Header Ads
Breaking News

ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ವಿಶ್ವ ಪರಿಸರ ದಿನಾಚರಣೆ

ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಾಲು ಗಿಡಗಳ ನೆಡುವ ಕಾರ್ಯಕ್ರಮವು ಬೈಲಕೆರೆ ವಾರ್ಡಿನ ಶಾರದನಗರದಲ್ಲಿ ನಡೆಯಿತು.

ಭಾರತ ದೇಶದಲ್ಲಿ ನಾಗರಿಕ ಸಮಾಜ, ಹಾಗೂ ಸಕಲ ಜೀವರಾಶಿಗಳು ಸ್ವಸ್ಥ ಜೀವನ ಸಾಗಿಸಲು, 33% ಶೇ ಅರಣ್ಯ ಭೂಮಿಯ ಅತಿ ಅವಶ್ಯಕತೆ ಇದೆ. ಆದರೆ ಜನಸಂಖ್ಯೆ ಹೆಚ್ಚಳ, ಅಭಿವೃದ್ಧಿ ಕಾರ್ಯಗಳು, ಅರಣ್ಯನಾಶ, ಪ್ರಕೃತಿಯ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ ಹೀಗೆ ಮೊದಲಾದ ಕಾರಣಗಳಿಂದ, ಇವಾಗ ದೇಶದಲ್ಲಿ 22% ಶೇ ಅರಣ್ಯ ಭೂಮಿ ಉಳಿದುಕೊಂಡಿದೆ. ಹಾಗಾಗಿ ಪರಿಸರ ರಕ್ಷಿಸುವ ಸಾಮಾಜಿಕ ಹೊಣೆಗಾರಿಕೆ ಪ್ರತಿಯೊರ್ವ ನಾಗರಿಕನಿಗೆ ಇರಬೇಕೆಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉಪ ವಲಯ ಅರಣ್ಯಾಧಿಕಾರಿ ಸುರೇಶ್ ಗಾಣಿಗ ಅವರು ಹೇಳಿದರು. ಕಾರ್ಯಕ್ರಮದಲ್ಲಿ ಅರಣ್ಯರಕ್ಷಕ ಕೇಶವಪೂಜಾರಿ, ನಗರಸಭೆ ಸದಸ್ಯ ಗಿರೀಶ್ ಅಂಚನ್, ಉಮೇಶ್ ಬೈಲೂರು, ಮಂಜುನಾಥ್ ಹೆಬ್ಬಾರ್, ಶೇಖ್ ಇಸ್ಮಾಯಿಲ್, ಸಾಮಾಜಿಕ ಕಾರ್ಯಕರ್ತ ರಾಧಕೃಷ್ಣ ಮೆಂಡನ್, ಲಯನ್ ಹರೀಶ್ ಪೂಜಾರಿ, ಸಮಿತಿಯ ಪ್ರಮುಖರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ಆಶಾಕಾರ್ಯಕರ್ತೆ ಉಮಾ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *