. ಜಿಲ್ಲಾಧಿಕಾರಿಗಳ ಆದೇಶ ಇದ್ದ ಕಾರಣ ಪಡುಬಿದ್ರಿ ಪೋಲಿಸರು ಅಂಗಡಿ ಮುಗ್ಗಟ್ಟುಗಳನ್ನು ತೆರವುಗೊಳಿಸಲು ಸೂಚನೆ ನೀಡಿದರಾದರೂ ಕೆಲವೊಂದು ವ್ಯಾಪಾರಿಗಳು ವ್ಯಾಪಾರ ನಡೆಸದೆ ಮರಳಿದರೆ, ಬಹಳಷ್ಟು ಮಂದಿ ಮಾರುಕಟ್ಟೆ ರಸ್ತೆಯ ಅಂಚಿನಲ್ಲೇ ವ್ಯಾಪಾರ ಮುಂದುವರಿಸಿದ್ದರು. ಯಾವುದೇ ಸಾಮಾಜಿಕ ಅಂತರವಿಲ್ಲದೆ ವ್ಯಾಪಾರ ನಡೆಸುತ್ತಿರುವುದು ಕಂಡು ಬಂದಿದೆ.

Related posts

Leave a Reply

Your email address will not be published. Required fields are marked *